3.20 ಕೋಟಿ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕ ಬಸವರಾಜ್ ಶಿವಣ್ಣನವರ್ ಅವರಿಂದ ಗುದ್ದಲಿ ಪೂಜೆ
ಬ್ಯಾಡಗಿ 19 : ಪಟ್ಟಣದಲ್ಲಿ 3ಕೋಟಿ 20 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.ಪ್ರಾಂಶಿ ಮತ್ತು ಲೋಕೋಪಯೋಗಿ ಇಲಾಖೆಯ ವತಿಯಿಂದ ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿ ಬ್ಯಾಡಗಿ ಸರ್ಕಲ್ ಮತ್ತು ಗುಮ್ಮನ ಹಳ್ಳಿ ಸರ್ಕಲ್ ಅಂಗರಗಟ್ಟಿ ಸರ್ಕಲ್ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ನಡುವೆಯೂ ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿಲ್ಲ,ತಾಲ್ಲೋಕಿನ ಸಮಗ್ರ ಯೋಜನೆಗೆ ಹಲವಾರು ಕಾರ್ಯಕ್ರಮಗಳನ್ನ ರೂಪಿಸಲಾಗಿದೆ,ಲೋಕೋಪಯೋಗಿ ಇಲಾಖೆಯಿಂದ . ಜಿಲ್ಲಾ ಪಂಚಾಯತ್ ವತಿಯಿಂದರಸ್ತೆ ನಿರ್ಮಾಣ ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಲಾಗಿದೆ.
ಆದೇರೀತಿ ಜಿಲ್ಲಾಪಂಚಾಯ್ತಿಯಿಂದ ಪಟ್ಟಣದಲ್ಲಿ ಹಾಗೂ ಗ್ರಾಮಗಳಲ್ಲಿ ರಸ್ತೆ ಕುಡಿಯುವ ನೀರು ವಿದ್ಯುತ್ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶ್ರಮಿಸಲಾಗುತ್ತಿದೆ.ತಾಲ್ಲೋಕಿನಲ್ಲಿ ಅಭಿವೃದ್ದಿ ಯೋಜನೆಗಳು ಹಿಂದೆ ಬಿದ್ದಿಲ್ಲ,. ನಮ್ಮ ತಾಲ್ಲೋಕಿನ ಅಭಿವೃದ್ದಿ ನಮ್ಮ ಜನರ ಸಮಸ್ಯೆ ಪರಿಹಾರ ಮಾಡುವುದೇ ನಮ್ಮ ಆಧ್ಯತೆ,ನಾನು ಮಾತಾಡುವುದಕ್ಕಿಂತ ನಾನು ತಾಲ್ಲೋಕಿನಲ್ಲಿ ಮಾಡಿರುವ ಅಭಿವೃದ್ದ ಕೆಲಸಗಳು ಮಾತನಾಡುತ್ತವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಗ್ಯಾರಂಟಿ ಅಧ್ಯಕ್ಷ ಶಂಭನಗೌಡ ಪಾಟೀಲ್ ಮುಖಂಡ. ನಾಗರಾಜ್ ಅನ್ವೇರಿ. ಚನ್ನಬಸಪ್ಪ ಹುಲ್ಲತ್ತಿ. ಗಂಗಣ್ಣ ಎಲಿ. ರಾಜೇಸಾಬ್ ಕಲ್ಯಾಳ. ಡಾಕ್ಟರ್ ಸೌದಾಗರ್. ಫಕೀರಮ್ಮ ಚಲವಾದಿ. ದುರ್ಗೇಶ್ ಗೋಣೆಮ್ಮನವರ್. ಖಾದರ್ ಸಾಬ್ ದೊಡ್ಮನಿ. ಮಂಜೂರಲ್ಲಿ ಹಕ್ಕಿಮ್. ಪಿಡಬ್ಲ್ಯೂಡಿ ಇಂಜಿನಿಯರ್ ಆಂಜನೇಯಪ್ಪ. ಗುತ್ತಿಗೆದಾರರಾದ ಎಸ್ ವಿ ಹಿರೇಮಠ. ಪುರಸಭೆ ಮುಖ್ಯ ಅಧಿಕಾರಿ ವಿನಯ್ ಕುಮಾರ್ ಹೊಳೆಯಪ್ಪ ಗೋಳ ಹಾಗೂ ಅನೇಕರು ಉಪಸ್ಥಿತರಿದ್ದರು.