ಮೆಗಾ ಡ್ರೈವ್ ಪ್ಲಾಂಟೇಶನ್ ಪಾಮ್ಬೆಳೆ ಸಸಿಗಳ ನೆಡುವ ಕಾರ್ಯಕ್ರಮ
ಮಾಂಜರಿ : ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಇಂದು ಬೆಳಗಾವಿ ಜಿಲ್ಲಾ ಪಂಚಾಯತ ತೋಟಗಾರಿಕೆ ಇಲಾಖೆ, ತಾಳೆ ಬೆಳೆ ಅಭಿವೃದ್ಧಿ ಯೋಜನೆ, ಥ್ರೀಎಫ್ ಆಯಿಲ್ ಪಾಮ್ ಸಂಸ್ಥೆ, ಮೆಗಾ ಆಯಿಲ್ ಪಾಮ್ ಡ್ರೈವ್ ಪ್ಯಾಟೇಶನ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಅಜಿತ್ ಚಿಗರೆ ಇವರ ತೋಟದಲ್ಲಿ ಡ್ರೈವ್ ಪ್ಲಾಂಟೇಶನ್ ಪಾಮ್ಬೆಳೆ ಸಸಿಗಳ ನೆಡುವ ಕಾರ್ಯಕ್ರಮ ಸಂಪನ್ನಗೊಂಡಿತು.
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಬೆಳಗಾವಿ ಸಹಾಯಕ ತೋಟಗಾರಿಕೆ ಇಲಾಖೆಯ ನೂಡಲ್ ಆಫೀಸರ್ ಅಜರುದ್ದಿನ್ ಜಮಾದಾರ, ಚಿಕ್ಕೋಡಿ ಸಹಾಯಕ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಪ್ರದೀಪ ಬೋವಿ, ಥ್ರೀ ಎಫ್ ಆಯಿಲ್ ಪಾಮ್ ಡ್ರೈವ್ ಲಿಮಿಟೆಡ್ನ ಆಫೀಸರ್ ಗುಡುಸಾಬ್ ನದಾಫ ಇವರ ಉಪಸ್ಥಿತಿಯಲ್ಲಿ ಪಾಮ್ ಸಸಿ ನೆಡುವ ಕಾರ್ಯಕ್ರಮ ಜರುಗಿತು. ಉಪಸ್ಥಿತ ಗಣ್ಯರು ಪಾಮ್ ಸಸಿಗೆ ನೀರೇರೆದು ಪಾಮ್ ಬೆಳೆ ಕುರಿತು ವಿಚಾರಗೋಷ್ಟಿಗೆ ಚಾಲನೆ ನೀಡಿದರು. ಈ ವೇಳೆ ಕಳೆದ ಅನೇಕ ವರ್ಷಗಳಿಂದ ಪಾಮ್ ಬೆಳೆ ಬೆಳೆಯುತ್ತಿರುವ ಗ್ರಾಮದ ರೈತರಾದ ಅಪ್ಪಾಸಾಬ ಸೌಂದಲಗೆ, ಅಧಿಕಾರಿಗಳಾದ ಅಜರುದ್ದಿನ ಜಮಾದಾರ, ಪ್ರದೀಪ ಬೋವಿ ಮತ್ತು ಗುಡುಸಾಬ ನದಾಫ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸಕರ್ಾರದ ತೋಟಗಾರಿಕೆ ಇಲಾಖೆ ವತಿಯಿಂದ ತಾಳೆ ಬೆಳೆಯುವ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡಲಾಗುತ್ತಿದ್ದು, ಬೆಳೆ ನೆಟ್ಟು 4 ವರ್ಷಗಳ ವರೆಗೆ ಬೆಳೆ ನಿರ್ವಹನೆಗಾಗಿ ಗೊಬ್ಬರ ರೂಪದಲ್ಲಿ ಪ್ರತಿ ಹೆಕ್ಟರ್ಗೆ 5250 ರೂಪಾಯಿ ನೀಡಲಾಗುತ್ತದೆ. ಅಲ್ಲದೇ ಸಸಿಗಳನ್ನು ಉಚಿತವಾಗಿ ಕೊಡಲಾಗುತ್ತದೆ. ತಾಳೆ ಬೆಳೆ ನೆಟ್ಟು 3 ವರ್ಷದಿಂದ ಸುಮಾರು 30 ವರ್ಷಗಳ ವರೆಗೆ ಪ್ರತಿ ವರ್ಷ 1 ರಿಂದ 2 ಲಕ್ಷದ ವರೆಗೆ ಆದಾಯ ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಈ ಬೆಳೆಗಳ ಮಧ್ಯೆ ಮಿಶ್ರ ಬೆಳೆಗಳನ್ನು ಕೂಡಾ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು. ಮತ್ತು ಅಲ್ಲಿ ಸೇರಿದ್ದ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ಇನ್ನೂ ಪಾಮ್ ಬೆಳೆ ಕುರಿತು ಹೆಚ್ಚಿನ ಮಾಹಿತಿಗಾಗಿ ಜೆ.ಎಂ. ನದಾಫ್ ಮೊಬೈಲ್ ಸಂಖ್ಯೆ 9731349987 ಕರೆ ಮಾಡಿ ಮಾಹಿತಿ ಪಡೆದು ಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಈ ಸಮಯದಲ್ಲಿ ಡಾ. ಅಜೀತ ಚಿಗರೆ, ಚಂದ್ರಕಾಂತ ಧಾಬಡೆ, ಸುಭಾಸ ಖೋತ, ವಿಲಾಸ ಪವಾರ, ಅಶೋಕ ಅಡಸೂಳೆ, ರಾಜಾರಾಮ ಮಾನೆ, ಶಿವಾಜಿ ಜಾಧವ, ಬಸಪ್ಪಾ ಕಾಂಬಳೆ, ಬಾಳಾಸಾಹೇಬ್ ಘೋಸರವಾಡೆ, ಶುಭಂ ಚೌಗುಲೆ, ಜ್ಯೋತಿಬಾ ಸಾವಂತ, ಯುವರಾಜ ದಿಗ್ಗೇವಾಡಿ, ಸುನೀಲ ಪಾಟೋಳೆ, ರಾಜು ಚಿಗರೆ, ಸಂಜು ಬಾಮನೆ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಥ್ರೀಎಫ್ ಆಯಿಲ್ ಪಾಮ ಡ್ರೈವ ಲಿಮಿಟೆಡ್ನ ಅಧಿಕಾರಿ ಜೆ.ಎಂ. ನದಾಫ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.