ರಾಣೆಬೆನ್ನೂರ

ಐರಣಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವ: ವಿಜೃಂಭಿಸಿದ ಜಾಂಜ್ ಮೇಳ

ಐರಣಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವ: ವಿಜೃಂಭಿಸಿದ ಜಾಂಜ್ ಮೇಳ

ರಾಣೆಬೆನ್ನೂರು : ತಾಲೂಕಿನ ಐರಾವತ ಕ್ಷೇತ್ರ ಐರಣಿ ಹೊಳೇಮಠದ ಜಗದ್ಗುರು ಗುರು ಬಸವರಾಜ ದೇಶಿ ಕೇಂದ್ರ ಮಹಾಸ್ವಾಮಿಗಳವರ ಪಟ್ಟಾಭಿಷೇಕದ 45ನೇ ವರ್ಷದ ಅಡ್ಡ ಪಲ್ಲಕ್ಕಿ ಮಹೋತ್ಸವವು, ಸಮೀಪದ ಹರಿಹರ ಗ್ರಾಮದಲ್ಲಿ ಇತ್ತೀಚಿಗೆ ನಡೆಯಿತು. ಅಭೂತಪೂರ್ವಾಗಿ ಜರುಗಿದ ಧಾರ್ಮಿಕರ ಜನ ಜಾಗೃತಿಯ ಮಹಾ ಅಡ್ಡ ಪಲ್ಲಕ್ಕಿ  ರಥೋತ್ಸವದಲ್ಲಿ ಸಾವಿರಾರು ಭಕ್ತ ಪಾಲ್ಗೊಂಡಿದ್ದರು, ಅಡ್ಡ ಪಲ್ಲಕ್ಕಿ ಉತ್ಸವದ ಮೆರವಣಿಗೆಗೆ, ಹಾವೇರಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ನಾಡಿನ ಖ್ಯಾತ ನಂದಿಹಳ್ಳಿಯ ಮಹೇಶ್ ಕೋಣನವರ ತಂಡದವರ ಜಾಂಜ್ ಮೇಳವು, ವಿಶೇಷ ಮೆರಗು ನೀಡಿದ್ದವು.

ಸುದ್ದಿ ಓದಿ