ಕಂಪ್ಲಿ

ಬುಡಕಟ್ಟು ಹಕ್ಕಿ ಪಿಕ್ಕಿ ಸಮುದಾಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿದಾಗ ಮಾತ್ರ ಸಮಾಜದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಶಾಸಕ ಜೆ ಎನ್ ಗಣೇಶ

ಬುಡಕಟ್ಟು ಹಕ್ಕಿ ಪಿಕ್ಕಿ ಸಮುದಾಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿದಾಗ ಮಾತ್ರ ಸಮಾಜದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಶಾಸಕ ಜೆ ಎನ್ ಗಣೇಶ

 ಕಂಪ್ಲಿ 07:  ಆದಿವಾಸಿ ಬುಡಕಟ್ಟು ಸಮುದಾಯ ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು ಶಾಸಕ ಜೆ.ಎನ್ ಗಣೇಶ ಹೇಳಿದರು ಪಟ್ಟಣದ 12ನೇ ವಾರ್ಡಿನ ಶಿಕಾರಿ ಕಾಲೋನಿಯಲ್ಲಿರುವ ಆರಾಧ್ಯ ದೇವತೆ ಶ್ರೀ ತುಳುಜಾ ಭವಾನಿ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ಶಾಂತಿ ಹೋಮ ಉಡಿ ತುಂಬುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ ಶೈಕ್ಷಣಿಕ ಮತ್ತು ಅರ್ಥಿಕವಾಗಿ ಹಿಂದುಳಿದ ಸಮುದಾಯವಾಗಿದು ದೇವತೆಗಳು ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ನೀಡಲಿ ಕಾಲೋನಿಯಲ್ಲಿ ನೆಲೆಸಿರುವ ಜನರು ಸಾಕಷ್ಟು ಬದಲಾವಣೆಯೊಂದಿಗೆ ಉತ್ತಮ ಬದುಕು ಸಾಗಿಸುತ್ತಿದ್ದಾರೆ. 

ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ ಕೊಡಿಸುವುದರ ಜೊತೆಗೆ ಉನ್ನತ ಶಿಕ್ಷಣ ಜೊತೆಗೆ ಹುದ್ದೆ ಸಿಗಲಿ ಎಂದರು. ಬೆಂಗಳೂರು ಸಿಸಿಬಿಯಲ್ಲಿ ಪೊಲೀಸ್ ಅಧಿಕಾರಿ ಬಿ.ಎಸ್‌.ಸುಧಾಕರ ಮಾತನಾಡಿ, ಈ ಹಿಂದೆ ಇಲ್ಲಿನ ಶಿಕಾರಿ ಕಾಲೋನಿಯಲ್ಲಿ ನೆಲೆಸಿರುವ ಜನರು ಸಂಕಷ್ಟದೊಂದಿಗೆ ದುಶ್ಚಟಗಳಲ್ಲಿ ತೊಡಗಿಕೊಂಡಿದ್ದರು. ಆದ್ದರಿಂದ ಇಲ್ಲಿನ ಪರಿವರ್ತನೆಯೊಂದಿಗೆ ಬದಲಾವಣೆ ಮಾಡಬೇಕೆಂಬ ಹಿನ್ನಲೆ ತುಳುಜಾ ಭವಾನಿ ದೇವಸ್ಥಾನ ನಿರ್ಮಿಸಲಾಯಿತು. ಇದರಿಂದ ಈಗ ಇಲ್ಲಿನ ಜನರು ಸಾಕಷ್ಟು ಪರಿವರ್ತನೆಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದರು ಮುಖಂಡರಾದ ಹೆಚ್‌.ಪಿ.ಶಿಕಾರಿ ರಾಮು ಮಾತನಾಡಿ, ಬಿ.ಎಸ್‌.ಸುಧಾಕರ್ ಕಂಪ್ಲಿಗೆ ಪಿಎಸ್‌ಐ ಆಗಿ ಬಂದಾಗ, ಇಲ್ಲಿನ ಜನರ ಅಸಹಾಯಕತೆ, ಕಾನೂನು ಬಾಹಿರ ಕೆಲಸಗಳನ್ನು ಗುರುತಿಸಿ, ಕಾಲೋನಿಯ ಪರಿವರ್ತನೆಯ ಉದ್ದೇಶದಿಂದ ದೇವಸ್ಥಾನ ನಿರ್ಮಿಸಿದರು.

ನಂತರ ಇಡೀ ಕಾಲೋನಿಯನ್ನು ಪರಿವರ್ತಿಸಿದ್ದಾರೆ. ಶಾಸಕರು ಅನುದಾನದಿಂದ ದೇವಸ್ಥಾನ ನಿರ್ಮಾಣವಾಯಿತು ಧಾರ್ಮಿಕ ಕಾರ್ಯಗಳು ಶ್ರದ್ಧೆಯಿಂದ ನಡೆಸಲಾಯಿತು ಎಂದರು. ಪೊಲೀಸ್ ಅಧಿಕಾರಿ ಬಿ.ಎಸ್‌.ಸುಧಾಕರ ಹಾಗೂ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು.  ಈ ಸಂದರ್ಭದಲ್ಲಿ ಅಪೆಕ್ಸ್‌ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಮುಖಂಡರಾದ ಬಿ.ನಾರಾಯಣಪ್ಪ, ಶ್ರಿಕಾಂತ ಎಂ.ಸುಧೀರ್, ಬಿ.ಸಿದ್ದಪ್ಪ, ಜಿ.ಜಿ.ಚಂದ್ರಣ್ಣ, ನಾಗೇಂದ್ರ ಅಯೋದಿ.ವೆಂಕಟೇಶ ಸೇರಿದಂತೆ ಇತರರು ಇದ್ದರು.  


ಸುದ್ದಿ ಓದಿ