ಜಗದ್ಗುರು ರೇಣುಕಾಚಾರ್ಯ ಕೋ-ಆಪರೇಟಿವ್ ಸೊಸೈಟಿ 28ನೇ ವಸಂತಕ್ಕೆ ದಾಪುಗಾಲು
ಲೋಕದರ್ಶನ ವರದಿ
ಶಿಗ್ಗಾವಿ 30 : ಪಟ್ಟಣದಲ್ಲಿ ಕಾರ್ಯಾರಂಭ ಮಾಡಿ 27 ವಸಂತಗಳನ್ನು ಪೂರೈಸಿ 28.ನೇ ವಸಂತಕ್ಕೆ ದಾಪುಗಾಲು ಇಡಲು ಗ್ರಾಹಕರು ಮತ್ತು ಆಡಳಿತ ಮಂಡಳಿಯ ಸಹಾಯ ಸಹಕಾರ ಅಮೂಲ್ಯವಾದದ್ದು ಎಂದು ಅಧ್ಯಕ್ಷ ವೀರಪ್ಪ ಬಡ್ಡಿ ಹೇಳಿದರು.
ಪಟ್ಟಣದ ಜಗದ್ಗುರು ರೇಣುಕಾಚಾರ್ಯ ಕೋ-ಆಪರೇಟಿವ್ ಸೊಸೈಟಿ ಕಾಯರ್ಾಲಯದಲ್ಲಿ ರವಿವಾರ ನಡೆದ 28ನೇ ವರ್ಷದ ವಾರ್ಷಿಕ ಮಹಾಭೆಯ ಅಧ್ಯಕ್ಷತೆ ವಹಿಸಿ, 27ನೇ ವಾರ್ಷಿಕ ಮಹಾಸಭೆಯ ಠರಾವುಗಳನ್ನು ದೃಢೀಕರಿಸುವ ಮೂಲಕ ಸಭೆಯನ್ನು ಉದ್ದೇಶಿಸಿ ಉದ್ದೇಶಿಸಿ ಮಾತನಾಡಿದವರು. ಗ್ರಾಹಕರ ಸಹಾಯ ಸಹಕಾರದಿಂದ ಪ್ರಾರಂಭದಿಂದ ಇಂದಿನವರೆಗೂ ಸುಲಲಿತವಾಗಿ ಲಾಭದಲ್ಲಿ ನಡೆದುಕೊಂಡು ಬಂದ ಸಂಘ ತನ್ನ ಕಾರ್ಯ ವ್ಯಾಪ್ತಿಯನ್ನು ಹಾವೇರಿ,ಧಾರವಾಡ,ಗದಗ ಮತ್ತು ಕಾರವಾರ ಜಿಲ್ಲೆಗಳಿಗೆ ವಿಸ್ತಾರಗೊಂಡು 2015, 2018 ಮತ್ತು 2019 ರಲ್ಲಿ ಮೂರು ಬಾರಿ ಸಹಕಾರ ಮಹಾಮಂಡಲ ಬೆಂಗಳೂರು ಇವರಿಂದ ಹಾವೇರಿ ಜಿಲ್ಲೆಯಲ್ಲಿ ಅತ್ಯುತ್ತಮ ಸಹಕಾರಿ ಸಂಘ ಎಂಬ ಪ್ರಶಸ್ತಿ ಪಡೆಯುವುದರೊಂದಿಗೆ, ಇ-ಸ್ಟಾಂಪಿಂಗ್ ಉತ್ತಮ ಸೇವೆಗಾಗಿ ಮಹಾ ಮಂಡಳಿಯಿಂದ 2019 ರ ಉತ್ತಮ ಸೇವಾ ಕೇಂದ್ರ ಪ್ರಶಸ್ತಿ ಪಡೆಯುವುದರ ಮೂಲಕ ರಾಜ್ಯದಲ್ಲಿಯೇ ನಮ್ಮ ಜಗದ್ಗುರು ರೇಣುಕಾಚಾರ್ಯ ಕೋ-ಆಪರೇಟಿವ್ ಸೊಸೈಟಿ ಕಾರ್ಯ ಪ್ರವೃತ್ತವಾಗಿರುವುದು ನಮ್ಮ ತಾಲೂಕಿನ ಹೆಮ್ಮೆ ಎಂದು ಹೇಳಿದರು.
ಸಮಾರಂಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ತಾಲೂಕಿನ ಪ್ರತಿವಾಂತ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರವಾಗಿ ನಗದು ರೂಪದ ಮೂಲಕ ಗೌರವ ಧನ ವಿತರಿಸಲಾಯಿತು. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೀರಪ್ಪ ರುದ್ರಪ್ಪ ಮಡ್ಲಿ ಯವರ ಹೃದಯ ಸಂಬಂಧಿ ಕಾಯಿಲೆಗೆ ಮತ್ತು ಇತ್ತೀಚಿಗೆ ನಿಧನ ಹೊಂದಿದ ಸಂಸ್ಥೆಯ ಪಿಗ್ಮಿ ಸಂಗ್ರಹಗಾರ ಪರಸಪ್ಪ ನರೇಗಲ್ ಅವರ ಕುಟುಂಬಸ್ಥರಿಗೆ 50 ಸಾವಿರ ನಗದು ಪರಿಹಾರ ಧನವನ್ನು ನೀಡಲಾಯಿತು.
ಸಮಾರಂಭದಲ್ಲಿ ನಿರ್ದೇಶಕ ಮಂಡಳಿ ಉಪಾಧ್ಯಕ್ಷ ಮಾಲತೇಶ್ ಕಂಕಣವಾಡ, ನಿದರ್ೇಶಕರಾದ ರುದ್ರಮುನಿ ಅರಳೆಲೆಮಠ, ಫಕೀರಪ್ಪ ಎಲಿಗಾರ, ಭರಮಜ್ಜ ನವಲಗುಂದ, ಬಸವರಾಜ ವಾಲಿಶೆಟ್ಟರ್, ನಾಗರಾಜ ಬ್ರಹ್ಮಾವರ್, ಡಾ. ಐ ಪಿ ಕೆ ಶೆಟ್ಟರ್, ಕಲ್ಲಪ್ಪ ಹೆಸರೂರ, ಹೆಗ್ಗಪ್ಪ ಲಮಾಣಿ, ಪ್ರಕಾಶ್ ಹಾದಿಮನಿ, ವಿಜಯಲಕ್ಷ್ಮಿ ಬೇವಿನಮರದ, ಜಯ ಶ್ರೀವರ್ಷ ಎಲಿಗಾರ ಸೇರಿದಂತೆ ಸಿಬ್ಬಂದಿ ವರ್ಗ ಮತ್ತು ಸಂಸ್ಥೆಯ ಕಾನೂನು ಸಲಹೆಗಾರರು ಅಗ್ನಿ ಏಜೆಂಟರು ಉಪಸ್ಥಿತರಿದ್ದರು