ಹೂವಿನಹಡಗಲಿಯಲ್ಲಿ ಎಂ.ಪಿ.ರವೀಂದ್ರ ಅಂತ್ಯಸಂಸ್ಕಾರ, ನೆನಪು ಮಾತ್ರ

ಹೂವಿನಹಡಗಲಿಯಲ್ಲಿ ಎಂ.ಪಿ.ರವೀಂದ್ರ ಅಂತ್ಯಸಂಸ್ಕಾರ, ನೆನಪು ಮಾತ್ರ

ಹೂವಿನಹಡಗಲಿ 04: ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ ಅವರ ಪುತ್ರ ಮಾಜಿ ಶಾಸಕ ಎಂ.ಪಿ.ರವೀಂದ್ರ (49)ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದು, ತಂದೆಯ ಸಮಾಧಿ ಬಳಿ ಅಂತ್ಯಕ್ರಿಯೆ ನಡೆಯಿತು. ಇನ್ನು ನೆನಪು ಮಾತ್ರ.

      ಪಟ್ಟಣದ ತಾಲೂಕು ಕ್ರಿಡಾಂಗಣದಲ್ಲಿ ಭಾನುವಾರ ಬೆಳಿಗ್ಗೆ 9.30ಕ್ಕೆ ಯುವನಾಯಕ,ಮಾಜಿ ಶಾಸಕ ಎಂ.ಪಿ.ರವೀಂದ್ರ ರವರ ಪ್ರಾಥರ್ಿವ ಶರೀರ ದರ್ಶನಕ್ಕಾಗಿ ರಾಜ್ಯದ ನಾನಾ ಕಡೆಗಳಿಂದ ಮಾಜಿ,ಹಾಲಿ ಸಚಿವರು,ಶಾಸಕರು,ಅಭಿಮಾನಿಗಳು, ಕಾರ್ಯಕರ್ತರು, ಸಾರ್ವಜನಿಕರು ಆಗಮಿಸಿ ಅಂತಿಮ ದರ್ಶನ ಪಡೆದರು.

ಎಂ.ಪಿ.ರವೀಂದ್ರ ಅವರ ಪ್ರಾಥರ್ಿವ ಶರೀರ ಬಳಿ ಸಹೋದರಿಯರಾದ ಎಂ.ಪಿ.ವೀಣಾ,ಸುಮಾ,ಲತಾ ಅವರ ತಾಯಿ ರುದ್ರಾಂಬ ಪ್ರಕಾಶ ,ಅಳಿಯ ಮಹಾಂತೇಶ ಕುಟುಂಬದ ಸದಸ್ಯರು ಇದ್ದರು.ಅಂತಿಮ ದರ್ಶನಕ್ಕೆ ಬಂದಿದ್ದ ಸಾರ್ವಜನಿಕರಿಗೆ, ಅಭಿಮಾನಿಗಳಿಗೆ ಪಟ್ಟಣದಲ್ಲಿ ವರ್ತಕರಿಂದ ಉಪಹಾರವನ್ನು ಮಾಡಿಸಲಾಗಿತ್ತು. ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ಸ್ವಯಂ ಘೋಷಿತವಾಗಿ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದವು. 

  ರಾಜ ರಾಜಕಾರಣದಲ್ಲಿ ಹರಪನಹಳ್ಳಿಯನ್ನು ದಾವಣಗೆರೆಯಿಂದ ಬಳ್ಳಾರಿಗೆ ಸೇರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಒತ್ತಾಯಿಸಿ 371(ಜೆ) ಕೊಡಿಸುವಲ್ಲಿ ಯಶಸ್ವಿಯಾಗಿದ್ದರು ಜತೆಗೆ ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು.

   ತಂದೆ ಎಂ.ಪಿ.ಪ್ರಕಾಶ ರವರು ಕಟ್ಟಿದ ರಂಗಭಾರತಿಯ ಕಾಯರ್ಾಧ್ಯಕ್ಷರಾಗಿ ಕಟ್ಟಿ ಬೆಳೆಸಿದರು.ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದ ಎಂ.ಪಿ.ರವೀಂದ್ರ ಅವರ ಅಗಲಿಕೆಯಿಂದ ಮಲ್ಲಿಗೆನಾಡು ಶೋಕ ಸಾಗರದಲ್ಲಿ ಮುಳುಗಿದೆ. ಅವರ ಅಗಲಿಕೆಗೆ ಮುಖಂಡರು,ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಭಾನುವಾರ ಬೆಳಿಗ್ಗೆ ಅವರ ತೋಟದ ಮನೆಯಲ್ಲಿ ಪಾಥರ್ೀವ ಶರೀರಕ್ಕೆ ಅವರ ಅಭಿಮಾನಿಗಳು, ಸ್ಮೇಹಿತರು ಅಂತಿಮ ನಮನ ಸಲ್ಲಿಸಿದರು. 

ಅಂತ್ಯಕ್ರಿಯೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶಗುಂಡುರಾವ್, ಶಾಸಕರಾದ ಪಿ.ಟಿ.ಪರಮೇಶ್ವರನಾಯ್ಕ, ಭಿಮಾನಾಯ್ಕ, ತುಕರಾಂ, ಆನಂದಸಿಂಗ್, ಶ್ರೀರಾಮುಲು, ಅಮರೇಗೌಡ ಬಯ್ಯಾಪುರ, ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸವನಗೌಡ, ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ಬಿ.ಚಮದ್ರನಾಯ್ಕ, ನೇಮಿರಾಜನಾಯ್ಕ, ಡಿ.ಆರ್.ಪಾಟೀಲ, ಹೆಚ್.ಪಿ.ಮಂಜುನಾಥ, ಎಸ್.ಎಸ್.ಪಾಟೀಲ, ಗವಿಮಠದ ಡಾ.ಹಿರಿಶಾಂತವೀರಸ್ವಾಮೀಜಿ, ಹಿರೇಮಲ್ಲನಕೆರೆ ಮಠದ ಚನ್ನಬಸವಸ್ವಾಮೀಜಿ, ನಂದಿಪುರದ ಮಹೇಶ್ವರಸ್ವಾಮೀಜಿ, ಹಿರೇಹಡಗಲಿ ಹಾಲಪ್ಪಜ್ಜ, ಅಳವಂಡಿ ಕಟ್ಟಿಮನಿ ಹಿರೇಮಠದ ಸಿದ್ದಲಿಂಗಸ್ವಾಮಿ, ನೀಲಗುಂದ ಚನ್ನಬಸವ ಶಿವಯೋಗಿ ಸೇರಿದಂತೆ ಹರ-ಗುರು ಚರ ಮೂತರ್ಿಗಳು ಅಂತಿಮ ನಮನ, ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು.

 

ಸುದ್ದಿ ಓದಿ