ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮ ಉದ್ಘಾಟನೆ
ಲೋಕದರ್ಶನ ವರದಿ
ಶಿಗ್ಗಾವಿ 31: ಸ್ವಾತಂತ್ರ್ಯ ಬಂದು 78 ವರ್ಷವಾದರೂ ಸಹಿತ ಯಾವ ಸರಕಾರವು ಕಾರ್ಮಿಕರ ರಿನಿವ್ಹಲ್ ಮತ್ತು ನೊಂದಣಿ ಮಾಡಲಿಕ್ಕೆ ಕಾರ್ಮಿಕರ ಹಾಜರಾತಿ ಮತ್ತು ವೇತನ ರಶೀದಿ ಕೇಳಿರಿಲಿಲ್ಲ ಈ ಸರಕಾರ ಕೇಳುತ್ತಿದೆ ಎಂದು ಸಮತಾ ಸೈನಿಕ ಧಳದ ರಾಜ್ಯಾಧ್ಯಕ್ಷ ಸಣ್ಣಕ್ಕಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮೊದಲಿಗೆ ಕಾರ್ಮಿಕರಲ್ಲಿ ಎರಡು ವಿಧಗಳಿವೆ ಅಸಂಘಟಿತ ಮತ್ತು ಸಂಘಟಿತ ಕಾರ್ಮಿಕರಿಗೆ ಅನೇಕ ವ್ಯತ್ಯಾಸಗಳಿವೆ ಅವುಗಳನ್ನು ಸಂಬಂಧಪಟ್ಟ ಮುಖ್ಯಮಂತ್ರಿ ಮತ್ತು ಸಚಿವರಿಗೆ ತಿಳಿಸಿ ಹೇಳಬೇಕಾದ ಅನಿವಾರ್ಯತೆ ಇದೆ ಅದಾಗ್ಯೂ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸದಿದ್ದರೆ ಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಮುಖ್ಯೋಪಾಧ್ಯಾಯ ಬಿ.ಬಿ.ಕಟ್ಟಿಮನಿ ಮಾತನಾಡಿ ಸಮಾಜಕ್ಕೊಂದು ಸಂಘಟನೆ ಇಂದಿನ ದಿನಗಳಲ್ಲಿ ಇವೆ ಅವೆಲ್ಲವುಗಳಿಗೆ ಹೊರತಾಗಿ ಸಮತಾ ಸೈನಿಕ ಧಳ ಸಂಘಟನೆ ಇದ್ದು ಇದು ಯಾವುದೇ ಸಮಾಜಕ್ಕೆ ಸೀಮಿತವಾದ ಸಂಘಟನೆ ಅಲ್ಲ ಇದು ಸಮಾಜದ ತುಳಿತಕ್ಕೆ ಒಳಗಾದ, ಅನ್ಯಾಯಕ್ಕೆ ಒಳಗಾದ, ಕಡುಬಡವರ ಮತ್ತು ನಿರ್ಗತಿಕರಿಗೆ ಸಮಾಜದ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸಿ ಅವರನ್ನು ಮುಖ್ಯವಾಹಿನಿಗೆ ತರುವುದಾಗಿದೆ ಎಂದರು.
ಮುಖಂಡ ಪಕ್ಕೀರಪ್ಪ ಕುಂದೂರ ಮಾತನಾಡಿ ಸಂಘಟನೆ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸಂಘಟನೆ ಬಲಿಷ್ಟವಾಗುತ್ತದೆ ಹಾಗೂ ಎಲ್ಲರೂ ಭಯ ಪಡುತ್ತಾರೆ ಎಂದರು.
ಪ್ರಾಸ್ತಾವಿಕವಾಗಿ ತಾಲುಕ ಸಮತಾ ಸೈನಿಕ ಧಳದ ಅಧ್ಯಕ್ಷ ಡಿ.ಎಸ್.ಓಲೇಕಾರ ಮಾತನಾಡಿದರು.
ರಾಜ್ಯ ಉಪಾಧ್ಯಕ್ಷ ಕಿರಣ, ಜಿಲ್ಲಾ ಅಧ್ಯಕ್ಷ ಅಶೋಕ ಕಾಳೆ, ಜಿವಿಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಕಂಕನವಾಡ, ಸೇರಿದಂತೆ ಎಲ್ಲ ತಾಲೂಕಿನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಡಿ.ಎಸ್.ಓಲೇಕಾರ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿ ವಂದಿಸಿದರು