ಕಣ್ಣಿನ ಪೊರೆ ರೋಗಿಗಳ ಆಪರೇಷನ್ಗೆ ಕೊಪ್ಪಳ ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಶಿಪಾರಸ್ಸು
ಲೋಕದರ್ಶನ ವರದಿ
ಕುಷ್ಟಗಿ 22: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ನೇತ್ರಾಧಿಕಾರಿ ಬರಕತ್ ಅಲಿ ಅವರ ನೇತೃತ್ವದಲ್ಲಿ ಸುಮಾರು 30ಜನ ಕಣ್ಣಿನ ಪೊರೆ ಹೊಂದಿರುವ ರೋಗಿಗಳನ್ನು ಆಪರೇಷನ್ಗೆ ಕೊಪ್ಪಳದ ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಕಳುಹಿಸಿದರು.
ಜಿಲ್ಲಾ ಅಂಧತ್ವ ನಿವಾರಣಾ ಇಲಾಖೆ ಹಾಗೂ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮದಲ್ಲಿ ತಾಲೂಕಿನ ತುಗ್ಗಲಡೋಣಿ - 06, ಬೋದೂರ -04, ಕುಷ್ಟಗಿ ಪಟ್ಟಣ -10 ಹಾಗೂ ಇನ್ನಿತರೆ ಗ್ರಾಮಗಳ -10 ಜನ ಪೊರೆ ಹೊಂದಿದ ರೋಗಿಗಳನ್ನು ತಪಾಸಣೆ ಮಾಡಿ ಬಿಪಿ, ಸಕ್ಕರೆ ಕಾಯಿಲೆ, ಎಚ್.ಐ.ವಿ, ಎಚ್.ಬಿ.ಎಸ್.ಇ.ಜಿ ಕಾಯಲೆಗಳಿಗೆ ಸಂಬಂಧಿಸಿದಂತೆ ರಕ್ತ ಪರೀಕ್ಷೆ ನಡೆಸಿ ಕೊಪ್ಪಳದ ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಆಪರೇಷನ್ ಮಾಡಿಸಲು ಶಿಪಾರಸ್ಸು ಮಾಡಲಾಯಿತು ಎಂದು ನೇತ್ರಾಧಿಕಾರಿ ಬರಕತ್ ಅಲಿ ಸುದ್ದಿಗಾರರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಆನಂದ ಗೋಟೂರ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಎಸ್ ರಡ್ಡಿ, ಡಾ. ಚಂದ್ರಕಾಂತ ಮಂತ್ರಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು