ಮಾಂಜರಿ /ಸಂತೋಷ್ ಕುಮಾರ್ ಕಾಮತ
ವಿದ್ಯಾಭ್ಯಾಸ ಮಾಡಿದವರು ಕೃಷಿ ಚಟುವಟಿಕೆ ಮಾಡಲು ಹಿಂದೇಟು ಹಾಕುವುದು ನಾವು ಕಾಣುವುದು ಸವರ್ೆ ಸಾಮಾನ್ಯ. ಆದರೆ ಇಲ್ಲೊಬ್ಬರು ಹಿರಿಯ ಸಾಹಿತಿ ಹುಲ್ಲು ಕೂಡಾ ಬೆಳೆಯದಂತ ಪ್ರದೇಶದಲ್ಲಿ ಗುಡ್ಡಗಾಡವನ್ನು ಜಮೀನಾಗಿ ಪರಿವತರ್ಿಸಿ ಉತ್ತಮ ಕೃಷಿ ಬೆಳೆಯುತ್ತಿದ್ದಾರೆ. ಕೃಷಿಕರಿಗೆ ಮಾದರಿಯಾಗುತ್ತಿದ್ದಾರೆ.
ಅಷ್ಟಕ್ಕೂ ಸಾಹಿತಿಯಾದರೂ ಯಾರು, ಅದು ಯಾವು ಊರು, ಬೆಳೆಯಾದರೂ ಏನೂ ಅಂತಿರಾ ಇಲ್ಲಿದೆ ಕಂಪ್ಲೀಟ್ ಸ್ಟೋರಿ.
ಎಲ್ಲಿ ನೋಡಿದರೂ ಹಸಿರು, ಗಿಡದಲ್ಲಿ ಗೊಂಚಲು ತುಂಬಿರುವ ಕಾಯಿಗಳು ಇವೆಲ್ಲ ದೃಶ್ಯ ಕಂಡು ಬರುವುದು ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ. ಚಿಕ್ಕೋಡಿ ಸಮೀಪದ ಕೇಲ ಒಂದೂವರೆ ಕಿಮಿ ಅಂತರದಲ್ಲಿರುವ ಹಿರಿಯ ಸಾಹಿತಿ ಎಸ್ ವೈ ಹಂಜಿ ಅವರು ತಮ್ಮ ಜಮೀನಿನಿಲ್ಲಿ ಗ್ರೀನ್ ಆಪಲ್(ಕಾಸಿ ಬೋರೆ) ಕಾಯಿ ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ. ಇವರೀ ಕಾರ್ಯ ನೋಡಿ ಸುತ್ತಮುತ್ತಲಿನ ರೈತರು ಸಹಿತ ಇವರ ಹತ್ತಿರ ಬಂದು ಮಾಹಿತಿ ಪಡೆದುಕೊಂಡು ಹೋಗುತ್ತಿದ್ದಾರೆ.
ಹಿರಿಯ ಸಾಹಿತಿ ಎಸ್ ವೈ ಹಂಜಿ ಅವರು ಚಿಕ್ಕೋಡಿಯಿಂದ ಒಂದೂವರೆ ಕಿಮಿ ದೂರದಲ್ಲಿ ಗುಡ್ಡಗಾಡ ಪ್ರದೇಶದ ಜಮೀನನ್ನು ಕೊಂಡುಕೊಂಡರು. ನಂತರ ಅಲ್ಲಿ ಒಂದು ಗರಿಕೆಯೂ ಬೆಳೆಯದಂತ ಪರಿಸ್ಥಿತಿಯಲ್ಲಿ ಇತ್ತು. ದೊಡ್ ದೊಡ್ ಕಲು ಬಂಡೇಗಳಿಂದ ಕುಡಿದ ಪ್ರದೇಶ ಇಲ್ಲಿ ಎಸ್ ವೈ ಹಂಜಿ ಅವರು ಇಲ್ಲಿ ಜಮೀನು ಮಾಡಿ ಉತ್ತಮ ಬೆಳೆ ತೆಗೆಯಲು ನಿರ್ದರಿಸಿದರು. ಆ ನಂತರ ಕಳೆದ ಆರು ತಿಂಗಳುಗಳಿಂದ ನೆಲವನ್ನು ಅಗೆದು ಸಮ ಮಾಡಿದರು.
ಜ್ವತೆಗೆ ಬೋರವೆಲ್ ಕೂಡಾ ಕೊರೆಯಿಸಿ ನೀರು ಬರಮಾಡಿಕೊಂಡು. ನಂತರ ಈಗ ಗ್ರೀನ್ ಆಪಲ್(ಕಾಶಿ ಭೋರೆ) 300 ಸಸಿಗಳನ್ನು ನೆಟ್ಟರು.
ಕಳೆದ ಎರಡು ವರ್ಷದ ನಂತರ ಕಾಯಿಯೂ ಕೂಡಾ ಸುರಿದವು .ಈಗ ಕಾಯಿ ಸುರಿಮಳೆಯಿಂದಾಗಿ ಜನರ ಆಕರ್ಷಣೆ ಬೆಡಿಕ್ಕೆ ಸಹ ಹರಿದು ಬರುತ್ತಿದೇ. ಅದರ ಜೊತೆಗೆ ಶೇಂಗಾ, ಬದನೆ, ಮೆನಸು, ಗುಡ್ಡ ನೇಲೆ,ಮಾವಿನ ಸಸ್ಯ, ನುಗ್ಗೆಕಾಯಿ, ಪೇರಲ್ ಸಸಿಗಳು ತೆಂಗು, ಬೆವಿನ ಮರ ಹೀಗೆ ಆಯುವರ್ೆದಿಕ್ ಔಷಧಿ ತಯಾರಿಕ್ಕೆಯ ವಿವಿಧ ಗಿಡಗಳನ್ನು ಬೆಳೆಸಿ ಈಗ ಹಸಿರು ವಾತಾವರಣ ನಿಮಿಸಿದ್ದು,
ಎಲ್ಲರಿಗೂ ಹುಬ್ಬೇರಿಸವಂತೆ ಮಾಡಿದ್ದಾರೆ.
ಗರಿಕೆಯು ಬೆಳೆಯದಂತಹ ಪ್ರದೇಶದಲ್ಲಿ ಹಸಿರು ವಾತಾವರಣ ಮಾಡಿದ್ದು ಎಲ್ಲರಿಗೂ ಅಶ್ಚರ್ಯ ಮುಡಿಸಿದ್ದಾರೆ. ಇವರ ಕಾರ್ಯ ಕಂಡು ವಿವಿಧ ಕಡೆಯಿಂದ ರೈತರು ಬಂದು ಮಾಹಿತಿ ಪಡೆದುಕೊಂಡು ಹೋಗುತ್ತಿದ್ದಾರೆ. ಇವರ ಈ ಕಾರ್ಯದ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ಇನ್ನಷ್ಟು ನೆಲವನ್ನು ಹದ ಮಾಡಿ ವಿವಿಧ ಬೆಳೆಗಳನ್ನು ಬೆಳೆಯಲಿದ್ದಾರೆ.
ಅಷ್ಟೇ ಅಲ್ಲದೆ ಸಾಲಾ ಮಾಡಿ ಬೆಳೆ ತೆಗೆಯಲು ಸಾದ್ಯವಾಗದ ರೈತರಿಗೆ ಧೈರ್ಯ ತುಂಬಿ ಆತ್ಮವಿಶ್ವಾಸ ನೀಡುತ್ತಿದ್ದಾರೆ.
ಯಾವುದೇ ರೈತರು ಬೆಳೆಬಾರದ ಕಾರಣಕ್ಕೆ ಆತ್ಮಹತ್ಯೆ ಒಂದೇ ಪರಿಹಾರ ಕಂಡುಕೊಳಬಾರದು ನೀವು ಧೈರ್ಯ ದಿಂದ ಬದುಕಿ ಇಂತಹ ಮಿಶ್ರಣ ಬೆಳೆ ಬೆಳೆದರೆ ಒಂದು ಬೆಳೆ ಹಾಳಾದರೆನು ಇನ್ನೊಂದು ಬೆಳೆ ಕೈಗೆಟುಕುತ್ತದೇ ಎಂಬ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡಬೇಕೆಂದು ರೈತರಿಗೆ ಮಾದ್ಯಮದ ಮೂಲಕ ಮನವಿ ಮಾಡಿಕೊಂಡರು