ಹೊಸಪೇಟೆ

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯಸ್ ದಿನಾಚರಣೆ

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯಸ್   ದಿನಾಚರಣೆ

ಹೊಸಪೇಟೆ 16: ವೀರಶೈವ ವಿದ್ಯಾವರ್ಧಕ ಸಂಘದ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ. 15ರಂದು ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರ 162ನೇ ಜನ್ಮದಿನದ ಅಂಗವಾಗಿ ಕಾಲೇಜಿನ ಆವರಣದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಇಂಜಿನಿಯರ್ಸ್  ದಿನಾಚರಣೆಯನ್ನು ಆಚರಿಸಲಾಯಿತು.  

ಕಾಲೇಜಿನ ಪ್ಲೇಸ್ಮೆಂಟ್ ಸೆಲ್ನ ವತಿಯಿಂದ ಕೈಗಾರಿಕಾ ಸುರಕ್ಷಿತ ಕ್ರಮಗಳು ಮತ್ತು ಅಪಾಯ ನಿರ್ವಹಣೆ ಕುರಿತು ವಿಶೇಷ ಜಾಗೃತಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಚೆನ್ನೈನ ಸಿ.ಇ.ಎಸ್.ಎಲ್ ತರಬೇತಿ ಕೇಂದ್ರದ ಮುಖ್ಯಸ್ಥ ಮೊಹಮ್ಮದ್ ನಜೀರ್ ಅಲಿ ಕೈಗಾರಿಕಾ ಸುರಕ್ಷಿತ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ತಿಳಿಸಿದರು. ಪ್ರತೀ ವರ್ಷ ದೇಶದಲ್ಲಿ 200 ಕ್ಕೂ ಹೆಚ್ಚು ಕಾಮರ್ಿಕರು ಕೈಗಾರಿಕಾ ಅಪಘಾತಗಳಿಂದ ಸಾಯಲ್ಪಡುತ್ತಾರೆ ಮತ್ತು ಒಂದು ಮಿಲಿಯನ್ನಷ್ಟು ಕಾರ್ಮಿಕರು ಗಾಯಕ್ಕೊಳಗಾಗುತ್ತಾರೆ, ಅದಕ್ಕಾಗಿ ಎಲ್ಲ ಕೈಗಾರಿಕಾ ಕಂಪನಿಗಳಲ್ಲಿ 1000 ಕಾಮರ್ಿಕರಿಗೆ ಒಬ್ಬ ಸೇಫ್ಟಿ ಇಂಜಿನಿಯರ್ನ ಅವಶ್ಯಕತೆ ಇದೆ. ಕೈಗಾರಿಕಾ ಅಪಘಾತಗಳನ್ನು ತಡೆಗಟ್ಟುವಲ್ಲಿ ಅನೇಕ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ನೀತಿ ಕಾಯಿದೆಗಳನ್ನು ಅನುಸರಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಐ.ಟಿ ಕ್ಷೇತ್ರದಲ್ಲೂ ಸೈಬರ್ ಭದ್ರತೆ ಎಥಿಕಲ್ ಹ್ಯಾಕಿಂಗ್ ಎಂಬ ಸುರಕ್ಷಿತ ಕ್ರಮಗಳ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಹೇಳಿದರು.  

ಪಿ.ಡಿ.ಐ.ಟಿ.ಯ ಪ್ರಾಂಶುಪಾಲ ಡಾ.ಯು.ಎಂ.ರೋಹಿತ್ ಮಾತನಾಡಿ ವಿದ್ಯಾರ್ಥಿಗಳಿಗೆ ಇಂತಹ ಉಪನ್ಯಾಸಗಳು ತಮ್ಮ ಉದ್ಯೋಗದ ಹಾಗೂ ಸಂದರ್ಶನ ಸಮಯದಲ್ಲಿ ಹೆಚ್ಚು ಉಪಯುಕ್ತವಾಗಲಿವೆ ಎಂದು ಹೇಳಿದರು. 

ಪ್ರತಿಷ್ಟಿತ ಕಂಪನಿಗಳ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.  ಉಪಪ್ರಾಂಶುಪಾಲರಾದ ಪ್ರೊ. ಪಾರ್ವತೀ ಕಡ್ಲಿ, ಅನೀಶ್ ಕುಮಾರ್, ಪ್ಲೇಸ್ಮೆಂಟ್ ಆಫೀಸರ್ಗಳಾದ ಡಾ. ಪ್ರತಾಪ್ ಕುಲಕರ್ಣಿ ಹಾಗೂ ಪ್ರೊ. ಮಾಲತೇಶ್.ಕೆ ಮತ್ತು ಪ್ರಾಧ್ಯಾಪಕ ವೃಂದ ಹಾಗೂ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 

ಸುದ್ದಿ ಓದಿ