ನನ್ನ ಲೈಫ್ ನನ್ನ ಸ್ವಚ್ಛ ನಗರ ಕಾರ್ಯಕ್ರಮ
ಲೋಕದರ್ಶನ ವರದಿ,
ಜಮಖಂಡಿ: 29: ನನ್ನ ಲೈಫ್ ನನ್ನ ಸ್ವಚ್ಛನಗರ ಕಾರ್ಯಕ್ರಮಕ್ಕೆ ನಗರದ ಜನರಿಂದ ಉತ್ತಮ ರೀತಿಯಲ್ಲಿ ಜನಸ್ಪಂದನೆ ಲಭ್ಯವಾಗುತ್ತಿದೆ. ಸ್ಥಳೀಯ ಮಹಿಳಾ ಮಂಡಳ ಸದಸ್ಯರು, ಮಹಿಳಾ ಸಂಘ-ಸಂಸ್ಥೆಯ ಕಾರ್ಯಕರ್ತರು ಮರುಬಳಕೆ ಮಾಡಬಹುದಾದ ಆರು ವಸ್ತುಗಳನ್ನು ನಗರಸಭೆಯ ಐದು ಸಂಗ್ರಹಣಾ ಕೇಂದ್ರಗಳಿಗೆ ನೀಡುತ್ತಿದ್ದಾರೆ ಎಂದು ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ ಹೇಳಿದರು.
ನಗರದಲ್ಲಿ ನಗರಸಭೆ ಕಾರ್ಯಾಲಯ ಹಮ್ಮಿಕೊಂಡಿರುವ ನನ್ನ ಲೈಫ್ ನನ್ನ ಸ್ವಚ್ಛ ನಗರ ಕಾರ್ಯಕ್ರಮದಲ್ಲಿ ಸಾವಿತ್ರಿ ಬಾಯಿ ಫುಲೆ ಸಂಘದ ನೀಡಿದ ಮರುಬಳಕೆಯಾಗು ವಸ್ತುಗಳನ್ನು ಸ್ವೀಕರಿಸಿದ ನಂತರ ಮಾತನಾಡಿದರು.
ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಮನೆಯಲ್ಲಿ ಸಂಗ್ರಹಿಸಿರುವ ಪ್ಲಾಸ್ಟಿಕ್, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಆಟಿಕೆ ವಸ್ತುಗಳು, ಬಳಸಿದ ಬಟ್ಟೆಗಳು, ದಿನ ಪತ್ರಿಕೆಗಳು, ಹಳೆ ಪುಸ್ತಕ ಹಾಗೂ ಎಲೆಕ್ಟ್ರಾನಿಕ್ ವಸ್ತು ಸಹಿತ ಆರು ರೀತಿ ಮರು ಬಳಕೆ ಮಾಡಬಹುದಾದ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು. ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯ ಸ್ವಚ್ಛಭಾರತ ಮಿಷನ್ ನಗರ 2.0 ಯೋಜನೆ ಅಡಿಯಲ್ಲಿ ರಾಷ್ಟ್ರಮಟ್ಟದಲ್ಲಿ ಅಭಿಯಾನ ಪ್ರಾರಂಭಿಸಿದೆ. ಆರು ರೀತಿಯ ವಸ್ತುಗಳನ್ಮ್ನ ಮರು ಬಳಸಬಳಕೆ ಮಾಡುವ ವಸ್ತುಗಳ ಉತ್ಪಾದನೆ ಉದ್ದೇಶದಿಂದ ನನ್ನ ಲೈಫ್ ನನ್ನ ಸ್ವಚ್ಛ ನಗರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಭಿಯಾನದ ಮೂಲಕ ತ್ಯಾಜ್ಯ ಪ್ರಮಾಣ ಕಡಿಮೆಗೊಳಿಸುವುದು, ಮರುಬಳಕೆ ಮಾಡುವದು. ತ್ಯಾಜ್ಯನಿರ್ವಹಣೆ ನಿಟ್ಟಿನಲ್ಲಿ ಸುಸ್ಥಿರಜೀವನ ಪದ್ಧತಿ ಅಳವಡಿಸಿ ಕೊಳ್ಳುವುದಾಗಿದೆ. ಮೇ 20ರಿಂದ ಜೂನ್ 5ರವರೆಗೆ ಅಭಿಯಾನ ಸಂಗ್ರಹಣೆ ಮಾಡಲಾಗುತ್ತಿದೆ ಎಂದರು.
ನಗರಸಭೆ ಆವರಣದಲ್ಲಿ, ಹನುಮಾನ ಚೌಕದಲ್ಲಿರುವ ಕಿತ್ತೂರ ಚೆನ್ನಮ್ಮ ಮಾರುಕಟ್ಟೆ ಸಂಕೀರ್ಣ ನೆಲ ಅಚಿತಸ್ಥéದಲ್ಲಿ, ಡಾ.ಕಡ್ಲೇವಾಡ ಆಸ್ಪತ್ರೆ ಮತ್ತು ವಿಧ್ಯಾಭವನ ಶಾಲೆ ಹತ್ತಿರದ ಹಳೆ ಫಾರೆಸ್ಟ ಆಫೀಸ ಆವರಣದಲ್ಲಿ, ಶಾಂತಿ ನಗರದ ಡಾ. ಅಂಬೇಡ್ಕರ ಭವನ ನಿಮರ್ಿಸಿರುವ ಕೇಂದ್ರಗಳಲ್ಲಿ ತ್ಯಾಜ್ಯ ವಸ್ತುಗಳನ್ಮ್ನ ನೀಡಬೇಕು. ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ವಜನಿಕರಿಗೆ ಡಿಜಿಟಲ್ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ವೇದಿಕೆಯಲ್ಲಿ ನಗರಸಭೆ ಎಇಇ ಕುಸಮಾ, ಆರೋಗ್ಯ ಅಧಿಕಾರಿ ವಿನಾಯಕ ನಿಡೋಣಿ, ಸಾವಿತ್ರಿಬಾಯಿ ಫುಲೆ ಮಹಿಳಾ ಮಂಡಳ ಅಧ್ಯಕ್ಷೆ ಪೂಣರ್ಿಮಾ ಮಾಳಿ, ಉಪಾಧ್ಯಕ್ಷೆ ಸವಿತಾ ಮೆಂಡಿಗೇರಿ, ಶಶಿಕಲಾ ಮಾಳಿ ಸ್ಭೆರಿದಂತೆ ಅನೇಕರು ಇದ್ದರು.