ಅಂತರರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ
ಸಿರುಗುಪ್ಪ- 21ನೇ ಶತಮಾನದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳಿಗೆ ಒಗ್ಗಟಿನ ಮೌಲ್ಯ ಮಹತ್ವದ್ದಾಗಿದೆ ಸಾರ್ವತ್ರಿಕ ಶಿಕ್ಷಣವನ್ನು ಸಾಧಿಸುವದು ಬಡತನ ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡುವ ಕೈಗೊಳ್ಳುವ ಚಟುವಟಿಕೆ ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಮೈಸೂರು ಜಿಲ್ಲಾ ಸಾಕ್ಷರತಾ ಸದಸ್ಯ ಸಮಾಜ ಸುಧಾರಕ ಜಾತ್ಯಾತೀತ ಮಾನವ ಎ ಅಬ್ದುಲ್ ನಬಿ ಅವರು ಹೇಳಿದರು.
ನಗರದ ಇಬ್ರಾಹಿಂ ಮಂಜೀಲ್ ನಲ್ಲಿ 18ನೇ ಅಂತರರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನವನ್ನು ನೆನಪಿಸಿ ಅವರು ಮಾತನಾಡುತ್ತಾ ವೈವಿಧ್ಯತೆಯಲ್ಲಿ ಏಕತೆಯನ್ನು ಆಚರಿಸಲು ಯುನಿಟೆಡ್ ನೇಶನ್ ವಿಶ್ವಸಂಸ್ಥೆ 22ಡಿಸೆಂಬರ್ 2005 ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಪ್ರತಿವರ್ಷ ಡಿಸೆಂಬರ್ 20ರಂದು ಅಂತರರಾಷ್ಟ್ರೀಯ ಒಗ್ಗಟಿನ ದಿನವೆಂದು ಘೋಷಿಸಿತು ಬಡತನವನ್ನು ನಿಮರ್ೂಲನೆ ಮಾಡುವ ಕಾರ್ಯದಲ್ಲಿ ಒಗ್ಗಟ್ಟಿನ ಮಹತ್ವವನ್ನು ಜನರಿಗೆ ನೆನಪಿಸುವ ಗುರಿಯನ್ನು ಹೊಂದಲಾಗಿದೆ ಇದು ಜಾಗತಿಕ ಆಚರಣೆಯಾಗಿದೆ ಆದರೆ ಸಾರ್ವಜನಿಕರ ರಜಾ ದಿನವಲ್ಲ ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಸರ್ಕಾರಗಳು ಬದ್ಧರಾಗಿರುವುದನ್ನು ನೆನಪಿಸುತ್ತದೆ.ಬಡತನ ನಿಮರ್ೂಲನೆ ಮಾಡಲು ಸಹಾಯ ಮಾಡುವ ನವೀನ ವಿಧಾನಗಳನ್ನು ಕಂಡುಕೊಳ್ಳಲು ಜನರನ್ನು ಪ್ರೋತ್ಸಾಹಿಸುತ್ತದೆ ಅಂತರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗಾಗಿ ಒಂದಾಗಲು ತನ್ನ ಸದಸ್ಯರ ಒಗಟನ್ನು ಅವಲಂಬಿಸಿದೆ ಜಾಗತಿಕ ತಿಳುವಳಿಕೆಯನ್ನು ಉತ್ತೇಜಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಈ ದಿನ ಹೊಂದಿದೆ ಬಡತನವನ್ನು ಎದುರಿಸುವಲ್ಲಿ ಭೂ ಗಣಿ ಆರೋಗ್ಯ ನೈಸರ್ಗಿಕ ಸಾರ್ವತ್ರಿಕ ಐಕ್ಯತೆ ಗುಂಪುಗಳು ವ್ಯಕ್ತಿಗಳು ಸಂಸ್ಥೆಗಳು ಸಹಸ್ರಮಾನದ ಘೋಷಣೆಯಲ್ಲಿ ಬೆಳೆಯುತ್ತಿರುವ ಅಸಮಾನತೆಯ ಬೆಳಕಿನಲ್ಲಿ ವಿಶ್ವಸಂಸ್ಥೆ ತನ್ನ ಅಭಿವೃದ್ಧಿ ಗುರಿಗಳು ಸಾಧಿಸಲು ಬಲವಾದ ಒಗ್ಗಟ್ಟು ಮತ್ತು ಸಹಕಾರ ಅಗತ್ಯ ಎಂದು ಅರಿತುಕೊಂಡಿದೆ ಒಗ್ಗಟಿನ ಸಂಸ್ಕೃತಿ ಪ್ರಚಾರ ಮನೋಭಾವ ಮುಖ್ಯ ಎಂದು ಅಬ್ದುಲ್ ನಬಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು