ಚಿಕ್ಕೋಡಿ

ಕೊರೊನಾ ಟೆಸ್ಟಿಂಗ್ ಕಿಟ್ ವಿತರಿಸಿದ ಸಂಸದ ಜೊಲ್ಲೆ

ಕೊರೊನಾ ಟೆಸ್ಟಿಂಗ್ ಕಿಟ್ ವಿತರಿಸಿದ ಸಂಸದ  ಜೊಲ್ಲೆ

ಚಿಕ್ಕೋಡಿ ೩೧: ಕೊರೊನಾ ನಿಯಂತ್ರಿಸುವಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಕೊಡುಗೆ ದೊಡ್ಡದಿದೆ. ಗ್ರಾಮದಲ್ಲಿರುವ ಜನರನ್ನು ಪರೀಕ್ಷೆಗೆ ಒಳಪಡಿಸಿ ಪೊಸಿಟಿವಿಟಿ ಬಂದಿರುವ ಸೋಂಕಿತರಿಗೆ ದೈರ್ಯ ಸಲಹೆ ಸೂಚನೆ ನೀಡುವ ಜವಾಬ್ದಾರಿ ಅಂಗನವಾಡಿ-ಆಶಾ ಕಾರ್ಯಕರ್ತರಿಗೆ ಮೇಲಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. 

ಇಲ್ಲಿನ ಬಿಜೆಪಿ ಸಂಸದರ ಕಚೇರಿಯಲ್ಲಿ ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಕೋವಿಡ್ ಟೆಸ್ಟಿಂಗ ಕಿಟ್ ವಿತರಿಸಿ ಮಾತನಾಡಿದರು.  

ಚಿಕ್ಕೋಡಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 4500 ಟೆಸ್ಟಿಂಗ್ ಕಿಟ್ ಮತ್ತು 7 ಸಾವಿರ ಐಸೋಲೇಶನ್ ಕಿಟ್ ನೀಡಲಾಗುತ್ತದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಪ್ರತಿ ಗ್ರಾಮದ ಮನೆ ಮನೆಗೆ ತೆರಳಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಬೇಕು. ಯಾವ ವ್ಯಕ್ತಿಗೆ ಪೊಸಿಟಿವ ಬಂದಿದೆ. ಅಂತಹ ವ್ಯಕ್ತಿಗೆ ಆರೋಗ್ಯ ಇಲಾಖೆಯ ಮಾರ್ಗಸೂಚಿ ತಿಳಿಸಿ ಅವರಿಗೆ ಮೆಡಿಕಲ್ ಕಿಟ್ ನೀಡಬೇಕು ಎಂದು ಸಲಹೆ ನೀಡಿದರು. 

ಹಳ್ಳಿಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಸಾರ್ವಜನಿಕರು ಎಚ್ಚರಿಕೆದಿಂದ ಇರಬೇಕು. ಅನಗತ್ಯವಾಗಿ ಹೊರಗೆ ತಿರುಗಾಡದೇ ಮನೆಯಲ್ಲಿದ್ದುಕೊಂಡು ಕೊರೊನಾ ಮುಕ್ತ ಮಾಡಲು ಸಹಕರಿಸಬೇಕು ಎಂದರು. 

ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ ಮಾತನಾಡಿ, ನಗರಪಟ್ಟಣ ಪ್ರದೇಶಕ್ಕಿಂತ ಹಳ್ಳಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ತಡೆಯುವುದು ಪ್ರತಿಯೊಬ್ಬರ ಕರ್ತವ್ಯ ಇದೆ. ಹಳ್ಳಿಯ ಜನರು ನಿರ್ಲಕ್ಷೆ ಮಾಡದೇ ಕೊರೊನಾ ರೋಗ ಲಕ್ಷಣವಿದ್ದರೇ ತಕ್ಷಣಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ವೈದ್ಯರ ಸಲಹೆ ಮೇರಿಗೆ ಮನೆಯಲ್ಲಿದ್ದುಕೊಂಡು ಕೊರೊನಾ ಸೋಂಕಿನಿಂದ ಪಾರಾಗಲು ಪ್ರಯತ್ನಿಸಬೇಕು ಎಂದರು. 

ತಾಲೂಕಾ ಆರೋಗ್ಯಾಧಿಕಾರಿ ಡಾ, ವಿಠ್ಠಲ ಶಿಂಧೆ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ, ಬಸವಜ್ಯೋತಿ ಯುಥ್ ಪೌಂಡೇಶನ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಸಿಡಿಪಿಒ ದೀಪಾ ಕಾಳೆ, ವಿಶ್ವನಾಥ ಕಾಮಗೌಡ, ನಾಗರಾಜ ಮೇಧಾರ, ಬಾಬು ಮಿರ್ಜೆ, ಸಂಜಯ ಅರಗೆ, ಪ್ರಭು ಡಬ್ಬನ್ನವರ, ಮಹೇಶ ನೂಲಿ, ಶಕುಂತಲಾ ಡೋಣವಾಡೆ ಮುಂತಾದವರು ಇದ್ದರು. 

ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಾಂಭವಿ ಅಶ್ವಥಪೂರ ಸ್ವಾಗತಿಸಿದರು. 


ಸುದ್ದಿ ಓದಿ