ಎನ್ಎಸ್ಎಸ್ ಅರಿವು ನೀಡುವ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ 15: ಗ್ರಾಮೀಣ ಪ್ರದೇಶಗಳಲ್ಲಿ ಎನ್.ಎಸ್.ಎಸ್ ಯೋಜನೆಗಳು ಬಂದು ಎಲ್ಲ ವಿಷಯಗಳ ಬಗ್ಗೆ ಗ್ರಾಮೀಣ ಪ್ರದೇಶದ ಜನರಿಗೆ ಅರಿವು ನೀಡುವ ಕಾರ್ಯಕ್ರಮ ವಿಶೇಷ ಹಾಗೂ ಉಪಯುಕ್ತವಾಗಿದೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ತಾಲೂಕಿನ ಗಂಜೀಗಟ್ಟಿ ಗ್ರಾಮದಲ್ಲಿ ಎಸ್.ಆರ್.ಜೆ.ವ್ಹಿ.ಜಿ ಪ ಪೂರ್ವ ಕಾಲೇಜಿನ ಎನ್.ಎಸ್.ಎಸ್ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ದೇಶದಲ್ಲಿ ಎನ್.ಎಸ್.ಎಸ್ ಯೋಜನೆಯಿಂದ ಅನೇಕ ಗ್ರಾಮಗಳ ಅಭಿವೃದ್ಧಿ ಆಗಿದೆ ಎಂದು ಅಂಕಿಅಂಶಗಳು ಹೇಳುತ್ತವೆ ಅಲ್ಲದೇ ಗ್ರಾಮೀಣ ಪ್ರದೇಶಗಳ ಜನರಲ್ಲಿ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮ ಅವಶ್ಯವಾಗಿವೆ ಎಂದರು.
ಪೋಲಿಸ ಅಧಿಕಾರಿ ಎಸ್.ಎಸ್.ಮಾಳಗೊಂಡ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಎನ್.ಎಸ್.ಎಸ್ ಹಾಗೂ ಇತರ ಸಂಘ ಸಂಸ್ಥೆಗಳ ಮೂಲಕ ಅನೇಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವುದರಿಂದ ನಮ್ಮ ಇಲಾಖೆಗೆ ತುಂಬ ಉಪಯುಕ್ತವಾಗಿದೆ ಎಂದರು.
ಸಾನಿಧ್ಯವಹಿಸಿ ಡಾ. ವೈಜನಾಥ ಶಿವಲಿಂಗೇಶ್ವರ ಶಿವಾರ್ಚಾಯರು ಆರ್ಶಿವದಿಸಿ ಮಾತನಾಡಿದ ಅವರು ಗ್ರಾಮಗಳ ಸವಾರ್ಂಗೀಣ ಅಭಿವೃದ್ಧಿಗೆ ರಾಷ್ಟ್ರೀಯ ಸೇವಾ ಯೋಜನೆ ಬಹಳ ಉಪಯುಕ್ತವಾಗಿದೆ ಆದರೆ ಅದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದರು.
ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಎಸ್.ಎಸ್.ಪೂಜಾರ ಮಾತನಾಡಿ 10 ದಿನಗಳ ಕಾಲ ಈ ವಿಶೇಷ ಯೋಜನೆಗೆ ಯಶಸ್ವಿಯಾಗಲು ನಮಗೆ ನಿರಂತರವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಸಲ್ಲಿಸಿದರು.
ಅಧ್ಯಕ್ಷತೆ ಕಲ್ಲಪ್ಪ ಮಾರನಬೀಡ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶಿವಪ್ಪ ಚ ಮಂತ್ರೋಡಿ, ಶಂಕ್ರಣ್ಣ ಮಂತ್ರೋಡಿ ಗ್ರಾಂ ಪಂಚಾಯತ್ ಸದಸ್ಯರಾದ ಚಿನ್ನಪ್ಪ ಚೆನ್ನಪ್ಪನವರ, ಕಲ್ಲಪ್ಪ ಹುಲುಸೋಗಿ, ಪ್ರೊ ಆನಂದ ಇಂದೂರ ಸೇರಿದಂತೆ ಮಹಾವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು