ಯುವಕ ಸನ್ಮಿತ್ರರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಲೋಕದರ್ಶನ ವರದಿ
ಶಿಗ್ಗಾವಿ 16: ಪಟ್ಟಣದ ಮಹಬೂಬ್ ನಗರ ಯುವಕ ಸನ್ಮಿತ್ರರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಯುವ ಮುಖಂಡ ಗುರುನಾಥ ಅಣ್ಣಿಗೇರಿ, ಮಾತನಾಡಿ ಕೇವಲ ಭಾಷಣಗಳಿಂದ ದೇಶ ಕಟ್ಟಲಾಗುವುದಿಲ್ಲ ವಾಸ್ತವ ಸಮಸ್ಯೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅನುಕೂಲವಾಗುವ ಕಾರ್ಯಕ್ರಮಗಳನ್ನು ಕೇಂದ್ರದಲ್ಲಿರುವ ಸರಕಾರಗಳು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಾಮಾಜಿಕ ಹೋರಾಟಗಾರ ಮಂಜುನಾಥ್ ಮಣ್ಣಣ್ಣವರ್, ಇಂಡಿಯನ್ ರೈಸಿಂಗ್ ಸ್ಟಾರ್ ಫೌಂಡೇಶನ್ ಅಧ್ಯಕ್ಷ ನಿಸಾರ್ ಅಹಮದ್ ತೂಕಲ್ಲಿ ಉಪಸ್ಥಿತರಿದ್ದರು. ಸುರೇಶ್ ಬಂಡಿವಡ್ಡರ, ಕರಿಯಪ್ಪ ಮದುಕರ, ಪರಶುರಾಮ ಭಜಂತ್ರಿ, ಬಸವರಾಜ ಬಂಡಿವಡ್ಡರ, ಸತೀಶ್ ಭಜಂತ್ರಿ,ರವಿ ಬಂಡಿವಡ್ಡರ, ಮಂಜು ಜವಳಗಟ್ಟಿ, ಸಿರಾಜ್ ಕಳಸ, ಮಹ್ಮದ್ ರಫೀಕ್, ಮಂಜುನಾಥ ಭಜಂತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು