ಅಡುಗೆ ಕೌಶಲ್ಯದಿಂದ ಮಕ್ಕಳ ಮನಸೂರೆಗೊಳ್ಳಬಲ್ಲಿರಿ
ಮೈತ್ರಾದೇವಿ ವಸ್ತ್ರದ ಅಭಿಮತ: ಅಡುಗೆ ಸ್ಪರ್ಧೆಯಲ್ಲಿ ಯರಗಟ್ಟಿ ಸರಕಾರಿ ಶಾಲೆ ಪ್ರಥಮ
ಸವದತ್ತಿ: ದೈನಂದಿನ ಜೀವನದಲ್ಲಿ ನಮ್ಮ ಮನೆಯಲ್ಲಿ ಹೇಗೆ ಅಡುಗೆ ವಿವಿಧ ಬಗೆಯಲ್ಲಿ ಹಬ್ಬ ಹರಿದಿನಗಳಲ್ಲಿ ಮಾಡ್ತಿವೋ ಇಲಾಖೆ ಗೊತ್ತು ಪಡಿಸಿದ ಅಡುಗೆ ಶುಚಿ ರುಚಿಯಲ್ಲಿ ಇದ್ದುದರಲ್ಲಿ ವಿಭಿನ್ನ ಅಡುಗೆ ಮಾಡಿ ಮಕ್ಕಳಿಗೆ ಉಣ ಬಡಿಸಿದಾಗ ಅವರಲ್ಲಿ ಆಗುವ ಸಂತೋಷ ಅಷ್ಟಿಷ್ಟಲ್ಲ ಅದು ವರ್ಣನಾತೀತ. ಈ ದಿನ ತಾವೆಲ್ಲ ಮಾಡಿರುವ ವಿಭಿನ್ನ ಬಗೆಯ ಅಡುಗೆಗಳು ಬಹುಮಾನಕ್ಕೆ ಪಾತ್ರವಾಗುವ ಜೊತೆಗೆ ಮುಂಬರುವ ದಿನಗಳಲ್ಲಿ ಮಕ್ಕಳಿಗೂ ಈ ರೀತಿಯ ವೈವಿಧ್ಯಮಯ ಅಡುಗೆ ಉಣ ಬಡಿಸುವ ಹಾಗಾಗಲಿ. ಇದು ಸ್ಪರ್ಧೆಯಾಗದೇ ಬೇರೆ ಬೇರೆ ಶಾಲೆಯವರು ಯಾವ ರೀತಿ ಅಡುಗೆ ಮಾಡಿರುವರೋ ಅದು ನಿಮಗೂ ಕೂಡ ಅನ್ವಯವಾಗಲಿ. ನೀವು ಕೂಡ ಅವುಗಳನ್ನು ಅಳವಡಿಸಿಕೊಂಡು ಅಡುಗೆ ಮಾಡುವಂತಾಗಲಿ ಎಂದು ಸವದತ್ತಿ ತಾಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಮೈತ್ರಾದೇವಿ ವಸ್ತ್ರದ ತಿಳಿಸಿದರು.
ಅವರು ಪಟ್ಟಣದ ಜಿ.ಜಿ.ಚೋಪ್ರಾ ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದ ತಾಲೂಕು ಮಟ್ಟದ ಅಕ್ಷರ ದಾಸೋಹ ಅಡುಗೆದಾರರಿಗೆ ಏರ್ಪಡಿಸಲಾಗಿದ್ದ ಅಡುಗೆ ಸ್ಪರ್ಧೆಯನ್ನು ಕುರಿತು ಪ್ರಾಸ್ತಾವಿಕವಾಗಿ ಮಾತನಾಡುತ್ತ ಇಲಾಖೆೆಯ ಉದ್ದೇಶಗಳನ್ನು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರೀಕಟ್ಟಿ ಸವದತ್ತಿ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಪೆಟ್ಲೂರ. ಮುಖ್ಯೋಪಾಧ್ಯಾಯ ಯು.ಎಸ್.ನರಗುಂದ, ಸಿ.ಆರ್.ಪಿ ಗಳಾದ ರಾಮಚಂದ್ರಪ್ಪ ನದಾಫ, ಎಚ್.ಎಲ್.ರವಿ ನಲವಡೆ, ಗುರುದೇವಿ ಮಲಕನ್ನವರ, ಎಂ.ಎಂ.ಮುರನಾಳ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳ, ಮುಖ್ಯೋಪಾಧ್ಯಾಯ ಎಂ.ಬಿ.ಕಮ್ಮಾರ, ಎಸ್.ವ್ಹಿ.ಜೋಶಿ, ಎಂ.ಜಿ.ಕಡೇಮನಿ ಮೊದಲಾದವರು ಉಪಸ್ಥಿತರಿದ್ದರು.
ಜ್ಯೋತಿ ಬೆಳಗಿಸಿ ಉದ್ಘಾಟನಾ ಪರ ಮಾತುಗಳನ್ನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರೀಕಟ್ಟಿ ಶಾಲಾ ಅಡುಗೆಯವರು ಹೊಂದಿರುವ ವೃತ್ತಿ ಕೌಶಲ, ಆಸಕ್ತಿ, ಕಾಳಜಿ ಮತ್ತು ವಿವಿಧ ಮಾದರಿಗಳ ಅಡುಗೆಯನ್ನು ಸರಳವಾಗಿ ಮತ್ತು ವೇಗವಾಗಿ ತಯಾರಿಸುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಈ ಕಾರ್ಯಕ್ರಮ ನಿಜಕ್ಕೂ ಉತ್ತಮವಾದುದು. ತಮ್ಮ ಉತ್ತಮ ಕಾಳಜಿ ನಾವೀಣ್ಯತೆಯಿಂದ ಕೂಡಿದ ಅಡುಗೆ ತಯಾರಿಕೆ ಬಹುಮಾನಕ್ಕೆ ಒಳಪಡುವ ಜೊತೆಗೆ ಬೇರೆ ಬೇರೆ ಶಾಲೆಯವರು ಯಾವ ರೀತಿಯ ಅಡುಗೆಯ ಹೊಸತನ ಮಾಡಿರುವರು ಎಂಬುದನ್ನು ಕಂಡುಕೊಳ್ಳಲು ಇದೊಂದು ವೇದಿಕೆ. ಎಲ್ಲರೂ ಚನ್ನಾಗಿ ಮಾಡಿರುವಿರಿ. ಹೀಗೆಯೇ ಭಾಗವಹಿಸಿ ಮುಂದಿನ ಹಂತಗಳಲ್ಲಿ ಕೂಡ ಬಹುಮಾನಿತರಾಗಿರಿ ಎಂದು ಶುಭ ಕೋರಿದರು.
ತಾಲೂಕಿನ ವಿವಿಧ ಶಾಲೆಗಳಲ್ಲಿ ಕ್ಲಸ್ಟರ್ ಹಂತದಲ್ಲಿ ಜರುಗಿ ಬಹುಮಾನಿತರಾದ ಅಡುಗೆಯವರು ಈ ಸ್ಪಧರ್ೆಯಲ್ಲಿ ಭಾಗವಹಿಸಿದ್ದರು. ಈ ಶಾಲೆಗಳಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯರಗಟ್ಟಿ ಪ್ರಥಮ ಸ್ಥಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮರಕುಂಬಿ ದ್ವಿತೀಯ ಸ್ಥಾನ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶ್ರೀರಂಗಪುರ ತೃತೀಯ ಸ್ಥಾನ ಪಡೆಯುವ ಮೂಲಕ ಬಹುಮಾನವನ್ನು ನಗದು ಹಾಗೂ ಪ್ರಮಾಣಪತ್ರ ನೀಡುವ ಮೂಲಕ ಬಹುಮಾನಗಳನ್ನು ವೇದಿಕೆಯಲ್ಲಿ ವಿತರಿಸಲಾಯಿತು.
ನಂದಿನಿ ಕೊಡ್ಲಿಮಠ ಹಾಗೂ ಸ್ಪೂರ್ತಿ ಮುಳ್ಳಾಳ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹೇಳಿದರು. ಗುರುಮಾತೆ ಕುಶಾಲ ಬನ್ನೆನ್ನವರ ನಿರೂಪಿಸಿದರು. ಸಿ.ಆರ್.ಪಿ ರಾಮಚಂದ್ರಪ್ಪ ಸ್ವಾಗತಿಸಿದರು. ಉಮೇಶ ನರಗುಂದ ವಂದಿಸಿದರು