ಬಳ್ಳಾರಿ

ಭಕ್ತಿ ಶ್ರದ್ಧೆಯಿಂದ ಕನಕ ದುರುಗಮ್ಮದೇವಿಯ ಕುಂಭೋತ್ಸವ ಪೂಜೆ

ಭಕ್ತಿ ಶ್ರದ್ಧೆಯಿಂದ ಕನಕ ದುರುಗಮ್ಮದೇವಿಯ ಕುಂಭೋತ್ಸವ ಪೂಜೆ

ಬಳ್ಳಾರಿ : ನಗರದ ಆರಾಧ್ಯ ದೈವ ಕನಕದುರ್ಗಮ್ಮ ದೇವಸ್ಥಾನದಲ್ಲಿ ಮಂಗಳವಾರದಂದು ವೈಶಾಖ ಮಾಸ ಪ್ರಯುಕ್ತ  ಕನಕದುರ್ಗಮ್ಮದೇವಿಗೆ ಭಕ್ತಿ ಶ್ರದ್ಧೆಯಿಂದ ಕುಂಭೋತ್ಸವ ಪೂಜೆಗಳನ್ನು ಸಿಂಧೆ ಎಸ್.ವಿ ರಾಘವೇಂದ್ರ ಜೋಷಿಯವರು ನೆರವೇರಿಸಿದರು. 

ನಗರದ ರಾಜೇಶ್ವರಿ ನಗರದ ಪಾಂಡುರಂಗ ದೇವಸ್ಥಾನದ ಹತ್ತಿರದ ರಾಘವೇಂದ್ರ ಜೋಷಿಯವರ ಮನೆಯಿಂದ ಕೋಲಾಟ ನೃತ್ಯಗಳು ಮತ್ತು ಡೊಳ್ಳು, ಬ್ಯಾಂಡ್ ಗಳೊಂದಿಗೆ ಮತ್ತು ಸಂಗೀತ ವಾಧ್ಯಗಳಿಂದ ಕುಮಾರಸ್ವಾಮಿ ಗುಡಿಯಿಂದ ಎಸ್.ಪಿ ವೃತ್ತದ ಮಾರ್ಗವಾಗಿ ದುರ್ಗಮ್ಮ ದೇವಸ್ಥಾನದವರೆಗೆ ಕುಂಭೋತ್ಸವವನ್ನು ಮೆರವಣಿಗೆಯನ್ನು ನೆರವೇರಿಸಲಾಯಿತು. 

 ಜೋಷಿ ಮಾತನಾಡುತ್ತಾ ಪ್ರಜಾಶಾಂತಿ ಪರವಾಗಿ ಹಿಂದೆ ಕರೋನಾ ಮಹಾಮಾರಿ ಸಮಯದಲ್ಲಿ ಆದಿಶಕ್ತಿ  ಕನಕದುರ್ಗಮ್ಮನವರಲ್ಲಿ ಜನರನ್ನು ಕರೋನಾ ದಿಂದ ರಕ್ಷಿಸಲು ಹರಕೆ ಹೊತ್ತಿದ್ದೆ. ಈಗ ಭಕ್ತಿಯಿಂದ ಹರಕೆಯನ್ನು ತೀರಿಸಿದ್ದೇನೆಂದರು. ಮತ್ತು ಈ ವರ್ಷದಲ್ಲಿ ಮಳೆ ಚೆನ್ನಾಗಿ ಬಂದು ಕೆರೆಕುಂಟೆಗಳು ತುಂಬಿ ಬೆಳೆಗಳು ಸಮೃದ್ಧವಾಗಿ ಬೆಳೆದು ರೈತಾಪಿ ವರ್ಗದವರು ಸಂತೋಷದಿಂದ ಜೀವನ ಮಾಡಲಿ ಎಂದು ದೇವಿಗೆ ಬೇಡಿಕೊಂಡರು. ಮೇಟಿ ಕುಂಭವನ್ನು ಮುಕ್ತಾಬಾಯಿಯವರು, ಗಂಡದೀಪವನ್ನು ವಿನೋಧ ರವರು ಗುಡಿಯವರೆಗೆ ಹೊತ್ತುಕೊಂಡು ಬಂದರು. ಈ ಪೂಜೆಗಳಲ್ಲಿ ಎಸ್.ವಿ ರಾಘವೇಂದ್ರ ಜೋಷಿ, ಎಸ್.ವಿ ಶಾಸ್ತ್ರಿ, ಎಸ್.ವಿ ರಮೇಶ್ ಜೋಷಿ, ಎಸ್.ವಿ ಚಂದ್ರಜೋಷಿ, ಎಸ್.ವಿ ಕೃಷ್ಣಜೋಷಿ ಇವರುಗಳು ಪೂಜೆಗಳನ್ನು ನೆರವೇರಿಸಿರುತ್ತಾರೆ. ತಮ್ಮ ಸಮಾಜದ ಬಾಂಧವರ ಸಮೇತ ಬಳ್ಳಾರಿ ನಗರದ ನೂರಾರು ಜನ ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದವನ್ನು ಸೇವಿಸಿರುತ್ತಾರೆ 

ಸುದ್ದಿ ಓದಿ