ಪಟ್ಟಣದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಕನಕದಾಸ ಜಯಂತಿ
ಪಟ್ಟಣದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಕನಕದಾಸ ಜಯಂತಿ
ಸಿಂದಗಿ 19 ; ಕನಕರು 16 ಶತಮಾನದ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿದ್ದರು, ಇವರು ಆ ದಿನಗಳಲ್ಲಿ ಜನರ ಮನಸ್ಸಿನಲ್ಲಿ ಮೌಢ್ಯ, ಅಂಧಕಾರ, ಅಜ್ಞಾನ ತೊಲಗಿಸಲು ಶ್ರಮವನ್ನು ಪಟ್ಟಿ ಸುಂದರ ನಿರ್ಮಾಣ ಮಾಡಲು ಪ್ರಯತ್ನಿಸಿದ್ದವರು, ಕನಕರು ವೇದವ್ಯಾಸರ ಶಿಷ್ಯರಾಗಿದ್ದರು, ಶ್ರೀಹರಿಯ,ತಿರುಪತಿಯ ತಿಮ್ಮಪ್ಪ, ಶ್ರೀಕೃಷ್ಣ ಅನುಗ್ರಹಕ್ಕೆ ಪಾತ್ರರಾಗಿದ್ದರು ಎಂದು ವಿದ್ಯಾರ್ಥಿನಿ ಮನುಶ್ರೀ ಪಟ್ಟಣಶೆಟ್ಟಿ ಹೇಳಿದರು.ಪಟ್ಟಣದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಕನಕದಾಸ ಜಯಂತಿಯಲ್ಲಿ ಮಾತನಾಡಿದರು. ಶಾಲೆಯ ಪ್ರಾಂಶುಪಾಲೆ ಶಾಹೀನ್ ಶೇಖ್ ಮಾತನಾಡಿ, ಸರ್ವಧರ್ಮ ಸಮಾನತೆಗೆ ಪಾತ್ರರಾದ ಕನಕರು ತಮ್ಮ ಜೀವನದ್ದೂಕ್ಕೂ ಸಮಾಜ ಜನರ ಏಳ್ಗೆಯನ್ನು ಬಯಸುವರಾಗಿದ್ದರು ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ಪ್ರಾಂಶುಪಾಲರು ಉಪಸ್ಥಿರಿದ್ದರು. ಶ್ರೀನಿವಾಸ ಕನಕಗೀರಿ ಕೀರ್ತನೆಯನ್ನು ಹೇಳಿದರು,