ಸಿರುಗುಪ್ಪ

ಶಾಸಕ ನಾಗರಾಜ್ ಹತ್ತು ಕೋಟಿ ರೂ ಕೆಲಸವನ್ನು ಮಾಡಿಲ್ಲ: ಶಾಸಕ ಸೋಮಲಿಂಗಪ್ಪ

ಶಾಸಕ ನಾಗರಾಜ್ ಹತ್ತು ಕೋಟಿ ರೂ ಕೆಲಸವನ್ನು ಮಾಡಿಲ್ಲ: ಶಾಸಕ ಸೋಮಲಿಂಗಪ್ಪ

ಸಿರುಗುಪ್ಪ : ಕಳೆದ ಬಾರಿಯ ಶಾಸಕ ಬಿ ಎಂ ನಾಗರಾಜ್ ಅವರು ಹತ್ತು ಕೋಟಿ ರೂಪಾಯಿಗಳ ಕೆಲಸವನ್ನು ಮಾಡಿಲ್ಲ ಎಂದು ಶಾಸಕ ಎಂ ಎಸ್ ಸೋಮಲಿಂಗಪ್ಪ ಹೇಳಿದರು.

 ಅಭಯಾಂಜನೇಯ  ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ಮಂಗಳವಾರ ಮಧ್ಯಾಹ್ನ ತಾಲ್ಲೂಕು ಭಾರತೀಯ ಜನತಾ ಪಾರ್ಟಿ  ಕಾರ್ಯಕಾರಿ ಸಭೆಯ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕಾರಣಿ ಸಭೆಯು ಪ್ರಾರಂಭಿಸಿ ಅವರು ಮಾತನಾಡುತ್ತಾ ಪಕ್ಷದ ಸೂಚನೆಗಳಂತೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ ಎಲ್ಲಾ ಕಾರ್ಯಕ್ರಮಗಳಿಗೂ ಭಾಗವಹಿಸುತ್ತಿದ್ದೇನೆ. ಕಳೆದ ಚುನಾವಣೆಯ ನಂತರ ಸಮ್ಮಿಶ್ರ ಸರ್ಕಾರ  ಅಧಿಕಾರಕ್ಕೆ ಬಂದ ಕಾರಣ ಮೊದಲ ಒಂದೂವರೆ ವರ್ಷ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಲಿಲ್ಲ ನಂತರ ಅತಿ ಹೆಚ್ಚಿನ ಅನುಕೂಲವಾದ ಅನುದಾನ ತಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಮಟ್ಟದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದರು ಕಾರ್ಯಕ್ರಮದಲ್ಲಿ ಮುರಹರಿ ಗೌಡ ಜಿಲ್ಲಾಧ್ಯಕ್ಷರು ಬಿಜೆಪಿ ಬಳ್ಳಾರಿ ಗಾಳಿ ಶಂಕರಪ್ಪ ಜಿಲ್ಲಾ ಉಪಾಧ್ಯಕ್ಷರು ಬಿಜೆಪಿ ಬಳ್ಳಾರಿ ರಾಮಕೃಷ್ಣ ಕಾರ್ಯಾಲಯ ಕಾರ್ಯದರ್ಶಿ  ಬಿಜೆಪಿ ಬಳ್ಳಾರಿ ಪಂಪನಗೌಡ ತಾಲ್ಲೂಕು ಅಧ್ಯಕ್ಷರು ಬಿಜೆಪಿ ಸಿರುಗುಪ್ಪ ಬಂಡ್ರಾಳು ಮಲ್ಲಿಕಾರ್ಜುನ  ಕಾರ್ಯದರ್ಶಿ  ತಾಲ್ಲೂಕು ಬಿಜೆಪಿ ಘಟಕ ಸೇರಿದಂತೆ ಮುಖಂಡರು ಹಾಗೂ ಮಂಡಲದ ಮಹಾಶಕ್ತಿ ಮತ್ತು ಶಕ್ತಿಕೇಂದ್ರ ಪ್ರಕೋಷ್ಟದ ಪ್ರತಿನಿಧಿಗಳು ಸೇರಿದಂತೆ ಅನೇಕರು ಇದ್ದರು 

ಸುದ್ದಿ ಓದಿ