ಪುಣ್ಯಕೋಟಿ ಮಠದಲ್ಲಿ ವೀರಗಂಗಾಧರ ಭಗತ್ವಾದರ ಮಹಾಮೂರ್ತಿ ಸ್ಥಾಪನೆಗೆ ಚಾಲನೆ
ಪುಣ್ಯಕೋಟಿ ಮಠದಲ್ಲಿ ವೀರಗಂಗಾಧರ ಭಗತ್ವಾದರ ಮಹಾಮೂರ್ತಿ ಸ್ಥಾಪನೆಗೆ ಚಾಲನೆ
ರಾಣೇಬೆನ್ನೂರು 24: ಭಾರತವು ಆಧ್ಯಾತ್ಮದ ತವರೂರು, ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಭಾರತ ಮತ್ತು ಭಾರತೀಯರ ಸಂಸ್ಕೃತಿ ಮತ್ತು ಸಂಸ್ಕಾರ ಪರಂಪರೆಗೆ ತಲೆಬಾಗುತ್ತಲಿದೆ ಅಷ್ಟೇ ಅಲ್ಲದೆ ತಮ್ಮ ಮಾನಸಿಕ ಶಾಂತಿ ನೆಮ್ಮದಿಗಾಗಿ, ಪುಣ್ಯ ಭೂಮಿಯ ಮಣ್ಣು ಕಣ್ಣಿಗೆ ಒತ್ತಿಕೊಂಡು ಸಂತೃಪ್ತಿ ಹೊಂದುತ್ತಿರುವುದು ನಮ್ಮಯ ಹೆಮ್ಮೆಯಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರ್ಪ ಹೇಳಿದರು. ಅವರು, ಗುರುವಾರ ಇಲ್ಲಿಗೆ ಸಮೀಪದ ಕೋಡಿಯಾಲ ಹೊಸಪೇಟೆ, ಪುಣ್ಯಕೋಟಿ ಮಠದಲ್ಲಿ ಜರುಗಿದ ರಂಭಾಪುರಿ ಜಗದ್ಗುರು ವೀರ ಗಂಗಾಧರ ಭಗವತ್ಪಾದರ 36 ಅಡಿ ಎತ್ತರದ,1, ಕೋಟಿ13 ಲಕ್ಷ ವೆಚ್ಚದ ಸಿಮೆಂಟ್ ಮಹಾಮೂರ್ತಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸಂತರು, ಶರಣರು ಸ್ವಾಮಿಗಳು ಸನ್ಯಾಸಿಗಳು, ಎಂದೆಂದಿಗೂ ಸ್ವಾರ್ಥ ಬಯಸಿದವರಲ್ಲ. ಮಾನವನ ಕಲ್ಯಾಣಕ್ಕಾಗಿ, ತಮ್ಮ ತ್ಯಾಗ ಮನೋಭೂಮಿಕೆಯಲ್ಲಿ, ಭಕ್ತರ ಉದ್ಧಾರಕ್ಕಾಗಿ ಸದಾಕಾಲವು ಶ್ರಮಿವಂತವರಾಗಿದ್ದಾರೆ. ಸದಾ ಒಳಿತನ್ನೆ ಬಯಸುವವರಿಗೆ ಮುಕ್ತ ಹಸ್ತದಿಂದ ಸಹಾಯ ನೀಡಲು ಮುಂದೆ ಬರಬೇಕು ಎಂದರು.
ಪುಣ್ಯಕೋಟಿ ಮಠದ ಶ್ರೀಗಳು, ಯೋಗಿಗಳು ಮತ್ತು ತ್ಯಾಗಿಗಳಾಗಿ, ಬರಡು ಭೂಮಿಯನ್ನು, ಕೆಲವೇ ವರ್ಷಗಳಲ್ಲಿ ಪವಿತ್ರ ಪುಣ್ಯಭೂಮಿಯನ್ನಾಗಿ ಮಾಡಿ ತೋರಿಸಿದ್ದಾರೆ ಎಂದರು.
ಆವಿಮುಕ್ತ ತಪೋ ಕ್ಷೇತ್ರ ಭವಿಷ್ಯದ ದಿನಗಳಲ್ಲಿ ಇದೊಂದು ಪ್ರವಾಸಿ ತಾಣದ ಜೊತೆಗೆ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾಗಿ, ಭಕ್ತರ ಕಲ್ಯಾಣವನ್ನು ಮಾಡುವ ಪಾವನ ಕ್ಷೇತ್ರವಾಗಲಿದೆ ಎಂದು ಹೃದಯಸ್ಪರ್ಶಿ ಮಾತನಾಡಿದ ಈಶ್ವರ್ಪ ಅವರು, ಶ್ರೀಗಳಿಗೆ, ತಮ್ಮ ಪೂರ್ವಾಶ್ರಮದ ಹಿರಿಯ ಜಗದ್ಗುರುಗಳ ಪರಂಪರೆ ಇದೆ. ಎಂದರು.
ಭಾರತದ ಪುಣ್ಯಕ್ಷೇತ್ರವಾಗಿ ಪರಿವರ್ತಿತವಾಗಿರುವ ಈ ಮಠದಲ್ಲಿ ಯಾವುದೇ ಜಾತಿ,ಮತ, ಪಕ್ಷ ಭೇದ, ಭಾವ ಇಲ್ಲ ಭಕ್ತರು ಭಾವೈಕ್ಯತೆಯ ಬಂಧುಗಳು, ಇತ್ತೀಚಿನ ಕೆಲವು ವರ್ಷಗಳಲ್ಲಿ ನಮ್ಮ ರಾಜಕಾರಣಿಗಳು ಆ ಜಾತಿ,ಈ ಜಾತಿ, ಎಂದು ಪರಸ್ಪರ ಭೇದ ಭಾವ ಹುಟ್ಟಿಸಿ ತಮ್ಮ ಸ್ವಾರ್ಥತೆಯನ್ನು ಮೆರೆದಿದ್ದಾರೆ. ಇದು ಸಲ್ಲದು ಎಂದು ಕಿಡಿ ಕಾರಿದರು.
ಮುಕ್ತಿಮಂದಿರ ಧರ್ಮ ಕ್ಷೇತ್ರದ ಪಟ್ಟಾಧ್ಯಕ್ಷರು ಹಾಗೂ ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರೊ ಆದ, ಶ್ರೀ ವಿಮಲ ರೇಣುಕ ವೀರ ಮುಕ್ತಿಮನಿ ಶಿವಾಚಾರ್ಯ ಮಹಾಸ್ವಾಮಿಗಳವರು ತಮ್ಮ ದಿವ್ಯ ಸಾನಿಧ್ಯ ನುಡಿಯಾಡಿದರು. ನೆಗಳೂರು ಗುರು ಶಾಂತೇಶ್ವರ ಸಂಸ್ಥಾನ ಹಿರೇಮಠದ ಗುರು ಶಾಂತಲಿಂಗ ಶಿವಾಚಾರ್ಯರು, ನೊಲಿ ಚಂದಯ್ಯ ಗುರು ಪೀಠದ ಜಗದ್ಗುರು ವೃಷಬೇಂದ್ರ ಸ್ವಾಮಿಗಳು, ಕಡೆನಂದಿಹಳ್ಳಿ ಪುಣ್ಯಕ್ಷೇತ್ರದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರು ತಮ್ಮ ದಿವ್ಯ ಸಂದೇಶಾಮೃತ ಸಂದೇಶ ನೀಡಿದರು. ಕೋಡಿಯಾಲ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಗೀತಾ ಮಂಜುನಾಥ್ ಶಿವಮೊಗ್ಗ ಅವರು ಅಧ್ಯಕ್ಷತೆ ವಹಿಸಿದ್ದರು. ನಾಡಿನ ವಿವಿಧ ಕ್ಷೇತ್ರ ಸಾಧಕ ಗಣ್ಯರಾದ ಎಸ್.ಎಸ್.ಕೆ. ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ್ ಮೆಹರವಾಡೆ, ಎಸ್.ಕೆ. ಡಿ. ಆರ್. ಡಿ. ಪಿ, ಯೋಜನಾಧಿಕಾರಿ ಮಂಜುನಾಥ್ ಎಂ.ಪಿ., ದಾವಣಗೆರೆ ಹರಿಹರ ಪ್ರಾಧೀಕಾರದ ಸದಸ್ಯ ಶ್ರೀಮತಿ ವಾಣಿ ಬಕ್ಕೇಶ್, ಉದ್ಯಮಿಗಳಾದ ಗೀರೀಶ್ ಹೆಗ್ಗಪ್ಪನವರ್, ದುಂಡೆಪ್ಪ ಹೆಗ್ಗಪ್ಪನವರ್, ಡಾ:ಹೆಚ್. ವಿಶ್ವನಾಥ್, ಮಂಜುನಾಥ ನರಸಗೊಂಡರ, ಜೆ.ಎಂ. ಚಿಕ್ಕಮಠ, ಸಿದ್ದಣ್ಣ ಚಿಕ್ಕಬಿದರಿ, ಸೇರಿದಂತೆ ಮತ್ತಿತರ ಗಣ್ಯರು, ನಾಡಿನ ಅನೇಕ ಉದ್ಯಮಿಗಳು, ವರ್ತಕರು, ಸಮಾಜ ಸೇವಕರು, ರೈತರು ರೈತ ಮುಖಂಡರು ಗ್ರಾಮದ ಗಣ್ಯರು ಮೊದಲಾದವರನ್ನು ಶ್ರೀ ಮಠದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶ್ರೀಮಠದ ವಟುಗಳು ವೇದಘೋಷ ಮಾಡಿದರು. ಪುಣ್ಯಕೋಟಿ ಮಠದ ಶ್ರೀ ಬಾಲ ಯೋಗಿ ಜಗದೀಶ್ವರ ಮಹಾಸ್ವಾಮಿಗಳವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗ ಸಾಧಕ, ಆರ್. ಬಿ. ಪಾಟೀಲ್ ನಿರೂಪಿಸಿ, ವಂದಿಸಿದರು