ಬ್ರಿಟೀಷರ ಎದೆ ನಡುಗಿಸಿದ ವೀರ ರಾಣಿ ಕಿತ್ತೂರು ಚನ್ನಮ್ಮ : ಸಿದ್ದರಾಮೇಶ್ವರ
ಮಹಾಲಿಂಗಪುರ : ಸ್ವಾತಂತ್ರ ಹೋರಾಟದ ಕಿಚ್ಚು ಹಚ್ಚಿ ಬ್ರಿಟಿಷರಿಗೆ ಎಚ್ಚರಿಕೆ ಕೊಟ್ಟ ಭಾರತದ ಧೀರ ಮಹಿಳೆ ಚನ್ನಮ್ಮ ಅಂಗೈಯಗಲದ ಕಿತ್ತೂರು ರಾಜ್ಯವನ್ನಿಟ್ಟುಕೊಂಡು ಬೃಹತ್ ಬ್ರಿಟಿಷ್ ಸಾಮ್ರಾಜ್ಯವನ್ನ ಎದುರು ಹಾಕಿಕೊಳ್ಳುವುದೆಂದರೆ ಬಗ್ಗು ಬಡಿಯುವುದೆಂದರೆ ಅದು ಸಾಮಾನ್ಯದ ವಿಷಯವಲ್ಲ. ಅದಕ್ಕೆ ಅಪಾರ ಧೈರ್ಯ-ಶೌರ್ಯ ಬೇಕು. ಸಾಹಸ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ತಾಯ್ನಾಡಿನ ಬಗ್ಗೆ ಅದಮ್ಯ ಪ್ರೇಮ ಬೇಕು. ಇವತ್ತಿಗೂ ಚೆನ್ನಮ್ಮಾಜಿಯ ಹೆಸರು ಅಜರಾಮರವಾಗಿದೆಯೆಂದರೆ ಅದಕ್ಕೆ ಅವರಲ್ಲಿದ್ದ ಆ ಎಲ್ಲಾ ಗುಣಗಳೂ ಕಾರಣ.ಎಂದು ಸಿದ್ದರಾಮೇಶ್ವರ ಸ್ವಾಮಿಗಳು ಹೇಳಿದರು.
ಮಹಾಲಿಂಗಪುರದ ಬಸ್ ನಿಲ್ದಾಣದ ಹತ್ತಿರ ಇರುವ ಚನ್ನಮ್ಮ ಸರ್ಕಲನಲ್ಲಿ ಆಚ್ಚರಿಸಲಾಯಿತು, ಮುಖ್ಯ ಅಥಿತಿಗಳಾಗಿ ಭಾಗವಹಿಸಿ, ದೇವಿ ಫೋಟೋಗೆ ಪೂಜೆ ಸಲ್ಲಿಸಿ ಉದ್ಘಾಟಸಿ ಮಾತನಾಡಿದ ಬೀದರ ಜಿಲ್ಲೆಯ ಬೋರ್ ಚಿಂಚೋಳಿಯ ಸಿದ್ದರಾಮೇಶ್ವರ ಪಟ್ಟದ ದೇವರು 1824 ಅಂದರೆ 196 ವರ್ಷಗಳ ಹಿಂದೆ ಅಕ್ಟೋಬರ್ 22. ರಂದು ಆಯುಧಪೂಜೆಯ ಹಬ್ಬದ ಸಡಗರದಲ್ಲಿದ್ದ ಕಿತ್ತೂರಿಗೆ ಇದ್ದಕ್ಕಿದ್ದಂತೆ ಥ್ಯಾಕರೆ ಮುತ್ತಿಗೆ ಹಾಕಿದ್ದ. ಕಿಂಚಿತ್ತೂ ಅಳುಕದೆ, ಎದೆಗುಂದದೆ ನುಗ್ಗಿದ್ದಳು ಚೆನ್ನಮ್ಮ. ಆಕೆಯ ರೋಷಾವೇಷ ಕಂಡು ಥ್ಯಾಕರೆ ಬೆಚ್ಚಿಬಿದ್ದಿದ್ದ. ಥ್ಯಾಕರೆಯನ್ನ ಕಿತ್ತೂರು ಸೈನ್ಯ ಯಾವ ಪರಿ ಅಟ್ಟಾಡಿಸಿ ಕೊಂದಿತ್ತು ಅಂದರೆ ಮಹಾನವಮಿಗೆ ಶತ್ರು ಸೈನ್ಯವನ್ನ ಬಲಿಕೊಟ್ಟಿದ್ದಳು ಚೆನ್ನಮ್ಮ. ಬ್ರಿಟಿಷ್ ಕಂಪನಿ ಸೈನ್ಯ ಮಣ್ಣು ಮುಕ್ಕಿತ್ತು, ಅವರದ್ದು ರೋಷಾವೇಷದ, ಶೌರ್ಯದ ಅದ್ಭುತ ಚರಿತ್ರೆ. ಆವರ ಬದುಕನ್ನು ನೀವು ದಯವಿಟ್ಟು ಓದಬೇಕು.ಮಕ್ಕಳಿಗಂತೂ ತಪ್ಪದೆ ಓದಿಸಬೇಕು.
ನಂತರ ಮಾತನಾಡಿದ ವಿದ್ಯಾಧರ ಸವದಿ ಅವರು ಚನ್ನಮ್ಮ ಹೋರಾಟ ಇಡೀ ದೇಶಕ್ಕೆ ಸ್ವಾತಂತ್ರದ ಕಿಚ್ಚು ಹಚ್ಚಿ ಒಬ್ಬ ಮಹಿಳೆ ಬ್ರಿಟಿಷರ ಸೈನ್ಯವನ್ನು ದಿಟ್ಟವಾಗಿ ಎದುರಿಸಿ ಸೋಲಿಸಿದಳು ಅಂದರೆ ಅಂದಿನ ಕಾಲಕ್ಕೆ ಅವರ ತೋರಿದ ಧೈರ್ಯ ಇಡೀ ಭಾರತಕ್ಕೆ ಶಕ್ತಿ ತುಂಬಿತು ಎಂದು ಹೇಳಿದರು.
ನಂತರ ಮಾತನಾಡಿದ ಡಾ ಎ ಆರ್ ಬೆಳಗಲಿ ಬ್ರಿಟಿಷರ ಎದುರು ಸಿಡಿಲಿನಂತೆ ಗುಡುಗಿದಳು ಸಿಂಹದಂತೆ ಗರ್ಘಸಿದಳು, ಅವಳಿಗೆ ಕೇಚ್ಚದೆಯ ಧೀರ ಸಂಗೊಳ್ಳಿ ರಾಯಣ್ಣ ಮತ್ತು ಅಮಟೂರು ಬಾಳಪ್ಪ, ನಾಡಿನ ರಕ್ಷಣೆಗಾಗಿ ಪ್ರಾಣವನ್ನು ಪಾನಕ್ಕಿಟ್ಟು ಸೇನೆ ಕಟ್ಟಿದರು
ಮುಖಂಡರಾದ ಡಾ ಎ ಆರ್ ಬೆಳಗಲಿ, ಬಸು ಕೊಪ್ಪದ,ಶೇಖರ ಅಂಗಡಿ,ಈರಪ್ಪ ದಿನ್ನಿಮನಿ,ಅಶೋಕ ಅಂಗಡಿ,ಕುಮಾರ ಕುಳಲಿ, ಚನ್ನಬಸು ಯರಗಟ್ಟಿ,ಹಣಮಂತ ಶಿರೋಳ,ಶ್ರೀಶೈಲಪ್ಪಾ ಉಳ್ಳೆಗಡ್ಡಿ, ಶಿವಾನಂದ ಅಂಗಡಿ,ಮುತ್ತಪ್ಪ ದಲಾಲ,ಬಸು ಪರೀಟ,ಶಿವಾನಂದ ಹುಣಶ್ಯಾಳ ರಾಜು ಚಮಕೇರಿ, ಯಲ್ಲಪ್ಪ ಬಾಗೋಜಿ,ಮಾನಿಂಗ ಕಂಠಿ, ಕಲ್ಲಪ್ಪ ಪಟ್ಟಣಶೆಟ್ಟಿ ಚನ್ನಪ್ಪಾ ಪಟ್ಟಣಶೆಟ್ಟಿ, ಸಂಗಪ್ಪ ಹಲ್ಲಿ,ಡಾ ಹುಕ್ಕೇರಿ, ಎಸ್ ಮಟಗಾರ್, ಬಸವರಾಜ್ ವಜ್ಜರಮಟ್ಟಿ, ಶಿವಾನಂದ ಅಂಗಡಿ, ಹಣಮಂತ ಕೊಣ್ಣೂರ, ಹಣಮಂತ ಬಡಿಗೇರ, ಅಶೋಕ ಅಂಗಡಿ,ಪ್ರಕಾಶ ಮಾಮಾದಾಪುರ, ಮಲ್ಲಪ್ಪಾ ಸಿಂಗಾಡಿ,ಸಂತೋಷ ಹುದ್ದಾರ,ಶಂಕರ ಕೌಜಲಗಿ, ರಾಜು ಚಮಕೇರಿ,ಹಣಮಂತ ಯರಗಟ್ಟಿ,ವಿಷ್ಣುಗೌಡ ಪಾಟೀಲ ಬಸವರಾಜ ಮೇಟಿ,ಸುವರ್ಣಾ ಆಸಂಗಿ,,ಅರುಣ ಗಾಣಿಗೇರ, ರವಿ ಗಿರಿಸಾಗರ ಸೇರಿ ಹಲವರು ಭಾಗವಹಿಸಿದ್ದರು