ಸೌಂದತ್ತಿ

ಲಿಂ. ಶಿವಬಸವ ಸ್ವಾಮೀಜಿಯವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ

ಲಿಂ. ಶಿವಬಸವ ಸ್ವಾಮೀಜಿಯವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ
ಸವದತ್ತಿಯ ಲಿಂ. ಶಿವಬಸವ ಸ್ವಾಮೀಜಿಯವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ಚ

ಸವದತ್ತಿ: ಶಿವಯೋಗ ಮಂದಿರದಲ್ಲಿ ಲಿಂ.ಸದಾಶಿವ ಶ್ರೀಗಳ ಗರಡಿಯಲ್ಲಿ ಬೆಳೆದ ಸ್ವಾದಿಮಠದ ಲಿಂ.ಶಿವಬಸವ ಮಹಾಸ್ವಾಮೀಜಿಯವರು ಸರಳ ಸಜ್ಜನಿಕೆಯೊಂದಿಗೆ ಸಮಾಜದ ಏಳ್ಗೆಗೆ ಶ್ರಮಿಸುತ್ತಾ ಬಂದಿದ್ದರು ಎಂದು ಮೂರುಸಾವಿರ ಮಠದ ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಸವಳಭಾವಿ ಓಣಿಯ ಸ್ವಾದಿಮಠದ ಆವರಣದಲ್ಲಿ ಲಿಂ. ಶಿವಬಸವ ಸ್ವಾಮೀಜಿಯವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯಹಿಸಿ ಅವರು ಮಾತನಾಡಿದರು.

ಆಶ್ರಮದ ಬದುಕಿನಲ್ಲಿ ವ್ಯಕ್ತಿತ್ವವನ್ನು ಬೆಳೆಸಿಕೊಂಡ ಶ್ರೀಗಳು ಎಲ್ಲ ಶ್ರೀಗಳೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು ಎಂದರು.

ಕುಂದರಗಿ ಅಡವಿ ಸಿದ್ದೇಶ್ವರಮಠದ ಅಮರ ಸಿದ್ದೇಶ್ವರ ಮಹಾಸ್ವಾಮೀಜಿ ಮಾತನಾಡಿ, ಶ್ರೀಮಠಕ್ಕೆ ಸಮರ್ಥ ಉತ್ತರಾಧಿಕಾರಿಗಳ ಅವಶ್ಯಕತೆಯಿದ್ದು, ಎಲ್ಲ ಶ್ರೀಗಳ ಅನುಮತಿಯಂತೆ ಸಮಾಜದ ಜನರ ಇಚ್ಚಾನುಸಾರ ಉತ್ತರಾಧಿಕಾರಿಗಳ ಆಯ್ಕೆಯನ್ನು ಮಾಡಬೇಕೆಂದರು. ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಚಲನಚಿತ್ರ ಜನೇವರಿಯಲ್ಲಿ ತೆರೆಗೆ ಬರಲಿದ್ದು, ಸಕಲ ಭಕ್ತ ಸಂಕುಲ ಪೂಜ್ಯ ಶ್ರೀಗಳ ಜೀವನ ಚರಿತ್ರೆಯನ್ನು ವೀಕ್ಷಿಸಲು ಅವಕಾಶ ಸಿಗಲಿದೆ ಎಂದರು.

ಚಿತ್ತಾಪುರ ಕಂಬಳೀಶ್ವರಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸ್ವಾದಿಮಠದ ಶ್ರೀಗಳ ಒಡನಾಟ ಬಹಳ ಆತ್ಮೀಯತೆಯಿಂದ ಕೂಡಿತ್ತು ಎಂದರು.

ವಿಶ್ವಾಸ ವೈದ್ಯ ಮತ್ತು ಪಂಚನಗೌಡ ದ್ಯಾಮನಗೌಡರ ಮಾತನಾಡುತ್ತಾ ಪಟ್ಟಣದಲ್ಲಿನ ಸ್ವಾದಿಮಠ, ಮೂಲಿಮಠ, ಕಲ್ಮಠ ಹಾಗೂ ಬೆಟಸೂರ ಮಠಗಳು ನಾಲ್ಕು ಸ್ತಂಭಗಳಂತಿದ್ದು, ಸಮಾಜದ ಎಲ್ಲ ವ್ಯಕ್ತಿಗಳನ್ನು ಒಗ್ಗೂಡಿಸಲು ಈ ನಾಲ್ಕು ಸ್ತಂಭಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ಬಂದಿವೆ ಎಂದರು.

ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಚಲನಚಿತ್ರದ ಪೋಸ್ಟರ್ಗಳನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಮುನವಳ್ಳಿ ಸೋಮಶೇಖರ ಮಠದ ಮುರಘೇಂದ್ರ ಮಹಾಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು.

ಧಾರವಾಡ ಮುರುಘಾಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಮುರಗೋಡದ ಶ್ರೀ ನೀಲಕಂಠ ಮಹಾಸ್ವಾಮೀಜಿ, ಬಿದರಿ ಕಲ್ಮಠದ ಶ್ರೀ ಶಿವಲಿಂಗ ಮಹಾಸ್ವಾಮೀಜಿ, ಮೂಲಿಮಠದ ಮಲ್ಲಿಕಾಜರ್ುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವವಹಿಸಿದ್ದರು.

ಶಿವಾನಂದ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಸಚ್ಚಿದಾನಂದ ಸ್ವಾಮೀಜಿ, ಜಡೆ ಸಿದ್ದೇಶ್ವರ ಸ್ವಾಮೀಜಿ,  ಶಿವಾನಂದ ಸ್ವಾಮೀಜಿ, ಅಜ್ಜಯ್ಯ ಸ್ವಾಮೀಜಿ, ಗಂಗಾಧರ ದೀಕ್ಷೀತರು ಹಾಗೂ ನಾಡಿನ ಅನೇಕ ಶ್ರೀಗಳ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿತು. 

ಚಂದ್ರು ಶಾಮರಾಯನವರ, ಶಿವಾನಂದ ಹೂಗಾರ, ಸೌರವ ಚೋಪ್ರಾ, ಬಸವರಾಜ ಗುರಣ್ಣವರ, ಅಲ್ಲಮಪ್ರಭು ಪ್ರಭುನವರ, ಸಂಜೀವ ನವಲಗುಂದ ಹಾಗೂ ಸ್ವಾದಿಮಠದ ಸದ್ಭಕ್ತ ಮಂಡಳಿ ಹಾಗೂ ಶಂಕರಲಿಂಗ ಯುವಕ ಮಂಡಳದ ಸದಸ್ಯರು ಉಪಸ್ಥಿತರಿದ್ದರು.




ಸುದ್ದಿ ಓದಿ