ಅಕ್ಷಯ್ ಪಾಟೀಲಗೆ ಸನ್ಮಾನ
ಬೈಲಹೊಂಗಲ17: ಹುಬ್ಬಳ್ಳಿಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ನಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಬೈಲಹೊಂಗಲದ ಅಕ್ಷಯ್ ಪಾಟೀಲ ಅವರಿಗೆ ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ಯುವ ಉದ್ಯಮಿ ವಿಜಯ ಮೆಟಗುಡ್ಡ ಹಾಗೂ ಪುರಸಭೆ ಸದಸ್ಯ ಗುರು ಮೆಟಗುಡ್ಡ ಅವರಿಂದ ಗುರುವಾರ ಸನ್ಮಾನಿಸಲಾಯಿತು.
ಸಾವಯವ ಕೃಷಿಕ ರೈತರಾದ ಬಾಬಣ್ಣ ಪಾಟೀಲ, ಬಸವರಾಜ ಬಂಡಿವಡ್ಡರ, ಸಂತೋಷ ಹಡಪದ, ರಾಘು ಕುಮಚಿ, ಪವನಕುಮಾರ ಅಕ್ಕಿ, ಚನ್ನಯ್ಯ ಯಡಹಳ್ಳಿ, ಡಾ ಮಹಾಂತೇಶ ಬೆಂಡಿಗೇರಿ, ಸೋಮಲಿಂಗ ಕೆಂಗಾನೂರ, ಬಸವರಾಜ ಪೂಜೇರ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ಇದ್ದರು.