ಯುವ ಪೀಳಿಗೆಗೆ ಶುದ್ಧ ನೈಸಗರ್ಿಕವನ್ನು ನೀಡೋಣ: ಡಾ.ಹನುಮಂತಪ್ಪ

ಯುವ ಪೀಳಿಗೆಗೆ ಶುದ್ಧ ನೈಸಗರ್ಿಕವನ್ನು ನೀಡೋಣ: ಡಾ.ಹನುಮಂತಪ್ಪ

ಬಳ್ಳಾರಿ 13: ಮುಂದಿನ ಯುವ ಪೀಳಿಗೆಗೆ ಹಸಿರು ಭೂಮಿಯನ್ನು  ಹಾಗೂ ಸ್ವಚ್ಛ ನೈಸಗರ್ಿಕವನ್ನು ಉಡುಗೋರೆಯಾಗಿ ನೀಡೋಣ ಎಂದು ಮಹಾನಗರಪಾಲಿಕೆಯ ಆರೋಗ್ಯಾಧಿಕಾರಿ ಡಾ.ಹನುಮಂತಪ್ಪ ಅವರು ಹೇಳಿದರು.

ನಗರದ  ನಗರದ ಸಕರ್ಾರಿ (ಮಾಜಿಪುರಸಭೆ) ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬಳ್ಳಾರಿ-ಕಲ್ಬುಗರ್ಿಯ ಕ್ಷೇತ್ರ ಜನ ಸಂಪರ್ಕ ಕಾಯರ್ಾಲಯ, ಮಹಾನಗರ ಪಾಲಿಕೆ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ವಾಡ್ಲಾ ಸಂಯುಕ್ತ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

   ಕೇವಲ ಮನುಷ್ಯ ಅಲ್ಲದೇ ಸಕಲ ಜೀವರಾಶಿಗಳಿಗೂ ಭೂಮಿ ಮೇಲೆ ಜೀವಿಸುವ ಹಕ್ಕು ಇದೆ. ಇದಕ್ಕಾಗಿ ನಾವು ನಮ್ಮ ಮುಂದಿನ ಪಿಳಿಗೆಗೆ ಉತ್ತಮ ಹಾಗೂ ಶುದ್ಧ ನೈಸಗರ್ಿಕ ಪರಸರವನ್ನು ವಾತಾವರಣವನ್ನು ಸೃಷ್ಠಿಸುವ ಕಾರ್ಯದಲ್ಲಿ ಕೈಜೋಡಿಸೋಣ ಎಂದು ಹೇಳಿದ ಅವರು ವಿದ್ಯಾಥರ್ಿಗಳು ತಾವು ಅಲ್ಲದೇ ತಮ್ಮ ಪೋಷಕರಿಗೂ ಸಹ ಪ್ಲಾಸ್ಟೀಕ್ ಬಳಕೆಯಿಂದ ಉಂಟಾಗುವ ಪರಿಸರ ನಾಶದ ಕುರಿತು ಅರಿವು ಮೂಡಿಸಿ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡೋಣ ಎಂದರು.  

ಮಹಾನಗರಪಾಲಿಕೆಯ ಪರಿಸರ ಅಭಿಯಂತರರಾದ ಟಿ.ಶ್ರೀನಿವಾಸ ಅವರು ಮಾತನಾಡಿ, ಒಣ ಕಸ, ಹಸಿ ಕಸ ವಿಂಗಡಿಸಿ ಆ ಕಸವನ್ನು ಪಾಲಿಕೆಯ ವಾಹನದಲ್ಲಿ ಹಾಕಬೇಕು. ಪ್ರತಿಯೊಬ್ಬರು ಶೌಚಾಲಯದಲ್ಲಿಯೇ ಮಲ,ಮೂತ್ರ ವಿರ್ಸಜನೆ ಮಾಡಬೇಕು. ಶೌಚಾಲಯವನ್ನು ಒಳಚರಂಡಿಗೆ ಸೇರ್ಪಡೆ ಮಾಡಿಸಬೇಕು ಇದರಿಂದ ತ್ಯಾಜ್ಯವು ನೇರವಾಗಿ  ಒಳಚರಂಡಿಗೆ ಹೋಗುತ್ತದೆ ಎಂದರು.  

ಬಳ್ಳಾರಿ-ಕಲ್ಬುಗರ್ಿಯ ಕ್ಷೇತ್ರ ಜನ ಸಂಪರ್ಕ ಕಾಯರ್ಾಲಯದ ಉಪನಿದರ್ೇಶಕ ಡಾ.ಜಿ.ಡಿ.ಹಳ್ಳಿಕೇರಿ ಅವರು ಸ್ವಚ್ಛ ಭಾರತ ಅಭಿಯಾನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಪ್ರಚಾರ ಸಹಾಯಕ ಎನ್.ರಾಮಕೃಷ್ಣ ಅವರು ಸ್ವಾಗತಿಸಿ ವಂದಿಸಿದರು. 

ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಕೆ.ತಿಮ್ಮಪ್ಪ, ಸಕರ್ಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲ ಸಗರದ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ ಶಿವ.ಟಿ ಸೇರಿದಂತೆ ವಿದ್ಯಾಥರ್ಿಗಳು ಇದ್ದರು.

ಸ್ವಚ್ಛ ಭಾರತ ಅಭಿಯಾನದ ಜಾಗೃತಿ ಜಾಥಾ : - ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಸಕರ್ಾರಿ (ಮಾಜಿಪುರಸಭೆ) ಪದವಿ ಪೂರ್ವ ಕಾಲೇಜು ಮೈದಾನದಲ್ಲಿ  ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಕೆ.ತಿಮ್ಮಪ್ಪ, ಅವರು ಜಾಗೃತಿ ಜಾಥಾಗೆ ಚಾಲನೆ ನೀಡಿದರು.

ಜಾಥಾವು ಕಾಲೇಜಿನ ಸುತ್ತಮುತ್ತ ಪ್ರದೇಶಗಳಲ್ಲಿ ಸಂಚರಿಸಿ ಸ್ವಚ್ಛ ಭಾರತ ಅಭಿಯಾನದ ಕುರಿತು ಅರಿವು ಮೂಡಿಸಿದರು.

ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಬೆಳಗಾವಿ, ಧಾರವಾಡ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಯಿಂದ ಆಗಮಿಸಿದ್ದ ವಿವಿಧ ಕಲಾವಿದರುಗಳು ಸ್ವಚ್ಛ ಭಾರತ ಅಭಿಯಾನ, ಪ್ರತಿಯೊಂದು ಮನೆಗೆ ಶೌಚಾಲಯದ ಕುರಿತು ನಾಟಕ ಹಾಗೂ ಜಾನಪದ ಸಂಗೀತ ಮೂಲಕ ಅರಿವು ಮೂಡಿಸಿದರು.


 

ಸುದ್ದಿ ಓದಿ