ಹೆಲಿಕಾಪ್ಟರ್ ನಲ್ಲಿ ಜೈಪುರಕ್ಕೆ ಹಾರಿದ ಕತ್ರಿನಾ ದಂಪತಿ
ಮಾದವಪುರ. ಡಿ 10: ರಾಜಾಸ್ತಾನದ ಮಾದವಪುರದಲ್ಲಿ ಹಸೆಮಣೆಯೇರಿದ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ಅವರುಗಳು ಶುಕ್ರವಾರ ಹೆಲಿಕಾಪ್ಟರ್ ಮೂಲಕ ಜೈಪುರ ತಲುಪಿದ್ದಾರೆ.ಅವರು ಬಿಗಿಭದ್ರತೆಯಲ್ಲಿ ಹೆಲಿಕ್ಯಾಪ್ಟರ್ ಏರುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನವದಂಪತಿಗಳನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಅವರನ್ನು ಹಿಂಬಾಲಿಸಿಕೊಂಡು ನಾಲ್ಕೈದು ಕಾರುಗಳು ಸಹ ಜೊತೆಯಾಗಿ ಬಂದಿವೆ. ಅಭಿಮಾನಿಗಳ ಶುಭ ಹಾರೈಕೆಯಿಂದ, ನಮ್ಮ ದಾಂಪತ್ಯ ಜೀವನದಲ್ಲಿ ಹೊಸ ಬದುಕು ಹೊಸ, ಯುಗ ಆರಂಭವಾಗಿದೆ ಎಂದು ನೂತನ ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ