ಕಂಪ್ಲಿ

ಚನ್ನಮ್ಮ ಆದರ್ಶಗಳು ಯುವಕರಿಗೆ ಪ್ರೇರಣೆ ಆಗಲಿ: ಎಸ್‌.ಶಿವರಾಜ

ಚನ್ನಮ್ಮ ಆದರ್ಶಗಳು ಯುವಕರಿಗೆ ಪ್ರೇರಣೆ ಆಗಲಿ: ಎಸ್‌.ಶಿವರಾಜ


ಚನ್ನಮ್ಮ ಆದರ್ಶಗಳು ಯುವಕರಿಗೆ ಪ್ರೇರಣೆ ಆಗಲಿ: ಎಸ್‌.ಶಿವರಾಜ 

ಕಂಪ್ಲಿ 23: ನಾಡಿನ ರಕ್ಷಣೆಗಾಗಿ ಕಿತ್ತೂರು ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಉತ್ತಮ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಎಂದು ಲಿಂಗಾಯಿತ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಎಸ್‌.ಚಂದ್ರಶೇಖರಗೌಡ ಹೇಳಿದರು.   

ಇಲ್ಲಿನ ಡಿಗ್ರಿ ಕಾಲೇಜು ಎದುರಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಬುಧವಾರ ಚನ್ನಮ್ಮನ ಜಯಂತ್ಯುತ್ಸವ ಆಚರಣೆಯಲ್ಲಿ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮನ ವೃತ್ತವನ್ನು ರಚಿಸಿ, ಚನ್ನಮ್ಮನ ಪುತ್ಥಳಿಯನ್ನು ಸ್ಥಾಪಿಸುವಲ್ಲಿ ಪುರಸಭಾಡಳಿತ, ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರುವಂತೆ ಒತ್ತಾಯಿಸಿದರು.  

ಇಲ್ಲಿನ ತಹಸೀಲ್ದಾರ್ ಸಭಾಂಗಣದಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವದಲ್ಲಿ ಷಾ.ಮಿಯಾಚಂದ್ ಸರ್ಕಾರಿ ಹೈಸ್ಕೂಲ್ ಶಿಕ್ಷಕ ಡಾ.ಬಿ.ಸುನೀಲ್ ಮಾತನಾಡಿ, ಚನ್ನಮ್ಮಳ ದೇಶಪ್ರೇಮ, ತತ್ವ ಆದರ್ಶಗಳೇ ಯುವಜನತೆಗೆ ಸಂದೇಶವಾಗಿದ್ದು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಚನ್ನಮ್ಮಳನ್ನು ಜಾತಿಗೆ ಸೀಮಿತಗೊಳಿಸಬಾರದು ಎಂದರು.  

ತಹಸೀಲ್ದಾರ್ ಎಸ್‌.ಶಿವರಾಜ ಮಾತನಾಡಿ, ಚನ್ನಮ್ಮನ ಆದರ್ಶಗಳನ್ನ ಮಕ್ಕಳಲ್ಲಿ ಪ್ರೇರೇಪಿಸಬೇಕು. ಆಕೆಯ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಿಕೊಡಬೇಕು ಎಂದರು. ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಪಿ.ಮೂಕಯ್ಯಸ್ವಾಮಿ, ಜಿ.ಜಿ.ಚಂದ್ರಣ್ಣ, ಕನಕಗಿರಿ ರೇಣುಕಪ್ಪ, ಬಳೆ ಮಲ್ಲಿಕಾರ್ಜುನ, ಬಿ.ವಿ.ಗೌಡ, ಎಸ್‌.ಡಿ.ಬಸವರಾಜ, ಸಣಾಪುರ ಈಶಪ್ಪ ನಾಗರಾಜಗೌಡ, ಅರುಣಕುಮಾರ್, ಕೆ.ದೊಡ್ಡಬಸವರಾಜ, ಸಿದ್ಧಲಿಂಗಪ್ಪ, ಟಿ.ಎಂ.ಬಸವರಾಜ, ಸಂತೋಷ ಸೋಗಿ, ಹೊನ್ನಳ್ಳಿ ಗಂಗಾಧರ ಸೇರಿ ನಾನಾ ಇಲಾಖಾಧಿಕಾರಿಗಳಿದ್ದರು. 



   

ಅ.003: ಕಂಪ್ಲಿ ತಹಸೀಲ್ದಾರ್ ಸಭಾಂಗಣದಲ್ಲಿ ಜರುಗಿದ ಕಿತ್ತೂರು ರಾಣಿ ಚನ್ನಮ್ಮಳ ಜಯಂತ್ಯುತ್ಸವದಲ್ಲಿ ತಹಸೀಲ್ದಾರ್ ಡಾ.ಬಿ.ಸುನೀಲ್ ಮಾತನಾಡಿದರು. 


ಸುದ್ದಿ ಓದಿ