ವಿಜಯಪುರ

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಹಾವೀರ ಜಯಂತಿ

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಹಾವೀರ ಜಯಂತಿ

ಲೋಕದರ್ಶನ ವರದಿ 

ವಿಜಯಪುರ: ಮಹಾವೀರರು ಸಾರಿದ ಅಹಿಂಸೆ, ಸತ್ಯ, ಅಪರಿಗ್ರಹ ಮತ್ತು ಆತ್ಮಸಂಯಮದ ತತ್ವಗಳು ಇಂದಿನ ಸಮಾಜದಲ್ಲಿ ಅತ್ಯಂತ ಪ್ರಸ್ತುತವಾಗಿವೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.  

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಹಾವೀರ ಜಯಂತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ ಭಾವಪೂರ್ಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳ ಬೆಳವಣಿಗೆಯೂ ಅಗತ್ಯವಿದೆ. ವಿದ್ಯಾರ್ಥಿನಿಯರು ಮಹಾವೀರರ ಆದರ್ಶಗಳು ಹಾಗೂ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಸುಧಾರಣೆಗೆ ಕೈಜೋಡಿಸಬೇಕೆಂದು ಎಂದರು. 

ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್‌.ಲಕ್ಕಣ್ಣನವರ್, ಪ್ರೊ.ನಾಮದೇಗೌಡ, ಪ್ರೊ.ರಾಜಕುಮಾರ್ ಮಾಲಿಪಾಟೀಲ್, ಪ್ರೊ.ಜ್ಯೋತಿ ಉಪಾಧ್ಯಾಯ, ಡಾ.ಜಾಯ್ ಹೊಸಕೇರಿ, ಭಾಗ್ಯಶ್ರೀ ದೊಡ್ಡಮನಿ, ಗೀತಾ ಸರಳಾಯಿ, ವಿಜಯಕುಮಾರ್ ಎಸ್‌. ಹಿರೇಮಠ್, ಸಿದ್ದು ಕಟ್ಟಿಮನಿ, ಸತಿ ನಿಲಯಗಳ ನಿಲಯಪಾಲಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. . 


ಸುದ್ದಿ ಓದಿ