ಇಂದು ಕನ್ನಡ ರಾಜ್ಯೋತ್ಸವ ದಿನಾಚರಣೆ
ತಾಳಿಕೋಟಿ. ಕರ್ನಾಟಕ ಸಂಭ್ರಮ 50 ರ ಅಂಗವಾಗಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಪಟ್ಟಣದಲ್ಲಿ ಇಂದು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುವುದು. ಮುಂಜಾನೆ 9 ಗಂಟೆಗೆ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಜರಗುವುದು ನಂತರ ತಾಯಿ ಭುವನೇಶ್ವರಿ ನಾಡ ದೇವಿಯ ಭಾವಚಿತ್ರ ಪೂಜಾ ಕಾರ್ಯಕ್ರಮ ನೆರವೇರಿಸಿ ಪಟ್ಟಣದಲ್ಲಿ ಭವ್ಯ ಮೆರವಣಿಗೆ ನಡೆಯುವುದು.
ವೇದಿಕೆ ಕಾರ್ಯಕ್ರಮದ ಘನ ಉಪಸ್ಥಿಯನ್ನು ಉಸ್ತುವಾರಿ ಸಚಿವ ಡಾ. ಎಂ. ಬಿ. ಪಾಟೀಲ ವಹಿಸಲಿದ್ದು ಅಧ್ಯಕ್ಷತೆಯನ್ನು ಮುದ್ದೇಬಿಹಾಳ ಶಾಸಕ ಸಿ .ಎಸ್ ನಾಡಗೌಡ ಅಪ್ಪಾಜಿ ಹಾಗೂ ಸಹ ಅಧ್ಯಕ್ಷತೆಯನ್ನು ರಾಜುಗೌಡ ಪಾಟೀಲ ವಹಿಸುವರು. ಮುಖ್ಯ ಅತಿಥಿಗಳಾಗಿ ಜವಳಿ ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ. ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ-2 ನವ ದೆಹಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ .ವಿಜಯಪುರ ಸಂಸದ ರಮೇಶ ಜಿಗಜಿಣಗಿ. ವಿಧಾನ ಪರಿಷತ್ ಸದಸ್ಯರಾದ ಹನುಮಂತ ನಿರಾಣಿ ಪ್ರಕಾಶ ರಾಥೋಡ .ಸುನಿಲ್ ಗೌಡ ಪಾಟೀಲ.ಪಿ. ಎಚ್ .ಪೂಜಾರ ಹಾಗೂ ಕಸಾಪ ಅಧ್ಯಕ್ಷ ಆರ್. ಎಲ್. ಕೊಪ್ಪದ ಆಗಮಿಸುವರು ಶಿಕ್ಷಕ ಸಾಹಿತಿ ಅಶೋಕ ಹಂಚಲಿ ವಿಶೇಷ ಉಪನ್ಯಾಸ ನೀಡುವರು ವೇದಿಕೆಯಲ್ಲಿ ತಹಸೀಲ್ದಾರ್ ಕೀರ್ತಿ ಚಾಲಕ್ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಬಿ .ಆರ್. ಬಿರಾದಾರ. ಪುರಸಭೆ ಮುಖ್ಯ ಅಧಿಕಾರಿ ಮೋಹನ ಜಾಧವ. ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಿ.ಧರಿಕಾರ. ಮುದ್ದೇಬಿಹಾಳ ಸಿಪಿಐ ಮಲ್ಲಿಕಾರ್ಜುನ್ ತುಳಸಿಗೇರಿ ಇರಲಿದ್ದಾರೆ . ಈ ಕಾರ್ಯಕ್ರಮಕ್ಕೆ ಪಟ್ಟಣದ ಸರ್ವ ಸಮಾಜದ ಬಾಂಧವರು ಗಣ್ಯಮಾನ್ಯರು ಪುರಸಭಾ ಸದಸ್ಯರು ಸಂಘ ಸಂಸ್ಥೆಗಳ ಮುಖ್ಯಸ್ಥರು ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು ಎಲ್ಲ ಸರ್ಕಾರಿ ಇಲಾಖೆ ಅಧಿಕಾರಿಗಳು ಹಾಲಿ ಮಾಜಿ ಸೈನಿಕರು ಹಾಗೂ ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಾಲೂಕಾ ಆಡಳಿತದ ಪ್ರಕಟಣೆ ತಿಳಿಸಿದೆ.