ಅಥಣಿ

ಸದೃಢ ಮನಸ್ಸಿನಲ್ಲಿ ಸಾಧಿಸುವ ಛಲ ಹುಟ್ಟುತ್ತದೆ

ಸದೃಢ ಮನಸ್ಸಿನಲ್ಲಿ ಸಾಧಿಸುವ ಛಲ ಹುಟ್ಟುತ್ತದೆ

ಕಾಗವಾಡ ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಕ ವಿವೇಕಾನಂದ ಚನ್ನಾಳ ಹೇಳಿಕೆ: ಉಗಾರ ವಲಯ ಮಟ್ಟದ ಕ್ರೀಡಾಕೂಟ

ಶೇಡಬಾಳ 26: ಸದೃಢ ಶರೀರದಲ್ಲಿ ಸದೃಢವಾದ ಮನಸ್ಸಿರುತ್ತದೆ. ಸದೃಢವಾದ ಮನಸ್ಸಿದ್ದಾಗ ಸಾಧಿಸುವ ಛಲ ಮೂಡಿ ಬರುತ್ತದೆ. ಕಾರಣ ಪ್ರತಿಯೊಬ್ಬ ವಿದ್ಯಾರ್ಥಿಯು ಕ್ರೀಡಾಕೂಟಗಳಲ್ಲಿ ಭಾಗವಹಿಸಿ, ಆರೋಗ್ಯವಂತರಾಗಿರುವಂತೆ ಕಾಗವಾಡ ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಕ ವಿವೇಕಾನಂದ ಚನ್ನಾಳ ಹೇಳಿದರು.

ಅವರು ಮಂಗಳವಾರ ದಿ. 27 ರಂದು ಶೇಡಬಾಳ ಪಟ್ಟಣದ ಸನ್ಮತಿ ವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ, ಸಾರ್ವಜನಿಕರ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಾಗವಾಡ ಇವುಗಳ ಸಂಯುಕ್ತ ಆಶ್ರಯಲ್ಲಿ ಜರುಗಿದ 2022-23 ನೇ ಸಾಲಿನ ಉಗಾರ ವಲಯ ಮಟ್ಟದ ಕ್ರೀಡಾಕೂಟಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ವಿದ್ಯಾರ್ಥಿಗಳು ತಮ್ಮಲ್ಲಿರುವ ಕ್ರೀಡಾ ಪ್ರತಿಭೆಯನ್ನು ಹೊರಹೊಮ್ಮಿಸಲು ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿದ್ದು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಉತ್ತಮ ಆರೋಗ್ಯ ಪಡೆದುಕೊಳ್ಳುವಂತೆ ಕರೆ ನೀಡಿದರು. 

ಸನ್ಮತಿ ವಿದ್ಯಾಲಯದ ನಿರ್ದೇಶಕ ವಿನೋದ ಬರಗಾಲೆ, ಅಶ್ವತ ಪಾಟೀಲ, ಅಜೀತ ನಾಂದ್ರೆ ಪೂಜೆ ಸಲ್ಲಿಸಿ, ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ, ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿಕೊಂಡರು. ದೈಹಿಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಉಗಾರ ವಲಯದ 8 ಶಾಲೆಗಳ ವಿದ್ಯಾಥರ್ಿಗಳು ಈ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರು. 

 ದೈಹಿಕ ಶಿಕ್ಷಣ ಪರಿವೀಕ್ಷಕ ವಿವೇಕಾನಂದ ಚನ್ನಾಳ, ವಿನೋದ ಬರಗಾಲೆ, ಅಶ್ವತ ಪಾಟೀಲ, ಅಜೀತ ನಾಂದ್ರೆ, ಎನ್.ಎಸ್. ಪಾಟೀಲ, ಎಂ.ಎನ್. ಕಾಳೇನಟ್ಟಿ, ಎಲ್.ವೈ ಚೌಗುಲಾ ಸೇರಿದಂತೆ ಆಯಾ ಶಾಲೆಗಳ ದೈಹಿಕ ಶಿಕ್ಷಕರು, ಶಿಕ್ಷಕಿಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು. 

ಎಂ.ಕೆ. ಕಾಂಬಳೆ ಸ್ವಾಗತಿಸಿದರು. ಎಚ್.ಡಿ. ಮುತಾಲಿಕ ವಂದಿಸಿದರು. ಕೆ.ಎ. ಪಾಟೀಲ ನಿರೂಪಿಸಿದರು 

ಸುದ್ದಿ ಓದಿ