ಕನಸಿನ ಬಲೆಯಲ್ಲಿ ಹೆಣೆದಿರುವ ಜೀವನ
-ಉಮಾದೇವಿ. ಸು. ನಿಂಬಾಳಕರ
ಹಿರೇಮುನವಳ್ಳಿ
ಜೀವನವೇಂದರೆ ಸಾಗುತ್ತಿರುವ ದೋಣಿಯಿದ್ದಂತೆ ನಾವು ಎತ್ತಕಡೆ ಸಾಗುತ್ತೇವೋ ಅತ್ತಕಡೆ ಸಾಗುತ್ತದೆ. ಆದರೆ ಕೆಲವರು ಈ ವಾಕ್ಯವನ್ನು ಒಪ್ಪುವುದಿಲ್ಲ ಕಾರಣ ಹಣೆಬರಹ ಎಂಬ ಬಲೆಯಲ್ಲಿ ಮರೆಯಾಗಿರುತ್ತಾರೆ , "ನಮ್ಮ ಹಣೆಬರಹವಿದ್ದಂತೆ ಆಗುತ್ತದೆ ಎಂದು ಕೊಳ್ಳುತ್ತಾರೆ."
ಆದರೆ ಚಾಣಕ್ಯ ಹೇಳಿರುವಂತೆ "ನಮ್ಮ ಹಣೆಬರಹದಲ್ಲಿ ಪ್ರಯತ್ನ ಪಟ್ಟರೇ ಎಲ್ಲವು ಸಾಧ್ಯವಾಗುತ್ತದೆ ಎಂದು ಬರೆದಿದ್ದರೆ" ಎಂಬ ಮಾತು ನಿಜ ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ನಮ್ಮಲ್ಲಿ ಸಾದಿಸುವ ಛಲ ಒಂದಿರಬೇಕು.
ಹೀಗೆ ಒಂದು ಉದಾಹರಣೆಯನ್ನು ಕಾಣೋಣ ಒಂದು ಊರಲ್ಲಿ ಗಂಗೆ ಎಂಬ ಹೆಸರಿನ ಹುಡುಗಿ ಇದ್ದಳು ಆಕೆಯದು ತುಂಬಾ ಕಡು ಬಡತನ ಆಕೆಗೆ ಕನಸು ಕಾಣುವ ಹಚ್ಚು ಯಾವಾಗಲೂ ತನ್ನ ಜೀವನವನ್ನು ಕನಸಿನಲ್ಲೇ ಕಾಲ ಕಳೆಯುತ್ತಿದ್ದಳು ಅದು ಹೇಗೆಂದರೆ ಯಾರಾದರೂ ಬಂದು ಮತನಾಡಿಸಿದರೆ ಅರಿವೇ ಇರಿತ್ತಿರಲಿಲ್ಲ ಅಷ್ಟರ ಮಟ್ಟಿಗೆ ಆಕೆ ಕನಸಿನಲ್ಲಿ ಮಗ್ನಳಾಗಿರುತ್ತಿದ್ದಳು.
ಹೀಗೋಮ್ಮೆ ಕೆರೆ ದಂಡೆಯ ಮೇಲೆ ಕುಳಿತು ಕನಸು ಕಾಣುವ ಸಂದರ್ಭದಲ್ಲಿ ಪುಟ್ಟ ಬಾಲಕ ನೀರಿನಲ್ಲಿ ಮುಳುಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಗಂಗೆ ಜೋರಾದ ಬಾಲಕನ ಕಿರುಚಾಟದಿಂದ ಎಚ್ಚರಗೊಂಡಳು ಆಗ ಆಕೆಯ ಕಣ್ಣುಮುಂದೆ ಬಂದದ್ದು ಆ ಬಾಲಕನ ದೃಶ್ಯ. ನನ್ನಿಂದ ಸಾಧ್ಯವೇ ಆ ಬಾಲಕನನ್ನು ಉಳಿಸಲು ಎಂದು ಮನಸ್ಸಿನಲ್ಲಿ ಅಂದುಕೊಂಡಳು ನೋಡೋಣ ಸಾಧ್ಯವಾಗಲು ಬಹುದು ಒಂದು ಭಾರಿ ಪ್ರಯತ್ನಿಸಿದರೆ ಏನು ತೊಂದರೆ ಎಂದುಕೊಂಡು ಪ್ರಯತ್ನಿಸಿದಳು. ಬಾಲಕನು ಪಾರಾದನು ಗಂಗೆಯ ಹೆಸರು ಎಲ್ಲರ ಮನೆಮಾತಾಯಿತು.
ಇದರಿಂದಾಗಿ ಆಕೆಗೆ ತಿಳಿದಿದ್ದು ಸಾಧ್ಯವಿಲ್ಲ ಎಂದುಕೊಂಡಿದ್ದರೇ ಬಾಲಕ ಉಳಿಯುತ್ತಿರಲಿಲ್ಲ ನನ್ನ ಪ್ರಯತ್ನ ಧೃಢ ನಂಬಿಕೆ ಆತನನ್ನು ಕಾಪಾಡುವಲ್ಲಿ ಸಹಾಯವಾಯಿತು ಜೀವನದಲ್ಲಿ ಬರಿ ಕನಸು ಕಂಡರೆ ಏನು ಸಾಧ್ಯವಿಲ್ಲ ಒಂದು ಸಾರಿ ಬಿಟ್ಟು ಹತ್ತು ಸಾರಿ ಪ್ರಯತ್ನಿಸಿದಾಗ ಎಲ್ಲವೂ ಸಾಧ್ಯ ವೆಂಬುದು ಆಕೆಗೆ ಅರಿವಾಯಿತು. ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ಎಂಬ ಮಾತು ಎಲ್ಲರ ಅರಿವಿನಲ್ಲಿಯೂ ಇರುವಂತಹದ್ದು ಆದರೂ ಪ್ರಯತ್ನ ಪಡುವಲ್ಲಿ ನಾವು ಆಲಸ್ಯತನವನ್ನು ತೋರುತ್ತೇವೆ. "ಆಲಸ್ಯಂ ದರಿದ್ರ ಲಕ್ಷ್ಯಣಂ" ಎಂಬ ಮಾತನ್ನು ಅರಿವಿನಲ್ಲಿ ಇಟ್ಟುಕೊಳ್ಳಬೇಕು ನಮ್ಮ ಪ್ರಯತ್ನ ನಮ್ಮ ಕನಸಿನೆಡೆಗೆ ಸಾಗುತ್ತಿರಬೇಕು. ನಾವು ಅಂದುಕೊಂಡ ಗುರಿಯನ್ನು ನಾವು ತಲುಪಬೇಕಾದರೆ ಹಲವಾರು ತೊಂದರೆಗಳನ್ನು ನಾವು ಎದುರಿಸಬೇಕಾಗುತ್ತದೆ.
ಬದುಕಿನ ಒಂದು ವಿಚಿತ್ರ ನಿಯಮವೆಂದರೆ ಕನಸು ಕಂಡಿದ್ದೆಲ್ಲಾ ಸಿಗುವುದಾದರೆ ನಮ್ಮ ಪ್ರಯತ್ನಕ್ಕೆ ಬೆಲೆ ಎಲ್ಲಿದೆ ಸಿಗುವುದೆಲ್ಲವನ್ನು ಕನಸುಕಂಡಿದ್ದರೆ ಪ್ರಯತ್ನಕ್ಕೆ ಅವಕಾಶ ಎಲ್ಲಿದೆ ನಮ್ಮ ಕನಸಿಗೂ ಪ್ರಯತ್ನಕ್ಕೋ ಅರ್ಥವಿರಬೇಕಾದರೆ ನಮ್ಮ ಆಲೋಚನೆಗಳು ನಮ್ಮ ಶಕ್ತಿಯನ್ನು ಮೀರಿಸುವಂತಿರಬೇಕು "ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ ನಿದ್ದೆ ಗೇಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು" ಎಂಬ ಕಲಾಂ ರವರು ಹೇಳಿದ ಮಾತು ಕಟು ಸತ್ಯ ಕಷ್ಟದಿಂದ ಯಶಸ್ಸನ್ನು ಸಾಧಿಸಿದಾಗ ನಾವು ಪಡುವ ಖುಷಿಗೆ ಪಾರವೇ ಇರುವದಿಲ್ಲ ಕಷ್ಟಗಳು ಜೀವನದಲ್ಲಿ ಸಹಜ ಅವುಗಳನ್ನು ಮೀರಿಸಿವ ವರ್ತನೆ ನಮ್ಮದಾಗಿರಬೇಕು ಸತತವಾದ ಪ್ರಯತ್ನವಿದ್ದರೆ ಕನಸಿನ ಬಲೆಯಲ್ಲಿ ಮುಚ್ಚಿರುವ ನಮ್ಮ ಜೀವನವನ್ನು ತೀಳಿ ನೀರಿನಂತೆ ಸ್ವಚ್ಛಂದವಾಗಿಸಿಕೊಳ್ಳಬಹುದು.
ಕನಸು ಕಾಣುವುದು ಪ್ರತಿಯೊಬ್ಬರ ಸಹಜವಾದ ಪ್ರವೃತ್ತಿ ಆದರೆ ನಮ್ಮ ಕನಸು ಕಲಾಂರವರ ಮಾತಿನಂತಿರಬೇಕು ಆಗ ಯಶಸ್ಸು ಖಚಿತವಾಗಿರುತ್ತದೆ.
ಎಂಬುದು ಕಲಾಂ ರವರ ಮಾತು ನಿಜವಾದದ್ದು ನಮ್ಮ ಆತ್ಮವಿಶ್ವಾಸ ಹಾಗೂ ಕಠಿಣ ಕೆಲಸಗಳು ನಮ್ಮಲ್ಲಿರುವ ವೈಫಲ್ಯತೆಗಳನ್ನು ಕೊಲ್ಲುತ್ತವೆ ಆಗ ನಾವು ಯಶಸ್ಸನ್ನು ಸಾಧಿಸಬಹುದು. ಗಂಗಾಳ ಉದಾಹರಣೆಯನ್ನೆ ನೋಡಿದರೆ ಇವೆಲ್ಲ ವಿಷಯಗಳು ನಮಗೆ ಅರ್ಥವಾಗುತ್ತದೆ. ಪ್ರತಿಯೊಬ್ಬರಲ್ಲಿಯೂ ಅವರದೇ ಯಾದ ಕನಸು ಆಕಾಂಕ್ಷೆಗಳು ಇದ್ದೆ ಇರುತ್ತದೆ ಕೆಲವರು ಸತತವಾದ ಪ್ರಯತ್ನ ನಂಬಿಕೆಯಿಂದ ಸಾಧಿಸುತ್ತಾರೆ ಇನ್ನೂ ಕೆಲವರು ಕನಸಿನ ಬಲೆಯಲ್ಲಿಯೆ ಜೀವನವನ್ನು ಸಾಗಿಸಿತ್ತಾರೆ ಪರದೆಯ ಮರೆಯಲ್ಲಿ ಒಂದು ಅದ್ಭುತವಾದ ನಾಟಕ ನಡೆದರೆ ಸದಕ್ಕೆ ಅರ್ಥವಿರುವುದಿಲ್ಲ ಆ ಪರದೆಯನ್ನು ತೆರೆದರೆ ಅದಕ್ಕೊಂದು ಅರ್ಥ ಹಾಗೂ ಪ್ರೋತ್ಸಾಹ ದೊರಕುತ್ತದೆ ನಮ್ಮ ಜೀವನದಲ್ಲಿ ಪ್ರತಿಘಟನೆಗಳನ್ನು ಅನುಭವವೆಂದು ತಿಳಿದು ನಮ್ಮ ಕನಸನ್ನು ನನಸಾಗಿಸುವ ದಾರಿಯಲ್ಲಿ ಸಾಗಿದರೆ ಎಲ್ಲವೂ ಸಾಧ್ಯವಾಗುತ್ತದೆ.
ಕೆಲವೊಮ್ಮೆ ನಮ್ಮ ಪರಿಶ್ರಮದಿಂದ ನಾವು ಸಾಧನೆಯನ್ನು ಮಾಡಿದರೆ ಕೆಲವು ಜನರು ನಮ್ಮ ಪ್ರಯತ್ನ ಕಠಿಣ ಪರಿಶ್ರಮವನ್ನು ಹೊಗಳುತ್ತಾರೆ ಕೆಲವರು ದೇವರ ಅನುಗ್ರಹ ಎನ್ನುತ್ತಾರೆ. ದೇವರ ಅನುಗ್ರಹ ವಿಲ್ಲದಿದ್ದರೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ ಎಂಬ ಮೂಢನಂಬಿಕೆಯ ಮಾತುಗಳನ್ನು ಆಡುತ್ತಾರೆ ನಿಜವಾದ ಮಾತು ಯಾವುದು ಎಂಬ ಸಂಶಯ ಕೆಲಮೊಮ್ಮೆ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ನಿಜವಾದ ಮಾತು ನಮ್ಮ ಆತ್ಮವಿಶ್ವಾಸ ಪರಿಶ್ರಮ ಎಂಬುದಾಗಿದೆ.
ಜೀವನದಲ್ಲಿ ಕನಸಿಗೆ ಬರವಿಲ್ಲ ಸಾಧನೆಯೆಂದರೆ ಕೇವಲ ಉನ್ನತ ಮಟ್ಟದ ಹುದ್ದೆಗಳಲ್ಲ, ಸುಂದರವಾದ ಜೀವನ ನಡೆಸುವಲ್ಲಿ ನಾವು ಯಶಸ್ವಿಯಾದರೆ ಅದು ಕೂಡ ಒಂದು ಸಾಧನೆಯಾಗಿರುತ್ತದೆ. ಪ್ರತಿಯೊಬ್ಬರಲ್ಲಿಯೂ ಸೃಜನಶೀಲತೆ ಎಂಬುದು ಇದ್ದೆ ಇರುತ್ತದೆ ಅದನ್ನು ಸರಿಯಾಗಿ ಬಳಸಿಕೊಳ್ಳುವ ವಿಧಾನವನ್ನು ಅರಿತರೆ ಸಾಕು ಅದು ತಾನಾಗಿಯೇ ಅಭಿವೃದ್ಧಿಯನ್ನು ಹೊಂದುತ್ತಾ ಹೋಗುತ್ತದೆ.
ಸೃಜನಶೀಲತೆಗೆ ಯಾವುದೇ ರೀತಿಯ ಸಟರ್ಿಫಿಕೆಟ್ನ ಅವಶ್ಯಕತೆಯಿಲ್ಲ ಅದಕ್ಕೆ ಯಾವುದೇ ಜಾತಿಭೇದವಿಲ್ಲ ಅದು ಕುಂಬಾರನಿಂದ ಹಿಡಿದು ಚಮ್ಮಾರನವರೆಗೂ ಇರುವಂತದ್ದು.
ಆದ್ದರಿಂದ ನಮ್ಮ ಜೀವನದ ದಾರಿ ನಮ್ಮ ಕೈಯಲ್ಲಿಯೇ ಇದೆ ನಾವು ಸಾಗುವ ದಾರಿಯಲ್ಲಿ ಅಡಗಿದೆ.......