ಅನಂತಪೂರ ಗ್ರಾಪಂ ಅಧ್ಯಕ್ಷರಾಗಿ ಕುಮಾರ ಹಬಗುಂಡೆ ಆಯ್ಕೆ
ವೆಂಕಟೇಶ ದೇಶಪಾಂಡೆ
ಅಥಣಿ 29: ಮಾಜಿ ಜಿಲ್ಲಾ ಪಂಚಾಯತ ಸದಸ್ಯ ದಾದಾ ಶಿಂಧೆ ನೇತೃತ್ವದಲ್ಲಿ ನಡೆದ ಅನಂತಪೂರ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕುಮಾರ ಪಾಂಡುರಂಗ ಹಬಗುಂಡೆ ಆಯ್ಕೆಯಾದರು. ಮೊದಲಿನ ಅಧ್ಯಕ್ಷ ರುದ್ರಗೌಡ ಪಾಟೀಲ ಇವರು ರಾಜೀನಾಮೆ ನೀಡಿದ ನಂತರ ತೆರವುಗೊಂಡ ಸ್ಥಾನಕ್ಕೆ ಚುನಾವಣೆ ಬುಧವಾರ ನಡೆಯಿತು.
ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ಕುಮಾರ ಹಬಗುಂಡೆ ಮಾತನಾಡಿ, ಅನಂತಪೂರ ಜಿಪಂ ಮಾಜಿ ಸದಸ್ಯ ದಾದಾ ಶಿಂಧೆ ಹಾಗೂ ಗ್ರಾಮದ ಹಿರಿಯರು, ಗ್ರಾಪಂ ಮಾಜಿ ಅಧ್ಯಕ್ಷ ರುದ್ರಗೌಡ ಪಾಟೀಲ ಇವರ ಮಾರ್ಗದರ್ಶನದಲ್ಲಿ ಅನಂತಪೂರ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯ ದಾದಾ ಶಿಂಧೆ ಮಾತನಾಡಿ, ಅನಂತಪೂರ ಗ್ರಾಮ ಪಂಚಾಯತನ 21 ಸದಸ್ಯರ ಪೈಕಿ 15 ಸದಸ್ಯರು ಒಂದಾಗಿ ಕುಮಾರ ಹಬಗುಂಡೆ ಇವರನ್ನು ಬೆಂಬಲಿಸಿದ್ದರಿಂದ ಅವಿರೋಧ ಆಯ್ಕೆಗೆ ಅನುಕೂಲವಾಯಿತು ಎಂದ ಅವರು ಮುಂಬರುವ ದಿನಗಳಲ್ಲಿ ಗ್ರಾಮದ ಎಲ್ಲ 21 ವಾರ್ಡಗಳಲ್ಲಿಯೂ ಸಹ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದರು.
ಗ್ರಾಮದ ಹಿರಿಯರಾದ ರುದ್ರಗೌಡ ಪಾಟೀಲ ಮಾತನಾಡಿ, ನನ್ನ ವಯಕ್ತಿಕ ಕಾರಣದಿಂದಾಗಿ ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಹೀಗಾಗಿ ತೆರವುಗೊಂಡ ಸ್ಥಾನಕ್ಕೆ ಯುವ ಸದಸ್ಯ ಕುಮಾರ ಹಬಗುಂಡೆ ಇವರನ್ನು ಆಯ್ಕೆ ಮಾಡಲಾಗಿದ್ದು, ನಾವೆಲ್ಲ ಅಧ್ಯಕ್ಷರಿಗೆ ಗ್ರಾಮದ ಅಭಿವೃದ್ಧಿಯಲ್ಲಿ ಸಹಕರಿಸೋಣ ಎಂದರು.
ಚುನಾವಣಾ ಅಧಿಕಾರಿಯಾಗಿ ಸಣ್ಣ ನೀರಾವರಿ ಇಲಾಖೆ ಅಭಿಯಂತರ ಶ್ರೀಕಾಂತ ಮಾಕಾಣಿ ಕಾರ್ಯನಿರ್ವಹಿಸಿದರು. ಸಹಕಾರಿಯಾಗಿ ಪಂಚಾಯತ ಅಭಿವೃದ್ಧಿ ಅಧಿಕಾರಿ ವ್ಹಿ.ಎಂ.ಸಂದ್ರಿಮನಿ ಕಾರ್ಯನಿರ್ವಹಿಸಿದರು.
ಗ್ರಾಮದ ಮುಖಂಡರಾದ ಸಂಗಪ್ಪ ಜಾಬಗೌಡರ, ಗುರುಲಿಗಯ್ಯ ಮಠಪತಿ, ಬಿಜರ್ು ಹಬಗುಂಡೆ, ಮಹಾದೇವ ದೇಶಿಂಗೆ, ಅಶೋಕ ಪಾಟೀಲ, ನೇತಾಜಿ ಜಾಧವ, ಕಾಕಾಸಾಹೇಬ ಚೌಗಲಾ, ಬಿಳ್ಯಾನಿ ನಾಯಿಕ, ಗಜು ಪೂಜಾರಿ, ವಿಠ್ಠಲ ಉಗಾರೆ ಸೇರಿದಂತೆ ಗ್ರಾಮ ಪಂಚಾಯತನ ಸದಸ್ಯರು ಸಿಬ್ಬಂದಿ ಉಪಸ್ಥಿತರಿದ್ದರು