ಕರ್ನಾಟಕ ಗ್ರಾಮೀಣ ಬ್ಯಾಂಕ್ನ ರಿಟೇಲ್ ಉತ್ಸವಕ್ಕೆ ಚಾಲನೆ
ಲೋಕದರ್ಶನ ವರದಿ
ಬಳ್ಳಾರಿ 12 : ಕರ್ನಾಟಕ ಗ್ರಾಮೀಣ ಬ್ಯಾಂಕ್ ಬ್ಯಾಂಕಿನ ಪ್ರಧಾನ ಪ್ರಬಂದಕರಾದ ರಿಟೇಲ್ ಶ್ರೀಮತಿ ಭಾಗ್ಯರೇಖಾ ರೀಟೇಲ್ ಉತ್ಸವಕ್ಕೆ ಇಂದು ಬೆಳಿಗ್ಗೆ ನಗರದ ಗಾಂಧೀನಗರ ಶಾಖೆಯಲ್ಲಿ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಬ್ಬದ ಅವಧಿಯಲ್ಲಿ ಸರಳೀಕೃತ ದಾಖಲೆ, ಕಡಿಮೆ ಪ್ರೊಸೆಸಿಂಗ್ ಚಾರ್ಜಸ್ ಹಾಗು ಬಡ್ಡಿ ದರದಲ್ಲಿ ರಿಯಾಯತಿ ಪಡೆದಿಕೊಂಡು ರಿಟೇಲ್ ಹಬ್ಬದ ಲಾಭ ಪಡೆಯಬೇಕೆಂದು, ಹಾಗೆ ನಮ್ಮ ಹೆಮ್ಮೆಯ ಕನರ್ಾಟಕ ಗ್ರಾಮೀಣ ಬ್ಯಾಂಕ್ 61000 ಕೋಟಿ ವ್ಯವಹಾರ ದಾಟಿದ್ದು, ಕರ್ನಾಟಕದ 2ನೇ ಅತಿದೊಡ್ಡ ಗ್ರಾಮೀಣ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಶ್ಲಾಘನೀಯ ಎಂದರು.
ಇನ್ನೋರ್ವ ಪ್ರಧಾನ ಪ್ರಬಂಧಕರಾದ ಭಾನುಮೂರ್ತಿ ಮಾತನಾಡಿ ಬ್ಯಾಂಕಿನ ಇತರೇ ಸೌಲಭ್ಯಗಳಾದ ಅಟಲ್ ಪೆನ್ಕ್ಷನ್ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ, ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ ಇವುಗಳ ಮಹತ್ವವನ್ನು ವಿವರಿಸಿದರು. ಈಗಿನ ದಿನಗಳಲ್ಲಿ ರಿಯಾಯತಿ ಬಡ್ಡಿ ದರಗಳಲ್ಲಿ ಗೃಹಸಾಲ, ವಾಹನ ಸಾಲ, ಅಡಮಾನ ಸಾಲಗಳ ಉಪಯೋಗ ಎಲ್ಲಾ ಗ್ರಾಹಕರು ಪಡೆದುಕೊಳ್ಳಲು ವಿನಂತಿಸಿದರು.
ನಗರದ ಎಲ್ಲಾ ಶಾಖಾ ಪ್ರಬಂಧಕರು ಹಾಗೂ ಪ್ರಾದೇಶಿಕ ಪ್ರಬಂಧಕರಾದ ಗಿರೆಡ್ಡಿ ಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಮ್ಮ ವ್ಯಾಪ್ತಿಯ ಎಲ್ಲರೂ ಉಪಯೋಗ ಪಡೆಯುವಂತೆ ಶ್ರಮಿಸಬೇಕಾಗಿ ಶಾಖಾ ಪ್ರಬಂಧಕರಿಗೆ ಕರೆ ನೀಡಿದರು, ಪ್ರಾದೇಶಿಕ ಕಛೇರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಾಲ ಮಂಜೂರಾದ ಗ್ರಾಹಕರಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು