ಒಳ ಬಳ್ಳಾರಿಯಲ್ಲಿ ಜ. 26ರಿಂದ ಧಾರ್ಮಿಕ ಕಾರ್ಯಕ್ರಮ
ಸಿರುಗುಪ್ಪ: ಒಳ ಬಳ್ಳಾರಿಯ ಚನ್ನಬಸವೇಶ್ವರ ಶಿವಯೋಗಿಗಳು ಸಿಂಧನೂರು ಮತ್ತು ಸಿರುಗುಪ್ಪ ತಾಲೂಕುಗಳ ಭಕ್ತರ ಪಾಲಿನ ನಡೆದಾಡುವ ದೇವರು ಶ್ರೀಗಳನ್ನು ಶ್ರದ್ಧೆ ಭಕ್ತಿಯಿಂದ ಈ ಭಾಗದ ಭಕ್ತರ ಮನೆ ಮನಗಳಲ್ಲಿ ಕಾಣಬಹುದಾಗಿದೆ ಎಂದು ಎದ್ದಲದೊಡ್ಡಿ ಸುವರ್ಣ ಗಿರಿ ವಿರಕ್ತಮಠದ ಮಹಾಲಿಂಗ ಮಹಾಸ್ವಾಮಿಗಳು ಸಿರುಗುಪ್ಪ ನಗರದ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅವರು ಮಾತನಾಡುತ್ತಾ ಚನ್ನಬಸವ ತಾತ ಮಹಾ ರಥೋತ್ಸವ ಸಿದ್ದಲಿಂಗ ಮಹಾಸ್ವಾಮಿಗಳ ಅಮೃತ ಮಹೋತ್ಸವ ರಜತಾ ತುಲಾಭಾರ ಹಾಗೂ ಸಾಮೂಹಿಕ ಮದುವೆ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಪ್ರಸಕ್ತ ಪೀಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸಹ ಭಕ್ತರ ಸೇವೆಯ ಮೂಲಕ ಭಕ್ತರ ಮನದಾಳದಲ್ಲಿ ಮನೆ ಮಾಡಿದ್ದಾರೆ ಎಂದರು ಒಳಬಳ್ಳಾರಿಯಲ್ಲಿ ಜನವರಿ 26 27 ಮತ್ತು 28 ರಂದು ನಡೆಯುವ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಒಳಬಳ್ಳಾರಿಯಲ್ಲಿ ಆಯೋಜಿಸಿರುವ ಧಾರ್ಮಿಕ ಕಾರ್ಯಕ್ರಮಗಳ ಬಿತ್ತಿ ಪತ್ರಗಳನ್ನು ಸಿರುಗುಪ್ಪ ದಲ್ಲಿ ಬಿಡುಗಡೆ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು ಹಳೆಕೋಟೆ ಮರಿ ಶಿವಯೋಗಿಗಳ ಮಠದ ಸಿದ್ಧಬಸವ ಶ್ರೀಗಳು ಗುರುಬಸವ ಮಹಾಮಠದ ಬಸವಭೂಷಣ ಶ್ರೀಗಳು ಮಾಜಿ ಶಾಸಕ ಟಿ ಎಂ ಚಂದ್ರಶೇಖರಯ್ಯ ಸ್ವಾಮಿ, ಮುಖಂಡರಾದ ಎಂ ಗೋಪಾಲ ರೆಡ್ಡಿ, ಎಚ್ ಕೆ ಮಲ್ಲಿಕಾರ್ಜುನಯ್ಯ ಸ್ವಾಮಿ, ಚೌಕ ಬಸವನಗೌಡ, ಹನುಮಂತರೆಡ್ಡಿ ,ಆರ್ ಬಸವಲಿಂಗಪ್ಪ,ಕೆ ವೆಂಕಟರಾಮ ರೆಡ್ಡಿ ಅವರು ಇದ್ದರು.