ರಾಣೆಬೆನ್ನೂರ

ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭ

ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭ

ರಾಣಿಬೆನ್ನೂರು: ಈ ಭೂಮಿಯ ಮೇಲಿರುವ 84 ಲಕ್ಷ ಜೀವರಾಶಿಗಳಲ್ಲಿ ಚಿಂತನ ಮಂಥನ ಮಾಡುವ ಏಕೈಕ ಜೀವಿಯಾಗಿರುವ ಮಾನವನು ಜೀವನದುದ್ದಕ್ಕೂ ಸತ್ಯ, ಪ್ರಾಮಾಣಿಕ, ನ್ಯಾಯ, ನೀತಿಯ ದಾರಿಯಲ್ಲಿಯೇ ಸಾಗಿ ಉತ್ತಮ ಹೆಸರು ಮಾಡಬೇಕು. ಉಸಿರಿಗೆ ಬೆಲೆ ಇದೆ. ಆದರೆ ಉಳಿಗಾಲವಿಲ್ಲ ಎಂದು ಕೊಪ್ಪಳದ ಗವಿಶಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು. 

   ಸೋಮವಾರ ಇಲ್ಲಿನ ನಗರಸಭಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ವಂದೇ ಮಾತರಂ ಸೇವಾ ಸಂಸ್ಥೆ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ಇವರ ವಿವಾಹದ ಜೊತೆಗೆ 132 ಜೋಡಿಗಳ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

    ಅನೇಕ ಮನುಷ್ಯರು ತಮ್ಮ ಜೀವಿತಾವಧಿಯಲ್ಲಿ ಮಾಡಬಾರದ್ದನ್ನು ಮಾಡಿ, ಇಹಲೋಕ ತ್ಯಜಿಸುತ್ತಾರೆ. ಕೆಲವರು ಬದುಕಿದಂತೆ ಅವರ ಅನುಪಮ ಸೇವೆ ಬಿಟ್ಟು ಹೋಗುತ್ತಾರೆ. ಇಂತಹ ಬದುಕು ಸಾಗಿಸಲು ಮುಂದಾಗಿರುವವರು ಪ್ರಕಾಶ ಬುರಡಿಕಟ್ಟಿ ಎಂದು ಸ್ವಾಮೀಜಿ ತಿಳಿಸಿದುರು.   ನಿಸರ್ಗ ಮನುಷ್ಯನಿಗೆ ಎರಡು ಆಯ್ಕೆಗಳನ್ನು ಕೊಟ್ಟಿದೆ. ಒಂದು ಕೊಟ್ಟು ಹೋಗು ಇನ್ನೊಂದು ಬಿಟ್ಟು ಹೋಗು. ನಿಗ್ರ್ಪದ ಸಂಕೇತವೇ ಹಸು, ಹಸು ನಮ್ಮ ಎಂಜಲು ನೀರು ಕುಡಿದರೂ ನಮಗೆ ಅಮೃತ ಕೊಡುತ್ತದೆ. ಅದು ದೇವರ ಅಭಿಷೇಕಕ್ಕೂ ಬರುತ್ತದೆ. ಇಂತಹ ನಿಸರ್ಗದ ದಾನದಲ್ಲಿ ಬದುಕುವ ನಾವು ಬೊಕ್ಷುಕರಾಗದೆ ದಾನಿಗಳಾಗಬೇಕು ಎಂದು ಶ್ರೀಗಳು ತಿಳಿಸಿದರು. 

   ಅನ್ನದಾತ ರೈತರನ ಹತ್ತಿರ ಹಣ ಕೇಳುವ ಸಮಾಜವಿದೆ. ತಾಯಿ ಗರ್ಭದಿಂದ ಭೂಮಿಗೆ ಬಂದ ನಮಗೆ ಏನಾದರೂ ಕೊಟ್ಟು ಹೋಗುವ ವಿಶಾಲ ಹೃದಯ ಇರಬೇಕು. ಸುಂದರವಾದ ಜಗತ್ತು ದೇವರು ಕೊಟ್ಟು ಜೀವನದಂತೆ ಇರುವ ಭೂಮಿಯಲ್ಲಿ ಬದುಕು ಸ್ವರ್ಗವಾಗಬೇಕು. ತಾಯಿ ಗರ್ಭದಿಂದ ಉಸಿರು ಸಹಿತ ಮಗು ಬರುತ್ತದೆ. ಹೆಸರು ಇರುವುದಿಲ್ಲ, ನಾನು ಭೂಮಿಯನ್ನು ಸ್ವರ್ಗ ಎನ್ನುತ್ತೇನೆ. ಏಕೆಂದರೆ ನೀರು, ಗಾಳಿ, ಬೆಳಕು, ಅನ್ನ, ತಾಯಿ ಎದೆಗೆ ಹಾಲನ್ನು ನಿಸರ್ಗ ಕೊಟ್ಟಿದೆ. ಜೀವನ ಸಾರ್ಥಕವಾಗಬೇಕಾದರೆ ಇನ್ನೊಬ್ಬರಿಗೆ ಒಳ್ಳೆಯದನ್ನು ಬಯಸಲಾಗದಿದ್ದರೂ ಕೆಟ್ಟದ್ದನ್ನು ಬಯಸಬಾರದು ಎಂದು ನುಡಿದರು.   ಪರೋಪಕಾರಂ ಇದಂ ಶರೀರಂ ಎಂಬಂತೆ ಪ್ರಕಾಶ ಬುರಡಿಕಟ್ಟಿ ನಾನೊಬ್ಬನೇ ಬದುಕು ಕಟ್ಟಿಕೊಳ್ಳಬಾರದು ನನ್ನ ಜೊತೆ ಬಡವರೂ ಬದುಕು ಕಟ್ಟಿಕೊಳ್ಳಲಿ ಎಂದು ತನ್ನ ವಿವಾಹದ ಜೊತೆಗೆ 132 ಜೋಡಿಗಳ ವಿವಾಹ ಮಾಡಿಕೊಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಜೊತೆಗೆ ಸಂಸ್ಕಾರವಂತ ಬದುಕು ಅವರದಾಗಲಿ ಎಂಬ ಸದುದ್ದೇಶದಿಂದ ಭಗವದ್ಗೀತೆಯನ್ನು ಉಚಿತವಾಗಿ ನೀಡಿ ಹಾಗೂ ಪ್ರತಿ ಜೋಡಿಗೆ 25 ಸಾವಿರ ರೂ.ಸಹಾಧನ ನೀಡಿರುವುದು ಶ್ಲಾಘನೀಯ ಸೇವೆಯಾಗಿದೆ ಎಂದು ಕೊಪ್ಪಳ ಶ್ರೀಗಳು ಹೇಳಿದರು. 

    ಗೌರಿಗದ್ದೆಯ ಅವಧೂತ ವಿನಯ ಗುರೂಜಿ ಮಾತನಾಡಿ, ಒಂದು ಭಗವದ್ಗೀತೆ ಮೋಕ್ಷವನ್ನು ಕೊಟ್ಟರೆ, ಇನ್ನೊಂದು ಭಗವದ್ಗೀತೆ ಸ್ವಾತಂತ್ರ್ಯ ಕೊಟ್ಟಿದ್ದು, ಅದೇ ಅಂಬೇಡ್ಕರ್ ಸಂವಿಧಾನವಾಗಿದೆ. ಆದ್ಯಾತ್ಮಿಕಜ್ಞಾನ ಇದ್ದಾರೆ ಸಾಲದು ಲೌಕಿಕ ಜ್ಷಾನ ಇರಬೇಕು. ಬೌದ್ಧಿಕ ಹಾಗೂ ಆಧ್ಯಾತ್ಮಿಕ ಎರಡು ಒಟ್ಟಿಗೆ ಹೋಗುವುದು ವಿಶೇಷ. ಈ ಹಿಂದೆ ದಬರ್ಾರ್ ಹಾಲ್ನಲ್ಲಿ ಮದುವೆಯಾಗುತ್ತಿತು. ಆದರೇ, ತಾನು ಮದುವೆಯಾದರೇ ಸಾಲದುಎಂದು ಬಸವ ತತ್ವಆಧಾರದ ಮೇಲೆ ಈ ಸಾಮೂಹಿಕ ವಿವಾಹ ಮಾಡಿ ಶರಣ ಸಿದ್ದಾಂತವನ್ನು ಕಾರ್ಯರೂಪಕ್ಕೆ ತಂದಿರುವುದು ಹೆಮ್ಮೆಯ ಸಂಗತಿಯಾಗಿದೆ.ಇನ್ನೊಬ್ಬರ ಹಿತದಲ್ಲಿ ನಮ್ಮ ಹಿತ ನೋಡುವುದು ಜೀವನದ ಗುರಿಯಾಗಿದೆ. ಎಂದರು.  ಶಾಸಕ ಅರುಣಕುಮಾರ ಪೂಜಾರ ಮಾತನಾಡಿ,   ನಗರದಲ್ಲಿ ವಿಶೇಷವಾದ ಸಾಮೂಹಿಕ ವಿವಾಹ ಮಹೋತ್ಸವವನ್ನು ಮಾಡುವ ಮೂಲಕ ವೈಶಿಷ್ಟ್ಯ ಪರಂಪರೆಯನ್ನು ಮುನ್ನಡೆಯಿಟ್ಟ ಪ್ರಕಾಶ ಬುರುಡಿಕಟ್ಟಿ ಅವರಿಗೆ ಕ್ಷೇತ್ರದ ಜನರ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಗವಿಮಠದ ಶ್ರೀಗಳನ್ನು ಕರೆಸಿ 132 ಜೋಡಿಗಳಿಗೂ ಶ್ರೀಗಳಿಂದ ಆಶೀವರ್ಾದ ಮಾಡಿಸಿದ್ದಾರೆ. ಯಾರು ಮಾಡಿದಂತಹ ಕೆಲಸವನ್ನು ಯುವಕ ಪ್ರಕಾಶ ಬುರುಡಿಕಟ್ಟಿ ಅವರು ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ ಎಂದರು.

 ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಷಿ, ಇಸ್ಕಾನ್ ಸಂಸ್ಥೆಯ ರತನಾಕರದಾ, ರಾಜ್ಯ ಎಸ್ಸಿಎಸ್ಟಿ ಮೋಚಾ ಅಧ್ಯಕ್ಷ ಚಲವಾದಿ ನಾರಾಯಣಸ್ವಾಮಿ, ವಿಪ ಸದಸ್ಯ ಆರ್.ಶಂಕರ ಮಾತನಾಡಿದರು. ಲಿಂಗದಹಳ್ಳಿಯ ವೀರಭದ್ರ ಶಿವಾಚಾರ್ಯ ಶ್ರೀಗಳು, ಅಗಡಿ ಗುರುಬಸವಲಿಂಗ ಸ್ವಾಮಿಜಿ, ಐರಣಿಯ ಗಜದಂಡ ಸ್ವಾಮೀಜಿ ಸೇರಿದಂತೆ ಹರಗುರು ಚರಮುತರ್ಿಗಳು ಸಾನಿಧ್ಯ ವಹಿಸಿದ್ದರು. 

    ನಗರಸಭಾ ಅಧ್ಯಕ್ಷೆ ರೂಪಾ ಚಿನ್ನಕಟ್ಟಿ, ಉಪಾಧ್ಯಕ್ಷೆ ಪ್ರಭಾವತಿ ತಿಳವಳ್ಳಿ, ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ನರಸಗೊಂಡರ, ಮಾಜಿ ಅಧ್ಯಕ್ಷ ಚೋಳಪ್ಪ ಕಸವಾಳ, ಮಂಗಳಗೌರಿ ಪೂಜಾರ, ಹನುಮಂತಪ್ಪ ಹೆದ್ದೇರಿ,  ಮಂಜುನಾಥ ಓಲೇಕಾರ ಸೇರಿದಂತೆ ನಗರಸಭಾ ಹಾಲಿ ಮಾಜಿ ಸದ್ಯಸರು ಇದ್ದರು 

ಸುದ್ದಿ ಓದಿ