ಶಿಗ್ಗಾವ್

ಜಿಡಿಪಿ ಬೆಳವಣಿಗೆಯಲ್ಲಿ ಕರ್ನಾಟಕ ನಂಬರ್ ಒನ್ : ಸಿದ್ದರಾಮಯ್ಯ

ಜಿಡಿಪಿ ಬೆಳವಣಿಗೆಯಲ್ಲಿ ಕರ್ನಾಟಕ ನಂಬರ್ ಒನ್ : ಸಿದ್ದರಾಮಯ್ಯ

ಜಿಡಿಪಿ ಬೆಳವಣಿಗೆಯಲ್ಲಿ ಕರ್ನಾಟಕ ನಂಬರ್ ಒನ್ : ಸಿದ್ದರಾಮಯ್ಯ 

ಶಿಗ್ಗಾವಿ 06 : ಜಿಡಿಪಿ ಬೆಳವಣಿಗೆಯಲ್ಲಿ ಕರ್ನಾಟಕ ನಂಬರ್ ಒನ್ ಆಗಿದೆ. ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ್ರೆ ರಾಜ್ಯ ದಿವಾಳಿ ಆಗುತ್ತೆ ಅಂತ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಇಲ್ಲಿಂದಲೇ ಗೆದ್ದು ಮುಖ್ಯಮಂತ್ರಿಯಾದ ಬಸವರಾಜ್ ಬೊಮ್ಮಾಯಿ ಸಾರ್ವತ್ರಿಕ ಚುನಾವಣೆ ಪೂರ್ವದಲ್ಲಿ ರಾಜ್ಯದ ತುಂಬಾ ಹೇಳುತ್ತಾ ತಿರುಗಾಡಿದರು ಆದರೆ ಇವತ್ತು ಕರ್ನಾಟಕ ಸುಭದ್ರವಾಗಿ ಜಿಡಿಪಿ ಬೆಳವಣಿಗೆಯಲ್ಲಿ ನಂಬರನ್ನು ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ತಾಲೂಕಿನ ಹಿರೇಬೆಠಗೇರಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್ ಅವರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ,ನಾವು ಯಾರ ಸಂಬಳವನ್ನೂ ನಿಲ್ಲಿಸಿಲ್ಲ,ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿಲ್ಲಜಿಡಿಪಿ ಬೆಳವಣಿಗೆಯಲ್ಲಿ ನಮ್ಮ ರಾಜ್ಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ನರೇಂದ್ರಮೋದಿಗೆ ಇವೆಲ್ಲವೂ ಗೊತ್ತಿದೆ,ಆದ್ರೂ ಮೋದಿ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಹೇಳುತ್ತಾರೆ ಎಂದರು. ರೈತರಿಗೆ ವಕ್ಫ್‌ ನೋಟಿಸ್ ಕೊಟ್ಟವರು ಬಿಜೆಪಿಯವರು,ಉಪ ಚುನಾವಣೆ ಬಂದಿದೆ ಅಂತ ಬಿಜೆಪಿಯವರು ವಕ್ಫ್‌ ನೋಟಿಸ್ ನಾಟಕ ಆಡುತ್ತಿದ್ದಾರೆ. ರಾಜ್ಯದಲ್ಲಿ ನಡೆಯುವ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಹೇಳಿದರು.   ಅಭ್ಯರ್ಥಿ ಯಾಸೀರ್ ಖಾನ್ ಪಠಾಣ, ಈಶ್ವರ್ ಖಂಡ್ರೆ, ಲಕ್ಷ್ಮಣ ಸವದಿ, ಅಜಂ ಫಿರ್ ಖಾದ್ರಿ, ಶಿವಾನಂದ ಪಾಟೀಲ್, ಕೆಜೇ ಜಾರ್ಜ, ಸಲೀಂ ಅಹ್ಮದ್, ವಿನೋದ್ ಅಸೂಟಿ, ನಸೀರ್ ಅಹಮ್ಮದ್, ಆರ್ ಶಂಕರ್, ಶಿವರಾಜ ಸಜ್ಜನ, ಅಲ್ತಾಫ್ ಹಳ್ಳುರ್, ಆಂಜನೇಯ, ರುದ್ರ​‍್ಪ ಲಮಾಣಿ, ಶ್ರೀನಿವಾಸ್ ಮಾನೆ, ಬಸವರಾಜ್ ಶಿವಣ್ಣನವರ, ಸಂಜೀವ ನೀರಲಗಿ ಸೇರಿದಂತೆ ಅನೇಕರಿದ್ದರು.್ಷ್ಷ್ಷ 


ಸುದ್ದಿ ಓದಿ