ವಾಲ್ಮೀಕಿ ವಿದ್ಯಾವರ್ಧಕ ಸಂಘದ ಲೋಗೋ ಬಿಡುಗಡೆ
ವಾಲ್ಮೀಕಿ ವಿದ್ಯಾವರ್ಧಕ ಸಂಘದ ಲೋಗೋ ಬಿಡುಗಡೆ
ಹೊಸಪೇಟೆ 26: ವಾಲ್ಮೀಕಿ ನಾಯಕ ಪದವೀಧರ ವಿದ್ಯಾವರ್ಧಕ ಸಂಘದ ಲೋಗೋ ಬಿಡುಗಡೆ ಹಾಗೂ ಸದಸ್ಯತ್ವ ಅಭಿಯಾನಕ್ಕೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿಗಳಿಂದ ಚಾಲನೆ ನೀಡಲಾಯಿತು.
ಹೊಸಪೇಟೆಯ ವಾಲ್ಮೀಕಿ ನಾಯಕ ಸಮಾಜದ ಕೆಲ ಸಮಾನ ಮನಸ್ಕಪದವೀಧರರು ಸೇರಿ ವಾಲ್ಮೀಕಿ ನಾಯಕ ಪದವೀದರರ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಅಮೂಲ್ಯ ಬದಲಾವಣೆ ಈ ಸಂಘದ ಮುಖ್ಯ ಗುರಿಯಾಗಿದೆ.
ಈ ಸಂಘದ ಪದಾಧಿಕಾರಿಗಳು 25.10.2024 ರಂದು ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನ ಹಳ್ಳಿಗೆ ತೆರಳಿ ಪೀಠಾಧ್ಯಕ್ಷರಾದ ಪ್ರಸನ್ನಾನಂದ ಪುರಿ ಸ್ವಾಮಿಜಿಗಳ ಅಮೃತ ಹಸ್ತದಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು ಹಾಗೂ ಸಂಘದ ಲೋಗೊವನ್ನು ಕರ್ನಾಟಕ ಘನ ಸರ್ಕಾರದ ಸಹಕಾರ ಸಚಿವರ ಕೆ.ಎನ್.ರಾಜಣ್ಣ ಇವರ ಧರ್ಮಪತ್ನಿ ತುಮಕೂರು ಜಿಲ್ಲಾ ಧರ್ಮದರ್ಶಿಗಳಾದ ಶಾಂತಲಾ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು ಸುಶಿಕ್ಷಿತ ಪ್ರಜ್ಞಾವಂತ ಯುವಕರ ಕಾರ್ಯ ಯಶಸ್ವಿಯಾಗಲಿ ಶಿಕ್ಷಣ ಕ್ಷೇತ್ರದಲ್ಲಿ ಸಮಾಜದವರು ಕ್ರಾಂತಿ ಮಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ವಿಜಯನಗರ ಜಿಲ್ಲಾ ಧರ್ಮದರ್ಶಿಗಳಾದ ಬಿ.ಎಸ್. ಜಂಬಯ್ಯನಾಯಕ, ಸಂಘದ ಅಧ್ಯಕ್ಷ ಡಾಽಽ ಗುಂಡಿ ಮಾರುತಿ, ಪ್ರಧಾನ ಕಾರ್ಯದರ್ಶಿ ಗೋಸಲಬಸವರಾಜ್, ಸಂಚಾಲಕ ಕಾರ್ಯದರ್ಶಿ ಎನ್.ವೆಂಕಟೇಶ್, ಕಿರಣ್ ಹಂಪಿ ಪ್ರಕಾಶ್ಗುಂಡಿ, ಬಂಡಿ ಶ್ರೀಕಾಂತ, ಸದಸ್ಯರಾದ ಕಿಚಿಡಿ ಶಿವು, ಬಾಣದ ಮುರಳಿ, ಡಾ. ಯಲ್ಲೇಶ್ ಪೂಜಾರಿ ಹೊನ್ನೂರ್ಪ, ಬಂಡ ಅರುಣ್ ಕುಮಾರ್ ಇತರರು ಉಪಸ್ಥಿತರಿದ್ದರು.