ರಾಷ್ಟ್ರೀಯ

ಸೆನ್ಸೆಕ್ಸ್: ಆರಂಭಿಕ ವಹಿವಾಟಿನಲ್ಲಿ 76 ಅಂಕ ಏರಿಕೆ

ಸೆನ್ಸೆಕ್ಸ್: ಆರಂಭಿಕ ವಹಿವಾಟಿನಲ್ಲಿ 76 ಅಂಕ ಏರಿಕೆ

ಮುಂಬೈ, ಅ 27 : ಹಣಕಾಸು, ಆರೋಗ್ಯರಕ್ಷಣೆ, ಎಫ್‍ಎಂಸಿಜಿ ಷೇರುಗಳಿಗೆ ಹೊಸ ಖರೀದಿ ಉತ್ಸಾಹ ಕಂಡುಬಂದ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಮಂಗಳವಾರ ಆರಂಭಿಕ ವಹಿವಾಟಿನಲ್ಲಿ 76 ಅಂಕ ಏರಿಕೆ ಕಂಡು 40,222.40 ಕ್ಕೆ ತಲುಪಿದೆ.ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‍ಎಸ್‍ಇ)ದ ಸೂಚ್ಯಂಕ ನಿಫ್ಟಿ ಸಹ 33.40 ಅಂಕ ಏರಿಕೆ ಕಂಡು 11,801.15 ಕ್ಕೆ ತಲುಪಿದೆ.ಸೆನ್ಸೆಕ್ಸ್ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 40,295.14 ಮತ್ತು 39,978.39ರಲ್ಲಿತ್ತು.

ನಿಫ್ಟಿ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 11,818.85 ಮತ್ತು 11,723 ರಲ್ಲಿತ್ತು.ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ  16 ಏರಿಕೆ ಕಂಡಿದ್ದರೆ, 14 ಕಂಪೆನಿ ಷೇರುಗಳು ಕುಸಿದಿವೆ. ಕೊಟಕ್ ಬ್ಯಾಂಕ್, ನೆಸ್ಲೆ ಇಂಡಿಯಾ, ಎನ್‌ಟಿಪಿಸಿ, ಏಷ್ಯನ್ ಪೇಂಟ್ಸ್, ಬಜಾಜ್‍ ಫೈನಾನ್ಸ್ ಲಾಭ ಕಂಡಿವೆ.ಉಳಿದಂತೆ, ಇನ್ಫೋಸಿಸ್, ಇಂಡಸ್ಇಂಡ್ ಬ್ಯಾಂಕ್ ,ಒಎನ್‍ಜಿಸಿ ಮತ್ತು ಸನ್ ಫಾರ್ಮಾ ನಷ್ಟ ಕಂಡಿವೆ.


ಸುದ್ದಿ ಓದಿ