ಅರ್ಥ ಪೂರ್ಣ ಓಬವ್ವ ಜಯಂತಿ ಆಚರಣೆಯಾಗಲಿ: ಇ.ಬಾಲಕೃಷ್ಣಪ್ಪ
ಲೋಕದರ್ಶನ ವರದಿ
ಅರ್ಥ ಪೂರ್ಣ ಓಬವ್ವ ಜಯಂತಿ ಆಚರಣೆಯಾಗಲಿ: ಇ.ಬಾಲಕೃಷ್ಣಪ್ಪ
ಹೊಸಪೇಟೆ (ವಿಜಯನಗರ)08: ವೀರವನಿತೆ ಒನಕೆ ಓಬವ್ವ ಧೀರ ಮಹಿಳೆಯಾಗಿ ಮಾದರಿಯಾಗಿದ್ದು, ನವೆಂಬರ್ 11 ರಂದು ಓಬವ್ವ ಜಯಂತಿ ಅರ್ಥ ಪೂರ್ಣವಾಗಿ ಆಚರಣೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಇ.ಬಾಲಕೃಷ್ಣಪ್ಪ ಅವರು ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನವಂಬರ್ 7 ರಂದು ನಡೆದ ವೀರವನಿತೆ ಒನಕೆ ಓಬವ್ವ ಜಯಂತಿ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಓಬವ್ವ ದಿಟ್ಟ ಮಹಿಳೆ, ಅವರನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಬಾರದು. ಅವರ ಗುಣಗಳನ್ನು ಮಕ್ಕಳಲ್ಲಿ ತುಂಬುವಲ್ಲಿ ಜಯಂತಿ ಆಚರಣೆ ದಾರಿಯಾಗಬೇಕು ಎಂದರು.
ನವಂಬರ್ 11 ರಂದು ನಡೆಯುವ ವೇದಿಕೆ ಕಾರ್ಯಕ್ರಮಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಇಲಾಖೆಯಿಂದ ಕೈಗೊಳ್ಳಬೇಕು. ಶಿಷ್ಟಾಚಾರದನ್ವಯ ಜಯಂತಿಯ ಆಮಂತ್ರಣ ಪತ್ರಿಕೆ ಮುದ್ರಿಸಿ, ಆಮಂತ್ರಣ ಪತ್ರಿಕೆಗಳನ್ನು ಗಣ್ಯ ಮಾನ್ಯರಿಗೆ ವಿತರಿಸಬೇಕು ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಕಲಾ ತಂಡಗಳನ್ನು ಒಳಗೊಂಡ ಮೆರವಣಿಗೆಯು ನಗರದ ಚಲವಾದಿ ಓಣಿಯಿಂದ ರಾಮ ಟಾಕೀಸ್, ಉದ್ಯೋಗ್ ಪೆಟ್ರೋಲ್ ಬಂಕ್, ನಗರಸಭೆ ಕಚೇರಿ, ಟೌನ್ ಪೊಲೀಸ್ ಠಾಣೆ ಪುನೀತ್ ಸರ್ಕಲ್ ಮತ್ತು ಅಂಬೇಡ್ಕರ್ ವೃತ್ತದ ವರೆಗೆ ಮೆರವಣಿಗೆ ಸಾಗುವುದು ಎಂದು ಹೇಳಿದರು.
ಈ ಭಾರಿ ವೇದಿಕೆಯನ್ನು ದೊಡ್ಡದಾಗಿ ಹಾಕಬೇಕು. ರಾಮ ಟಾಕೀಸ್ ಹತ್ತಿರ ವಾಹನ ಸಂಚಾರವನ್ನು ಕಾರ್ಯಕ್ರಮ ಮುಗಿಯುವವರೆಗೆ ನಿರ್ಬಧಿಸಬೇಕು ಎಂದು ಚಲವಾದಿ ಸಮುದಾಯದ ಮುಖಂಡರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಸಮುದಾಯದ ಸಹಕಾರ ವಿದ್ದರೆ ವೇದಿಕೆಯನ್ನು ದೊಡ್ಡದಾಗಿ ಹಾಕಲಾಗುವುದು, ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ಸಮುದಾಯದ ಮುಖಂಡರಿಗೆ ತಿಳಿದರು.
ಸಭೆಯಲ್ಲಿ ನಗರಸಭೆಯ ಪೌರಾಯುಕ್ತರಾದ ಚಂದ್ರ್ಪ, ಜಿಲ್ಲಾ ಆರೋಗ್ಯ ಶಿಕ್ಷಕಣಾಧಿಕಾರಿಗಳಾದ ಡಾ.ಎಂ.ಪಿ.ದೊಡ್ಡಮನಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಚಲವಾದಿ ಸುಮುದಾಯದ ಮುಖಂಡರು ಉಪಸ್ಥಿತರಿದ್ದರು.
ಉದ್ಯಮಶೀಲತಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ
ಹೊಸಪೇಟೆ (ವಿಜಯನಗರ)08: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಸಿಡಾಕ್ ಇವರು ಸ್ವಯಂ ಉದ್ಯೋಗ ಪ್ರಾರಂಭಿಸುವ ಆಸಕ್ತ ಪರಿಶಿಷ್ಟ ಪಂಗಡದವರಿಗೆ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ನವಂಬರ್ 14ರೊಳಗಾಗಿ 6362681190 ಗೆ ಕರೆ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ತರಬೇತಿಯಲ್ಲಿ ಸ್ವಂತ ಉದ್ಯಮ ಸ್ಥಾಪಿಸಲು ಅನುಸರಿಸಬೇಕಾದ ಕ್ರಮಗಳು, ಸರ್ಕಾರದ ಸ್ವಂತ ಉದ್ಯೋಗದ ಯೋಜನೆಗಳು, ಬ್ಯಾಂಕಿನ ವ್ಯವಹಾರ, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ ಹಾಗೂ ಉದ್ಯಮ ನಿರ್ವಹಣೆ, ಉದ್ಯಮಶೀಲತೆ, ಉದ್ಯಮ ಪ್ರಾರಂಭದ ಹಂತಗಳು, ಉದ್ಯಮಗಳನ್ನು ಪ್ರಾರಂಭಿಸಲು ಸರ್ಕಾರದ ಯೋಜನೆಗಳು, ಸಾಲ ಸೌಲಭ್ಯಗಳು, ಬ್ಯಾಂಕ್ ಬಗ್ಗೆ, ಜಾಹಿರಾತು ಮತ್ತು ಮಾರುಕಟ್ಟೆಯ ಕುರಿತು ನೋಂದಣೆ ಮಾಡುವ ವಿಧಾನಗಳು, ಯಶಸ್ವಿ ಉದ್ಯಮಿಗಳ ಜೊತೆ ಸಂವಾದ, ಉದ್ಯಮ ನಿರ್ವಹಣೆ ಮಾಡುವ ವಿಧಾನಗಳು ಮತ್ತು ಇತ್ಯಾದಿ ವಿಷಯಗಳ ಕುರಿತು ತರಬೇತಿ ನೀಡಲಾಗುವುದು.
ಅಭ್ಯರ್ಥಿಗಳಿಗೆ 18 ದಿಂದ 45 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. ಪರಿಶಿಷ್ಟ ಪಂಗಡದ ಪುರುಷ ಮತ್ತು ಮಹಿಳೆಗೆ ಮಾತ್ರ ಅವಕಾಶವಿರುತ್ತದೆ ಎಂದು ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋನಾಳು ಗ್ರಾಮದಲ್ಲಿ ಪೆಟ್ರೋಲಿಯಂ ರಿಟೈಲ್ ಜೌಟ್ಲೇಟ್ ಸ್ಥಾಪನೆ:
ಆಕ್ಷೇಪಣೆ ಸಲ್ಲಿಸಲು ಅವಕಾಶ
ಹೊಸಪೇಟೆ (ವಿಜಯನಗರ)08: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಇವರು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರ ಹೋಬಳಿಯ ಗೋನಾಳು ಗ್ರಾಮದ ಸರ್ವೆ ನಂ. 114/3 ರಲ್ಲಿ ವಿಸ್ತೀರ್ಣ 0.49 ಸೆಂಟ್ಸ್ ಜಮೀನಿನಲ್ಲಿ 16 ಕೆಎಲ್ ಸಾಮಾರ್ಥ್ಯದ ಪೆಟ್ರೋಲಿಯಂ ಕ್ಲಾಸ್ ಎ ಮತ್ತು 35 ಕೆಎಲ್ ಸಾಮಾರ್ಥ್ಯದ ಪೆಟ್ರೋಲಿಯಂ ಕ್ಲಾಸ್ ಬಿ ಒಟ್ಟು 51 ಕೆಎಲ್ ಸಾಮಾರ್ಥ್ಯದ ಬಂಕ್ ಸ್ಥಾಪನೆ ಮಾಡಲು ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿರುತ್ತಾರೆ.
ಜುವೇರಿಯಾ ಅಂಜುಮ್ ಗಂಡ ಜಿ.ಎಸ್.ಜಿಲಾನ್ ಬಾಷಾ ಇವರು ವಾರ್ಡ್ ನಂ.29, ಮನೆ ನಂ.17, ಬಂಡಿಹಟ್ಟಿ ರಸ್ತೆ, ಸಿಎಂಸಿ ಕಾಲೋನಿ, ಕೌಲ್ ಬಜಾರ್, ಬಳ್ಳಾರಿ ಜಿಲ್ಲೆ ಇವರನ್ನು ಫ್ರಾಂಚೈಸ್ಸಿಯನ್ನಾಗಿ ಕಂಪನಿ ನೇಮಕ ಮಾಡಿದೆ.
ಈ ಜಮೀನಿನಲ್ಲಿ ಪೆಟ್ರೋಲಿಯಂ ರಿಟೈಲ್ ಓಟ್ಲೆಟ್ ಸ್ಥಾಪನೆ ಮಾಡಲು ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಲು ಸಾರ್ವಜನಿಕರಿಂದ ಆಕ್ಷೇಪಣೆಗಳು ಇದ್ದಲ್ಲಿ ಹತ್ತು ದಿನದೊಳಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಇಮೇಲ್ ಐಡಿ: ತರಿಚಿಥಿಚಿಟಿಚಿರಚಿಡಿಚಿಜಛಿಅರಟಚಿಟ.ಛಿಠ ಅಥವಾ ಹೊಸಪೇಟೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎಂಎಜಿ-2 ಶಾಖೆಗೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.