ಕ್ರೀಡಾ ಸಚಿವ ನಾಗೇಂದ್ರರವರಿಗೆ ಮಂಜುನಾಥ ಮಣ್ಣಣ್ಣವರ ಮನವಿ
ಲೋಕದರ್ಶನ ವರದಿ
ಶಿಗ್ಗಾವಿ 11: ಅಂತರಾಷ್ಟ್ರೀಯ ಅಂದರ ಕ್ರಿಕೆಟ್ ವಿಶ್ವಕಪ್ನಲ್ಲಿ ಭಾಗವಹಿಸಿ ಶಿಗ್ಗಾವಿ ತಾಲೂಕಿನ ಕೀರ್ತಿ ಪತಾಕಿ ಹಾರಿಸಿದ ಗಂಗವ್ವ ಹರಿಜನ್ ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿ ಸರ್ಕಾ ರದ ಮಟ್ಟದಲ್ಲಿ ಸೂಕ್ತ ಗೌರವ ಸಲ್ಲಿಸಲು ಸರ್ಕಾರದ ಕ್ರೀಡಾ ಸಚಿವ ನಾಗೇಂದ್ರ ಅವರಿಗೆ ಶಿಗ್ಗಾವಿ ತಾಲೂಕ ಕಾಂಗ್ರೆಸ್ ಪಕ್ಷದ ವಕ್ತಾರ್ ಹಾಗೂ ಸಾಮಾಜಿಕ ಹೋರಾಟಗಾರ ಮಂಜುನಾಥ ಮಣ್ಣಣ್ಣವರ ಮನವಿ ಮಾಡಿಕೊಂಡರು.
ತಾಲೂಕಿನ ಸಂತ ಶಿಶುವಿನಹಾಳ ಶರೀಫರ ನಾಡಿನ ಮಹಿಳಾ ಅಂದರ ಕ್ರಿಕೆಟ್ ಅಂತರಾಷ್ಟ್ರೀಯ ಆಟಗಾರ್ತಿ ಹೆಮ್ಮೆಯಗಂಗವ್ವ ಹರಿಜನ್ ಅವರನ್ನು ರಾಣಿಚೆನ್ನಮ್ಮನ ಭಾವಚಿತ್ರ ನೀಡಿ ಸನ್ಮಾನಿಸಿ ಅಭಿನಂದಿಸಿ ಮಾತನಾಡಿದ ಮಂಜುನಾಥ್ ಕ್ರೀಡೆಯಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವುದೇ ಕಷ್ಟ ಸಾಧ್ಯ ಅಂತದರಲ್ಲಿ ಅಂತರಾಷ್ಟ್ರೀಯ ಮಟ್ಟದ ಮಹಿಳಾ ಅಂದರ ಕ್ರಿಕೆಟ್ನಲ್ಲಿ ಗುರ್ತಿಸಿಕೊಂಡು ವರ್ಲ್ಡ್ ಕಪ್ಆಡುವುದು ಸುಲಭ ಸಾಧ್ಯವಾದ ಮಾತಲ್ಲ ಇಂತಹ ಪ್ರತಿಭೆಯನ್ನು ಸ್ಥಳೀಯವಾಗಿ ಆಡಳಿತ ಸನ್ಮಾನ ಮಾಡಿರುವುದು ಅಷ್ಟೇಆದರೆ ಈ ಆಟಗಾರ್ತಿಯ ಸಮಗ್ರ ಮಾಹಿತಿಯನ್ನು ಕ್ರೀಡಾ ಇಲಾಖೆಯ ಸಚಿವರ ಗಮನಕ್ಕೆ ತರಬೇಕು ಹಾವೇರಿ ಜಿಲ್ಲಾ ಕ್ರೀಡಾ ಇಲಾಖೆಯು ಸಹ ಈ ವಿಷಯದಲ್ಲಿ ನಿರ್ಲಕ್ಷ ಧೋರಣೆ ತೋರಿಸಿದ್ದು ಇದು ಸಮಾಜಸವಲ್ಲ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಕೊಡುವ ಘನ ಸರಕಾರದ ಕ್ರೀಡಾ ಸಚಿವ ನಾಗೇಂದ್ರರವರು ನಮ್ಮೂರಿನ ಈ ಪ್ರತಿಭೆಯನ್ನು ಗುರುತಿಸಿ ಸರ್ಕಾರದ ಮಟ್ಟದಲ್ಲಿ ಸೂಕ್ತ ಗೌರವ ಸಲ್ಲಿಸುವಂತೆ ಪಕ್ಷದ ಕಾರ್ಯಕರ್ತನಾಗಿ ಸಾಮಾಜಿಕ ಹೋರಾಟಗಾರನಾಗಿ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
ಬಂಕಾಪುರ ಘಟಕದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗದಿಗೆಪ್ಪ ಬಳ್ಳಾರಿ ಯುವಕಾಂಗ್ರೆಸ್ ಉಪಾಧ್ಯಕ್ಷ ಶಂಭುಲಿಂಗಪ್ಪಕತ್ತಿ, ಬಂಕಾಪುರ ಘಟಕದ ಕಾರ್ಯದರ್ಶಿ ಸಿದ್ದಲಿಂಗಯ್ಯ ನಾಗರಬಾವಿ ಮಠ, ಅಬ್ಬಾಸ್ ಸವಣೂರ ಹಾಗೂ ಸಾಧಕೀಯ ಪರಿವಾರದವರು ಇತರರು ಉಪಸ್ಥಿತರಿದ್ದರು