ಬಳ್ಳಾರಿ

ಯುವತಿ ಕಾಣೆ: ಪ್ರಕರಣ ದಾಖಲು

ಯುವತಿ ಕಾಣೆ: ಪ್ರಕರಣ ದಾಖಲು

ಬಳ್ಳಾರಿ,ಜು.31:ಸಂಡೂರು ತಾಲೂಕಿನ ನರಸಾಪುರ ಗ್ರಾಮದ ನಿವಾಸಿ ಯಶೋಧ ಎನ್ನುವ 20 ವರ್ಷದ ಯುವತಿ ಜು.24 ರಂದು ಕಾಣೆಯಾಗಿರುವ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.

ಕಾಣೆಯಾದ ಯುವತಿಯ ಚಹರೆ ಗುರುತು: ಎತ್ತರ 5.1 ಅಡಿ, ಸಾಧಾರಣ ಮೈಕಟ್ಟು, ಕೋಲುಮುಖ, ತಲೆಯಲ್ಲಿ ಉದ್ದನೇಯ ಕೂದಲು, ಅಗಲವಾದ ಕಿವಿ, ಕಪ್ಪು ಮೈಬಣ್ಣ ಹೊಂದಿರುತ್ತಾಳೆ.

ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಟಾಪ್ ಅದರಲ್ಲಿ ಬಂಗಾರದ ಬಣ್ಣದ ಚುಕ್ಕೆ ಹಾಗೂ ಕೆಂಪು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ. ಎಡಕೈ ಮೇಲೆ ಬಿ ಗುರುತಿನ ಅಚ್ಚೆ ಇರುತ್ತದೆ.

ಮೇಲ್ಕಂಡ ಚಹರೆಯುಳ್ಳ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಸಂಡೂರು ಪೊಲೀಸ್ಠಾಣೆಯ ಪಿಎಸ್ಐ ಮೊ.9480803061 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸುದ್ದಿ ಓದಿ