ಸಿರುಗುಪ್ಪ

ಅಂತರ ರಾಷ್ಟ್ರೀಯ ಯೋಗ ದಿನ: ಸಾಮೂಹಿಕ ಯೋಗ ಪ್ರದರ್ಶನಕ್ಕೆ ಚಾಲನೆ

ಅಂತರ ರಾಷ್ಟ್ರೀಯ ಯೋಗ ದಿನ: ಸಾಮೂಹಿಕ ಯೋಗ ಪ್ರದರ್ಶನಕ್ಕೆ ಚಾಲನೆ

ಸಿರುಗುಪ್ಪ 21: ನಮ್ಮ  ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದು ಮತ್ತು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನ ಬದ್ಧ ಮೂಲಭೂತ ಕರ್ತವ್ಯ. ಯೋಗ ಮೂಲಕ ಆರೋಗ್ಯ ಹಾಗೂ ಯೋಗ ಕ್ಷೇಮಕ್ಕಾಗಿ ಜಾಗತಿಕ ಆಂದೋಲನದ ಭಾಗ ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಮೈಸೂರು ಬಳ್ಳಾರಿ ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸಮಿತಿ ಸದಸ್ಯರು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಜನ ಸಂಪರ್ಕ ಸಚಿವಾಲಯದ ಜನಾಭಿಪ್ರಾಯ ಮುಖಂಡ ಎ ಅಬ್ದುಲ್ ನಬಿ ಅವರು ಹೇಳಿದರು.ನಗರಸಭೆಯ ಹತ್ತಿರದ ಸರಕಾರಿ ಹಿರಿಯ ಉದ್ರು ಪ್ರಾಥಮಿಕ ಶಾಲಾ ಆವರಣದಲ್ಲಿ ಕರ್ನಾಟಕ ಸರ್ಕಾರ 75ನೇ ಆಜಾದಿ ಅಮೃತ ಮಹೋತ್ಸವ ತಾಲ್ಲೂಕು ಆಡಳಿತ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜರುಗಿದ ಎಂಟನೇ ಅಂತಾರಾಷ್ಟ್ರೀಯ ಯೋಗ  ದಿನಾಚರಣೆ ಕಾರ್ಯಕ್ರಮ ಸಾಮೂಹಿಕ ಯೋಗ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ ಯೋಗ ಭಾರತೀಯ ಪ್ರಾಚೀನ ಪರಂಪರೆಯ ಅತ್ಯಮೂಲ್ಯ ಕೊಡುಗೆಯಾಗಿದೆ. ಆರೋಗ್ಯ ಮನಸ್ಸು ಶರೀರ ಆಲೋಚನೆ ಕ್ರಿಯೆ ಯೋಗಕ್ಷೇಮ ಸಮಗ್ರ ದೃಷ್ಟಿಕೋನಗಳನ್ನೊಳಗೊಂಡಿದೆ. ಮಾನವೀಯತೆಯ ಹಿತ ದೃಷ್ಟಿಯಿಂದ ದೇಹದ ಆರೋಗ್ಯಕ್ಕೆ ಪ್ರಪಂಚಕ್ಕೆ ಕ್ರೀರ್ತಿ ತರುವಂತಹ ಒಬ್ಬರಿಂದ ಒಬ್ಬರು ಕಲಿತಿರುವುದನ್ನು ಕಲಿಸುವದು ಸಾವಿರಾರು ವರ್ಷಗಳಿಂದ ಐತಿಹಾಸಿಕ ಪರಂಪರೆಯಿಂದ ಪೈಲ್ವಾನರು ಗರಡಿಮನಿ ತಾಲೀಮ ಖಾನಾ ಪ್ರಯೋಗ ವ್ಯಾಯಾಮ ಶಾಲೆ ತೆರೆದು ಮುಂಜಾನೆ ಮತ್ತು ಸಂಜೆ ವ್ಯಾಯಾಮ ಕಲಿಯುವುದು ಮತ್ತು ಕಲಿಸುವುದು ವೈಯಕ್ತಿಕ ನೆಮ್ಮದಿ ಬದುಕಿಗೆ ಮುಂದುವರಿದಿದೆ ಇದೇನು ನಮ್ಮೆಲ್ಲರಿಗೂ ಹೊಸದೇನಲ್ಲ ದೇಹದ ಆರೋಗ್ಯಕ್ಕೆ ಜಿಗರ್ ಧ್ಯಾನ ತಾಲೀಮು ಯೋಗ ವ್ಯಾಯಾಮ ಪೂರ್ಣ ಜೀವನದ ಸುಯೋಗ ಎಂದರು.

 ಯೋಗ ಪ್ರದರ್ಶನದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಇಮ್ತಿಯಾಜ್ ಅಲಿ ಅವರು ಅಧ್ಯಕ್ಷತೆ ವಹಿಸಿದ್ದರು ದೇಶನೂರು ಸೈಯದ್ ಖಲೀಲ್ ಉಲ್ಲಾ ಖಾದ್ರಿ, ಸಾಮಾಜಿಕ ಕಾರ್ಯಕರ್ತ ಎ ಮೊಹಮ್ಮದ್ ನೌಶಾದ್ ಅಲಿ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಗುರುಗಳಾದ ಮೊಹಮ್ಮದ್ ಅಲಿ ಬಾಗವಾನ್ ಅವರು ಕಾರ್ಯಕ್ರಮ ನಿರೂಪಿಸಿ ಮಾತನಾಡುತ್ತಾ ಮಾನವೀಯತೆಗಾಗಿ ಯೋಗ ಎಂದು ಹೇಳಿದರು.  ಶಿಕ್ಷಕಿಯರಾದ ಜಿ ಶಾಹಿನಾ, ಜಿ ಫಜಲ್ ಉನ್ನಿಸಾ ಸ್ವಾಗತಿಸಿ ವಂದಿಸಿದರು. ಅತಿಥಿ ಶಿಕ್ಷಕಿ ಸುಮಂಗಲಾ ಶಾಲಾ ಮಕ್ಕಳು ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದರು 

ಸುದ್ದಿ ಓದಿ