ಅರ್ಥವಿಲ್ಲದ ಟೀಕೆಗೆ ಸುಮ್ಮನಿರುವುದೇ ಉತ್ತಮ: ಸಿಎಂ ಕುಮಾರಸ್ವಾಮಿ
\ಬೀದರ್ 28: ಗ್ರಾಮ ವಾಸ್ತವ್ಯ ಕುರಿತು ಬಿಜೆಪಿ ನಾಯಕರು ನಡೆಸುತ್ತಿರುವ ಟೀಕಾ ಪ್ರಹಾರಕ್ಕೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕುವೆಂಪು ರಚಿತ "ಅರ್ಥವಿಲ್ಲದ ಟೀಕೆಗೆ ಮೌನವಾಗಿರುವುದೆ ಉತ್ತಮ" ಎಂಬ ನುಡಿಯ ಹೇಳುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮುಗಿಸಿ ಬೆಳಿಗ್ಗೆ ಉಜಳಂಬ ಗ್ರಾಮದಿಂದ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮ ವಾಸ್ತವ್ಯದ ಬಗ್ಗೆ, ಜೆಡಿಎಸ್ ಕ್ಷೇತ್ರಗಳಲ್ಲಿ ಮಾತ್ರ ಗ್ರಾಮ ವಾಸ್ತವ್ಯ ಮಾಡುತ್ತಾರೆ, ನನ್ನ ವೈಯಕ್ತಿಕ ಪ್ರವಾಸದ ಬಗ್ಗೆ ಟೀಕೆಗಳಿಗೆ ಮೌನವಾಗಿರುವುದೇ ಉತ್ತಮ ಎಂಬ ಮಾತು ನನಗೆ ಯಾದಗಿರಿ ಜಿಲ್ಲೆಯ ಗುರಮಿಟಕಲ್ ತಾಲೂಕಿನ ಚಂಡರಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದಾಗ ಶಾಲೆಯ ಗೋಡೆ ಮೇಲೆ ರಾಷ್ಟ್ರಕವಿ ಕುವೆಂಪು ಅವರ ನುಡಿ ಬರೆದಿರುವುದು ಪ್ರಸ್ತಾಪಿಸಿ ಟಾಂಗ್ ನೀಡಿದರು. ಅಮೆರಿಕ ಪ್ರವಾಸ ಸರ್ಕಾರಿ ಕಾರ್ಯಕ್ರಮವಲ್ಲ, ಸ್ವಂತ ಖರ್ಚನಲ್ಲಿ ಹೊಗುತ್ತಿದ್ದೇನೆ, ಸಮಾಜದ ಗುರುಗಳು ದೇವಸ್ಥಾನದ ಭೂಮಿ ಪೂಜೆಯನ್ನು ತಾವೇ ಮಾಡಬೇಕು ಹೆಚ್ಚು ಒತ್ತಡ ಹೆರಿರುವುದರಿಂದ ಹೊಗುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಒಂದೇ ರಾತ್ರಿ ಎಲ್ಲಾ ಬದಲಾವಣೆ ತರಲು ಸಾಧ್ಯವಿಲ್ಲ, ಗ್ರಾಮ ವಾಸ್ತವ್ಯದ ಜತೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ರಮಗಳಿಂದ ಬದಲಾವಣೆ ತರಲು ಸಾಧ್ಯ ಎಂದು ಸಿಎಂ ಹೇಳಿದರು.
ಗ್ರಾಮ ವಾಸ್ತವ್ಯಕ್ಕೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್, ಗಣಿ ಭೂವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್, ಕ್ರೀಡಾ ಸಚಿವ ರಹಿಂಖಾನ್, ಶಾಸಕ ಬಿ ನಾರಾಯಣರಾವ್ ಸಾಥ್ ನೀಡಿದರು ಶುಕ್ರವಾರ ಬೆಳಿಗ್ಗೆ ಉಜಳಂಬ ಗ್ರಾಮ ವಾಸ್ತವ್ಯ ಮುಗಿಸಿದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇರವಾಗಿ ಬೀದರ್ ವಿಮಾನ ತರಬೇತಿ ಕೇಂದ್ರದ ಮೂಲಕ ವಿಶೇಷ ವಿಮಾನದಿಂದ ಬೆಂಗಳೂರು ಪ್ರವಾಸ ಕೈಗೊಂಡರು.
ಯಶಸ್ವಿಯಾದ ಗ್ರಾಮ ವಾಸ್ತವ್ಯ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಉಜಳಂಬ ಗ್ರಾಮದಲ್ಲಿ ನಡೆಸಿದ ವಾಸ್ತವ್ಯ ಯಶಸ್ವಿಯಾಗಿದ್ದು, ಬಸವಕಲ್ಯಾಣ ಭಾಗದ ಗ್ರಾಮಗಳಲ್ಲಿ ಜನರು ಸಂತಸ ವ್ಯಕ್ತಪಡಿಸಿದ್ದಾರೆ, ಅಲ್ಲದೆ ಸುಮಾರು 4000 ಅಧಿಕ ಜನರ ದೂರುಗಳು ಜನತಾ ದರ್ಶನದಲ್ಲಿ ಸಿಎಂ ಎದುರು ಬಂದಿದ್ದು ದಶಕಗಳಿಂದ ದಿಕ್ಕು ಕಾಣದ ಊರಲ್ಲಿ ಸರ್ಕಾರದ ವಾಸ್ತವ್ಯದಿಂದ ಹಣೆ ಬರಹವೆ ಬದಲಾಗಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬಂದಿವೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 