ಅಮೆರಿಕ ಆಯೋಗದ ವರದಿ ಆರೋಪ ತಿರಸ್ಕರಿಸಿದ ಭಾರತ
ಸಿರುಗುಪ್ಪ 24: ಭಾರತದ ದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳು ನಿರಂತರವಾಗಿ ಬೆದರಿಕೆ ಎದುರಿಸುತ್ತಿವೆ ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕ ಆಯೋಗವು ಯುಎಸ್ಸಿಐ ಆರ್ ಎಫ್ ಆರೋಪಿಸಿದೆ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಮೌಲ್ಯಮಾಪನ ಸ್ಥಿತಿಯ ನವಿಕೃತ ವರದಿಯಲ್ಲಿ ಯುಎಸ್ಸಿಐ ಆರ್ ಎಫ್ ಈ ವಿಷಯ ಎಂದು ಜನ ಅಭಿಪ್ರಾಯ ಮುಖಂಡರು ಸಮಾಜ ಕಾರ್ಯಕರ್ತ ಅಬ್ದುಲ್ ನಬಿ ತಿಳಿಸಿದರು.
ಆದರೆ ಭಾರತ ಈ ಹಿಂದೆಯೇ ಯು ಎಸ್ ಸಿ ಐ ಆರ್ ಎಫ್ ವರದಿಯನ್ನು ಸಾರಸಗಟ್ಟಾಗಿ ತಿರಸ್ಕರಿಸಿದ್ದು ವರದಿಯು ನಿಖರವಾಗಿಲ್ಲ ಪಕ್ಷಪಾತದಿಂದ ಕೂಡಿದೆ ಎಂದು ಹೇಳಿದೆ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ತಾಯಿದೆಯಲ್ಲಿ ವ್ಯಾಖ್ಯಾನಿಸಿದಂತೆ ಭಾರತದಲ್ಲಿ ವ್ಯವಸ್ಥಿತವಾಗಿ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಭಾರತವನ್ನು ನಿರ್ಧಿಷ್ಟ ಕಾಳಜಿಯ ದೇಶವೆಂದು ಗೊತ್ತು ಪಡಿಸಬೇಕು ಎಂದು ಅಮೆರಿಕದ ವಿದೇಶಾಂಗ ಇಲಾಖೆಗೆ ಯು ಎಸ್ ಸಿ ಐ ಆರ್ ಎಫ್ ತನ್ನ 2022ರ ವಾರ್ಷಿಕ ವರದಿಯಲ್ಲಿ ಶಿಫಾರಸು ಮಾಡಿದೆ ಆದರೆ ಅಮೆರಿಕದ ವಿದೇಶಾಂಗ ಇಲಾಖೆಯು ಇಲ್ಲಿಯವರೆಗೆ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ನಿರಾಕರಿಸಿದೆ 2022ರಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಪರಿಸ್ಥಿತಿಗಳು ಕಳಪೆಯಾಗಿದೆ.
ಭಾರತ ಸರ್ಕಾರವು ರಾಷ್ಟ್ರೀಯ ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಮುಸ್ಲಿಮರು ಕ್ರಿಶ್ಚಿಯನ್ನರು ಸಿಕ್ಕರು ದಲಿತರು ಮತ್ತು ಆದಿವಾಸಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರುವ ಧಾರ್ಮಿಕ ಮತಾಂತರ ಅಂತರ್ಮಿ ಯ ಸಂಬಂಧಗಳು ಮತ್ತು ಗೋ ಹತ್ಯೆಯನ್ನು ಗುರಿಯಾಗಿಸುವ ಕಾನೂನುಗಳನ್ನು ಉತ್ತೇಜಿಸುವುದನ್ನು ಮತ್ತು ಜಾರಿಗೊಳಿಸುವುದನ್ನು ಮುಂದುವರಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಅಲ್ಪಸಂಖ್ಯಾತರಿಗೆ ಕಿರುಕುಳ ಆಸ್ತಿ ಮುಟ್ಟುಗೋಲು ಬಂಧನ ಸೇರಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಪರವಾಗಿ ವಾದಿಸುತ್ತಿರುವವರ ಧ್ವನಿಯನ್ನು ದಮನ ಮಾಡಲಾಗುತ್ತಿದೆ ಹಣಕಾಸು ಕೊಡುಗೆ ನಿಯಂತ್ರಣ ಕಾಯ್ದೆ ಎಫ್ಸಿಆರ್ಎ ಯೆಡಿ ಸರ್ಕಾರಿ ತರ ಸಂಸ್ಥೆಗಳನ್ನು ಗುರಿ ಮಾಡಲಾಗುತ್ತಿದೆ ವರದಿ ಹೇಳಲಾಗಿದೆ ಎಂದು ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸಮಿತಿ ಸದಸ್ಯ ಜನಾಭಿಪ್ರಾಯ ಮುಖಂಡ ಅಬ್ದುಲ್ ನಬಿ ಹೇಳಿದರು