ಜಕ್ಕಾರಟ್ಟಿ ಗ್ರಾಪಂ ಆದಾಯ ಹೆಚ್ಚಳಕ್ಕೆ ಕರ ವಸೂಲಾತಿ ಮಾಡಿ: ಶ್ವೇತಾ ಹಾಡಕರ
ಸಂಬರಗಿ 15: ಜಕ್ಕಾರಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕು. ಮನೆಮನೆಗೆ ಶೌಚಾಲಯ ಕಟ್ಟಡ ಮಾಡಬೇಕು. ಗ್ರಾಮ ಪಂಚಾಯತ ಆದಾಯ ಹೆಚ್ಚು ಮಾಡಲು ಕರ ವಸೂಲಾತಿ ಮಾಡಬೇಕೆಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ನೊಡಲ್ ಅಧಿಕಾರಿ ಶ್ವೇತಾ ಹಾಡಕರ ಸೂಚನೆ ನೀಡಿದರು.
ಜಕ್ಕಾರಟ್ಟಿ ಗ್ರಾಮ ಪಂಚಾಯತ ಸಭಾ ಭವನದಲ್ಲಿ 2021-22 ಜಮಾ ಬಂದಿ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ಸಕರ್ಾರದಿಂದ ಬರುವ ಅನುದಾನ ಸರಿಯಾಗಿ ಸದುಪಯೋಗ ಆಗಬೇಕು. ಸರ್ಕಾರ ದಿಂದ ಇಲ್ಲಿಯವರೆಗೆ ಸುಮಾರು 1ಕೋಟಿ ಅನುದಾನ ಬಂದಿರುವುದರಿಂದ ಗ್ರಾಮದ ಅಭಿವೃದ್ಧಿಗೆ ಇನ್ನುಳಿದ ಹಣದಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕೆಂದು ಸಲಹೆ ನೀಡಿ ಪ್ರಾಥಮಿಕ ಶಾಲೆ ಬಿಸಿಯೂಟ ಪರಿಶೀಲನೆ ಮಾಡಿ ಶಿಕ್ಷಕರಿಗೆ ಸೂಚನೆ ನೀಡಿ ಈ ಗ್ರಾಮದಲ್ಲಿರುವ ಕಿರಿಯ ಕನ್ನಡ ಪ್ರಾಥಮಿಕ ಶಾಲೆ ಸಮಸ್ಯೆ ಕುರಿತು ಪರಿಶೀಲನೆ ಮಾಡಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಗ್ರಾಮ ಪಂಚಾಯತ ಅಧ್ಯಕ್ಷ ಸಿದ್ದು ಬಾಳು ಖೋತ ಉಪಾದ್ಯಕ್ಷ ರೇಷ್ಮಾ ರಾಮಚಂದ್ರ ಕಾಂಬಳೆ, ಶಾಂತಾ ಬಾಲಚಂದ್ರ ಶಿಂಧೆ, ಬಾವುಸೋ ದಶರಥ ಚವ್ಹಾಣ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎ ಎಸ್ ಕುಲಕರ್ಣಿ ಕಾಯದರ್ಶ ಗಳಾದ ರಾಜು ಪಾಟೀಲ, ಅಪ್ಪಾಸಾಬ ಪಾಟೀಲ, ಗೋಪಾಲ ಶಿಂಧೆ, ಮನೋಜ ಖೋತ ಉಪಸ್ಥಿತರಿದ್ದರು