ಸಿರುಗುಪ್ಪ

ಸರಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟಡಗಳ ಶಾಸಕ ಸೋಮಲಿಂಗಪ್ಪ ಉದ್ಘಾಟನೆ

ಸರಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟಡಗಳ ಶಾಸಕ ಸೋಮಲಿಂಗಪ್ಪ ಉದ್ಘಾಟನೆ

ಸಿರುಗುಪ್ಪ 21: ಸರಕಾರಿ ಯೋಜನೆಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದು ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ಶಾಸಕ ಎಂ ಎಸ್ ಸೋಮಲಿಂಗಪ್ಪ ಹೇಳಿದರು. 

ಬಳ್ಳಾರಿ ರಸ್ತೆ ಸಿರುಗುಪ್ಪದಲ್ಲಿ ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆಯು 1.60ಕೋಟಿ ರೂ. ವೆಚ್ಚದಲ್ಲಿ ತೆಕ್ಕಲಕೋಟೆ ಹೊನ್ನೂರಮ್ಮ ಎಂ ಸಿದ್ದಪ್ಪಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣ ಗ್ರಂಥಾಲಯ ಹಾಗೂ ವಿಜ್ಞಾನ ತರಗತಿ ಕೊಠಡಿಗಳು ಮತ್ತು ಪ್ರಯೋಗಾಲಯ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭ ಕಾಲೇಜಿನ ಬೃಹತ್ ಸಭಾಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.ಐತಿಹಾಸಿಕ ನಮ್ಮ ಪ್ರಖ್ಯಾತ ಕಬ್ಬಿಣದ ಬಳ್ಳಾರಿ ಜಿಲ್ಲೆಯ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ ಕಾಲೇಜಿಗೆ ಸಿರುಗುಪ್ಪ ತಾಲೂಕಿಗೆ ಕೀತರ್ ತರಬೇಕು ಎಂದು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ, ಬಸಣ್ಣ ನಾಯಕ ಜವಳಗೇರಿ ಅವರು ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕರಾದ ಕೆ ಎಂ ಚಂದ್ರಕಾಂತ, ರಾಮಕೃಷ್ಣ, ಯಮನೂರಪ್ಪ, ಪ್ರಥಮದಜರ್ೆ ಗುತ್ತಿಗೆದಾರ ಕೆ ನಾಗಭೂಷಣರೆಡ್ಡಿ, ಬಿಜೆಪಿ ಅಧ್ಯಕ್ಷ ಆರ್ ಸಿ ಪಂಪನಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಸಿರಿಗೇರಿ ಮಲ್ಲನಗೌಡ, ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸದಸ್ಯ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ, ಮಹಾದೇವ ಚಾಗಿ, ವೀರೇಶಗೌಡ, ಪವನ್, ಕೊಟ್ರಪ್ಪ, ರಮಣ, ಪೂಜಾರಿ ರುದ್ರಪ್ಪ, ಅಂಬುತಾಯಿ, ಮಹೇಶ್ವರಿ ಕಾಲೇಜು ಅಭಿವೃದ್ಧಿ ಮಂಡಳಿಯ ಸರ್ವ ಸದಸ್ಯರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತಿತರ ಮುಖಂಡರಿದ್ದರು 

ಸುದ್ದಿ ಓದಿ