ಕಂಪ್ಲಿ

ಶಾಸಕ ಗಣೇಶ ಇವರಿಂದ ವಾಲ್ಮೀಕಿ ಜಾತ್ರೆಗೆ ಒಂದು ಲೋಡ್ ಅಕ್ಕಿ ದೇಣಿಗೆ

ಶಾಸಕ ಗಣೇಶ ಇವರಿಂದ ವಾಲ್ಮೀಕಿ ಜಾತ್ರೆಗೆ ಒಂದು ಲೋಡ್ ಅಕ್ಕಿ ದೇಣಿಗೆ

ಕಂಪ್ಲಿ 06:  ಫೆ.8 ಮತ್ತು 9ರಂದು ವಾಲ್ಮೀಕಿ ಜಾತ್ರೆ ನಡೆಯುವ ಹಿನ್ನಲೆ ಶಾಸಕ ಜೆ.ಎನ್‌.ಗಣೇಶ ಇವರು ಅನ್ನದಾಸೋಹಕ್ಕಾಗಿ ಒಂದು ಲೋಡ್ ಅಕ್ಕಿಯನ್ನು ದೇಣಿಗೆಯಾಗಿ ಮಿನಿ ಲಾರಿಯ ಮೂಲಕ ಕಂಪ್ಲಿಯಿಂದ ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಸಂಸ್ಥಾನ ಮಠಕ್ಕೆ ಶುಕ್ರವಾರ ಕಳುಹಿಸಿದರು.  

ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಶಾಸಕ ಗಣೇಶ ಅವರ ನಿರ್ದೇಶನದ ಮೇರೆಗೆ ವಾಲ್ಮೀಕಿ ಸಮಾಜದ ಮುಖಂಡರು ಅಕ್ಕಿ ಲೋಡನ್ನು ಕಳುಹಿಸಿಕೊಟ್ಟರು.  ಈ ಸಂದರ್ಭದಲ್ಲಿ ಮುಖಂಡರಾದ ಬಿ.ನಾರಾಯಣಪ್ಪ, ಹಾಲ್ಮೋರೋ ಈರಣ್ಣ, ಟ್ಯಾಕ್ಸಿ ಈರಣ್ಣ, ವಾಲ್ಮೀಕಿ ರಾಘವೇಂದ್ರ, ಫ್ಯಾಕ್ಟ್ರಿ ಶೇಖರ್, ಕೊಟ್ಟಾಲ್ ವಿರೇಶ ಹಾಗೂ ಸಮಾಜದ ಇತರರು ಇದ್ದರು.  


ಸುದ್ದಿ ಓದಿ