ಜಮಖಂಡಿ

ಕುಡಿಯುವ ನೀರು ಸರಬರಾಜು ಶುದ್ಧೀಕರಣ ಘಟಕಕ್ಕೆ ಶಾಸಕ ಭೇಟಿ

ಕುಡಿಯುವ ನೀರು ಸರಬರಾಜು ಶುದ್ಧೀಕರಣ ಘಟಕಕ್ಕೆ ಶಾಸಕ ಭೇಟಿ

ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ಹಿಗ್ಗಾ-ಮುಗ್ಗಾ ತರಾಟೆ

ಜಮಖಂಡಿ: 22: ನಗರದ ಲಕ್ಷಾಂತರ ಜನರಿಗೆ ಪೂರೈಕೆ ಮಾಡುವ ಕುಡಿಯುವ ನೀರು ಶುದ್ಧವಾಗಿರಬೇಕು. ಈ ರೀತಿ ಅಸ್ತವ್ಯಸ್ತ ಮಾಡಿ ಬೇಜವಾಬ್ದಾರಿಯಿಂದ ನೀರು ಪೂರೈಕೆ ಮಾಡಿದರೆ ದೇವರು ನಿಮ್ಮನ್ನು ಕ್ಷೇಮಿಸಲಾರ, ಕಲುಷಿತ ನೀರಿನಿಂದ ಜನರ ಆರೋಗ್ಯದ ಪರಿಸ್ಥಿತಿ ಏನು? ಇದನ್ನು ನಾನು ಸಹಿಸುವುದಿಲ್ಲ ಎಂದು ಶಾಸಕ ಜಗದೀಶ ಗುಡಗುಂಟಿ ಖಡಕಕ್ಕಾಗಿ ನಗರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇಲ್ಲಿನ ಚೌಡಯ್ಯ ನಗರದಲ್ಲಿರುವ ಕುಡಿಯುವ ನೀರು ಸರಬರಾಜು ಶುದ್ದೀಕರಣ ಘಟಕಕ್ಕೆ ಶಾಸಕ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ಹಿಗ್ಗಾ-ಮುಗ್ಗಾ ತರಾಟೆ ತೆಗೆದುಕೊಂಡು ಮಾತನಾಡಿದ ಅವರು, ತಂತ್ರಜ್ಞಾನವನ್ನು ಬಳಸಿಕೊಂಡು ಪ್ರತಿನಿತ್ಯ 3 ವಿಭಾಗಗಳಲ್ಲಿ ನೀರು ಶುದ್ಧೀಕರಣಗೊಳಿಸಿ ಅದರಲ್ಲಿರುವ ಕಲ್ಮಶಗಳನ್ನು ಬೇರ್ಪಡಿಸಲು ಬೇಕಾದ ಎಲ್ಲ ರಾಸಾಯನಿಕ ಪೌಡರಗಳನ್ನು ಬಳಸಬೇಕು. ಮತ್ತು ಅದರಲ್ಲಿರುವ ಬ್ಯಾಕ್ಟೀರಿಯಾಗಳನ್ನು ತೆಗೆದು ನೀರಿನ ಗಡಸುತನವನ್ನು ಪರೀಕ್ಷಿಸಬೇಕು. ಇವೆಲ್ಲವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಸರಿಯಾದ ಪ್ರಮಾಣದಲ್ಲಿ ರಾಸಾಯನಿಕ ಡೋಸಿಂಗ್ ಮಾಡಬೇಕು. ಕೇವಲ ಕಾಟಾಚಾರಕ್ಕೆ ಕೆಲಸ ಮಾಡಬೇಡಿ ಎಂದರು.

ಶುದ್ಧೀಕರಣ ಘಟಕದ ಪ್ರಯೋಗಾಲಯ, ಕ್ಲೋರಿನ್ ಕೋಣೆಗೆಯ ಅವ್ಯವಸ್ಥೆ ಬಗ್ಗೆ ಕಿಡಿಕಾರಿದರು. ನೀರು ಶುದ್ದೀಕರಣವಾಗುವ ಸಂದರ್ಭದಲ್ಲಿ ಸಮನಾಗಿ ಸತತ ನೀರು ಬೀಳುತ್ತಿರಬೇಕು ಆದರೆ ಅದು ಇಲ್ಲಿ ನಿರ್ವಹಣೆಯಾಗುತ್ತಿಲ್ಲ ಇದರ ಬಗ್ಗೆ ನಿಗಾವಹಿಸಬೇಕು. ಪ್ರಯೋಗಾಲಯದ ಕೋಣೆಯ ನೋಡಿದ ಶಾಸಕ, ಇದು ಏನು ? ಎಂದು ಪ್ರಶ್ನೀಸಿದರು. ಅಲ್ಲಿನ ಅವ್ಯವಸ್ಥೆ ಕಂಡು. ಲಕ್ಷಾಂತರ ಜನರು ಕುಡಿಯುವ ನೀರಿನ ಘಟಕದಲ್ಲಿ ಯಾವುದೇ ಒಂದು ಸಾಮಗ್ರಿಗಳು ಇಲ್ಲ. ನೀವುಗಳು ಹೇಗೆ ನೀರನ್ನು ಪರೀಕ್ಷ ಮಾಡುತ್ತಿರಾ. ಇದೊಂದು ಪ್ರಯೋಗಾಲಯ ನಾ, ಇದು ಎಂದು ಪ್ರಶ್ನೀಸಿ.  ಲಕ್ಷಾಂತರ ಜನರ ಜೊತೆಗೆ ಆಟವಾಡಿದರೆ. ನಿಮ್ಮನ್ನು ದೇವರು ಕ್ಷೇಮಿಸಲಾರ. ನಿಮಗೆ ಪಾಪ ಅಂಟಿಕೊಳ್ಳುತ್ತದೆ ಎಂದು ಕಿಡಿಕಾರಿದರು. ಈ ಪ್ರಯೋಗಾಲಯದಲ್ಲಿ ಓರ್ವ ಇಂಜಿನೀಯರನ್ನು ನೇಮಕ ಮಾಡಿಕೊಳ್ಳಬೇಕು.  ನೀರಿನ ಶುದ್ದೀಕರಣದ ಬಗ್ಗೆ ನಿಮ್ಮಲ್ಲಿ ಗಂಭೀರತೆಬೇಕು. ಕಾಟಾಚಾರಕ್ಕೆ ನದಿ ನೀರನ್ನು ಸಂಗ್ರಹಿಸಿ ಜನರಿಗೆ ನೀಡಿದರೆ ಹೇಗೆ ಎಂದು ಪ್ರಶ್ನೀಸಿದರು.

ಕೂಡಲೇ ಕುಡಿಯುವ ನೀರು ಶುದ್ದೀಕರಣದ ಒಂದೊಂದು ವಿಭಾಗ ಘಟಕದ ಮೇಲೆ ನೀವು ಸರಿಯಾಗಿ ನಿರ್ವಹಣೆ ಮಾಡಬೇಕು, ನೀರು ಶುದ್ದೀಕರಣ ಮಾಡಲು ಬೇಕಾಗುವ ರಾಸಾಯನಿಕವನ್ನು ತಂದು ಸರಿಯಾದ ಪ್ರಮಾಣದ ಮೇಲೆ ಬೆರಸಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜಗದೀಶ ಗುಡಗುಂಟಿ ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು. 

ಐ.ಎನ್ ಎಕ್ಸಚೇಂಜ್ ಕಂಪನಿಯ ಸಲಹೆ ಪಡೆದುಕೊಂಡು. ಗುತ್ತಿಗೆ ಆಧಾರದ ಮೇಲೆ ಓರ್ವ ಕೆಮಿಸ್ಟ್ ಇಂಜಿನೀಯರನ್ನು ನೇಮಕ ಮಾಡಿ ಪ್ರಯೋಗಾಲಯದಲ್ಲಿ ಉಪಕರಣಗಳನ್ನು ಖರೀದಿಸಿ ಪ್ರತಿ ಹಂತದಲ್ಲು ನೀರಿನ ಶುದ್ದೀಕರಣದ ಬಗ್ಗೆ ಪರೀಕ್ಷೆ ಮಾಡಬೇಕು. ಅದನ್ನು ಕೂಡಲೆ ಕೆಲಸ ಮಾಡಿ. ಇಲ್ಲದಿದ್ದರೆ ನಾನು ನಿಮ್ಮನ್ನು ಬಿಡುವುದಿಲ್ಲ. ಸರಕಾರದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಎಂದರು.

ಶುದ್ದ ಕುಡಿಯುವ ನೀರಿನ ಘಟಕದ ಪ್ರತಿಯೊಂದ ಮಷೀನ್ಗಳನ್ನು ಪರಿಶೀಲನೆ ಮಾಡಿದ ಶಾಸಕ. ನಗರಸಭೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದಂತೆ. ಒಬ್ಬರ ಮೇಲೆ ಮೊತ್ತೊಬ್ಬರ ಹೆಸರು ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡಿದರು.

ಇದೇ ಸಂದರ್ಭದಲ್ಲಿ ತಹಶೀಲ್ದಾರ ಸದಾಶಿವ ಮಕ್ಕೋಜಿ, ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ, ತಾ,ಪಂ, ಇಓ ಗುರುಶಾಂತ ಬಳ್ಕೊಂಡಗಿ, ಇಂಜೀನಿಯರಗಳಾದ ಸುಭಾಷ ಗೌಡರ, ಚೌಗಲಾ ಸೇರಿದಂತೆ ನಗರಸಭೆ ಸಿಬ್ಬಂದಿಗಳು ಇದ್ದರು. 



ಸುದ್ದಿ ಓದಿ