ಸ್ಥಳಿಯವಾಗಿ ಲಭ್ಯವಿರುವ ಕಾಂಗ್ರೇಸ ಅಭ್ಯರ್ಥಿ ಪಠಾಣ: ಸತೀಶ ಜಾರಕಿಹೋಳಿ
ಸ್ಥಳಿಯವಾಗಿ ಲಭ್ಯವಿರುವ ಕಾಂಗ್ರೇಸ ಅಭ್ಯರ್ಥಿ ಪಠಾಣ: ಸತೀಶ ಜಾರಕಿಹೋಳಿ
ಶಿಗ್ಗಾವಿ 08: ಸ್ಥಳಿಯವಾಗಿ ದಿನದ 24 ಗಂಟೆ ಲಭ್ಯವಿರುವ ಕಾಂಗ್ರೇಸ ಅಭ್ಯರ್ಥಿ ಯಾಸೀರಹ್ಮದಖಾನ ಪಠಾಣ ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಸಚಿವ ಸತೀಶ ಜಾರಕಿಹೋಳಿ ಹೇಳಿದರು.
ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಯಾಸೀರಹ್ಮದಖಾನ ಪಠಾಣ ಪರ ಮತಯಾಚಿಸಿ ಮಾತನಾಡಿದ ಅವರು ಕಾಂಗ್ರೇಸ ಅಭ್ಯರ್ಥಿ ಸಾಮಾನ್ಯ ಕಾರ್ಯಕರ್ತ ಆತನಿಗೆ ಕಾಂಗ್ರೇಸ ಹೈಕಮಾಂಡ ಟಿಕೇಟ ಘೋಷಿಸಿದೆ ಅವರನ್ನು ಗೆಲ್ಲಿಸುವುದು ನಮ್ಮ ನಿಮ್ಮೇಲ್ಲರ ಜವ್ದಾಬಾರಿಯಾಗಿದೆ ಅಲ್ಲದೇ ರಾಜ್ಯದಲ್ಲಿ ಇರುವುದು ಕಾಂಗ್ರೇಸ ಸರಕಾರ ಇನ್ನೂ ಮೂರುವರೇ ವರ್ಷ ಕಾಂಗ್ರೇಸ ಸರಕಾರವಿರುವ ಕಾರಣ ಹಾಗೂ ಸಿದ್ದರಾಮಯ್ಯನವರಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬಲು ಕಾರಣವಾಗುತ್ತದೆ.
ಕಾಂಗ್ರೇಸ ಸರಕಾರ ಪಂಚ ಗ್ಯಾರಂಟಿಗಳು ಎಲ್ಲ ಮಹಿಳೆಯರಿಗೆ ಇರುವ ಕಾರಣ ಪುರುಷರು ಅಸಮಾಧಾನ ಮಾಡಿಕೊಳ್ಳಬಾರದು ಏಕೆಂದರೆ ಮಹಿಳೆಗೆ ಯೋಜನೆ ಕೊಡುವುದರಿಂದ ಆ ಇಡಿ ಕುಟುಂಬ ಸ್ವಾವಲಂಬಿಯಾಗಿ ಬದುಕಲು ಮತ್ತು ಅನಾವಶ್ಯಕ ಆರ್ಥಿಕ ವಹಿವಾಟುಗಳು ಸ್ಥಗೀತಗೊಳ್ಳುವ ನಿಮಿತ್ಯ ಆರ್ಥಿಕ ತಜ್ಞರ ಅಭಿಪ್ರಾಯದ ಮೇರೆಗೆ ಮಹಿಳೆಯರಿಗೆ ಯೋಜನೆಯನ್ನು ನೀಡಲಾಗಿದೆ ಎಂದರು.
ಕೆಲವು ಭೂತಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸಗೆ ಹೆಚ್ಚು ಮತಗಳು ಬಂದಿವೆ ಅದೇ ನಿಟ್ಟಿನಲ್ಲಿ ಎಲ್ಲಾ ಭೂತಗಳ ಮತಗಳು ಕಾಂಗ್ರೇಸಗೆ ಬೀಳುವ ಹಾಗೆ ಸಂಘಟನೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಅನೀಲಕುಮಾರ ಪಾಟೀಲ, ಚಿತ್ರದುರ್ಗಾ ಜನರಲ್ ಸೆಕ್ರೆಟರಿ ಕೆ.ಸಂಪತ್ತಕುಮಾರ, ಸಾಂಕ್ರಾಮಿಕ ರೋಗ ತಜ್ಞ ವೈದ್ಯ ಡಾ. ಸುನೀಲಕುಮಾರ ದೊಡ್ಡೇರಿ, ಡಾ.ಪ್ರಭುಗೌಡ ಪಾಟೀಲ, ಸುಬಹಾನಿ ಚೂಡಿಗಾರ, ತಿಪ್ಪಣ್ಣಾ ಕ್ಯಾಲಕೊಂಡ, ಮಾರುತಿ ವಾಲ್ಮೀಕಿ, ಸುರೇಶ ವಾಲ್ಮೀಕಿ, ಗ್ರಾ.ಪಂ. ಸದಸ್ಯೆ ರೇಣುಕಾ ವಾಲ್ಮೀಕಿ, ಪ್ರಕಾಶ ಕ್ಯಾಲಕೊಂಡ, ಮಹ್ಮದಯೂಸುಫ ದೊಡ್ಡಮನಿ, ಮಾಹಬುಬಲಿ ನದಾಫ, ಜಾಫರ ಕಳಸ, ಇಮಾಮಸಾಬ ಕಳಸ, ಅಬ್ಬಾಸಲಿ ನದಾಫ, ಮುನಾಫಸಾಬ ಅತ್ತಿಗೇರಿ ಸೇರಿದಂತೆ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.