ಆರೋಗ್ಯ ಸೇವೆಗಳ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡಿಸಿ: ಡಾ.ರೆಡ್ಡಿ

ಆರೋಗ್ಯ ಸೇವೆಗಳ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡಿಸಿ: ಡಾ.ರೆಡ್ಡಿ

ಬಳ್ಳಾರಿ 11: ಸಮುದಾಯಕ್ಕೆ ಕಲೆಯ ಆಕರ್ಷಣೆಯ ಜೊತೆಗೆ ಆರೋಗ್ಯ ಸೇವೆಗಳನ್ನು ಪ್ರತಿಯೊಬ್ಬರಿಗೂ ತಿಳಿಸಲು ಎಲ್ಲಾ ಕಲಾ ತಂಡಗಳು ಉತ್ತಮ ಪ್ರದರ್ಶನ ನೀಡಬೇಕು ಎಂದು ಜಿಲ್ಲಾ ಕುಷ್ಠ ರೋಗ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಟಿ.ರಾಜಶೇಖರ ರೆಡ್ಡಿ ಅವರು ಹೇಳಿದರು. 

ನಗರದ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಇತ್ತಿಚೆಗೆ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಆರೋಗ್ಯ ಜಾಗೃತಿ ನೀಡಲು ಆಯ್ಕೆ ಮಾಡಲಾದ ಜಾನಪದ ಕಲಾ ತಂಡಗಳಿಗೆ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.  

    ತಾಯಿ ಮಗುವಿನ ಆರೈಕೆ, ಗಭರ್ಿಣಿಯರ ಆರೈಕೆ, ಆರೋಗ್ಯ ಸೇವೆ ಹಾಗೂ ವಿವಿಧ ಸಾಂಕ್ರಾಮಿಕ ರೋಗಗಳಾದ ಹೆಚ್1ಎನ್1, ಮಲೇರಿಯಾ, ಡೆಂಗ್ಯು ಚಿಕುನ್ಗುನ್ಯಾ, ಆನೆಕಾಲು, ಮೆದಳುಜ್ವರ, ಕ್ಷಯ, ಕುಷ್ಠ ರೋಗಗಳ ನಿಯಂತ್ರಣದಲ್ಲಿ ಸಮುದಾಯದ ಜವಾಬ್ದಾರಿ ಮತ್ತು ಆಯುಷ್ಮಾನ್ ಭಾರತ ಆರೋಗ್ಯ ಕನರ್ಾಟಕ ಯೋಜನೆ ಕುರಿತು ಮನಮುಟ್ಟುವಂತೆ ಕಲಾ ತಂಡಗಳು ಅರಿವು ಮೂಡಿಸಬೇಕು ಎಂದರು. 

ಈ ಸಂದರ್ಭದಲ್ಲಿ ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ರವೀಂದ್ರನಾಥ್.ಎಂ.ಹೆಚ್, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಗುರುನಾಥ.ಬಿ.ಚೌವ್ಹಾಣ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಓಂಪ್ರಕಾಶ ಕಟ್ಟಿಮನಿ ಅವರು ಮಾತನಾಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಸ್ವಾಗತಿಸಿದರು. 

 ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಸತ್ಯವತಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಾ ನಾಯ್ಕ್, ಜಿಲ್ಲೆಯ ನಾಲ್ಕು ಕಲಾತಂಡಗಳು ಮುಖ್ಯಸ್ಥರು, ಸದಸ್ಯರು ಸೇರಿದಂತೆ,  ಇತರರು ಇದ್ದರು 

ಸುದ್ದಿ ಓದಿ