ಆರೋಗ್ಯವಾಗಿದ್ದೇನೆ, ವದಂತಿಗಳಿಗೆ ಕಿವಿಗೊಡಬೇಡಿ: ಮಾಮನಿ
ಸವದತ್ತಿ 15: ವಿಧಾನಸಭೆ ಉಪಸಭಾಧ್ಯಕ್ಷರಾದ ಆನಂದ ಮಾಮನಿಯವರು ಆರೋಗ್ಯವಾಗಿದ್ದು, ಚೆನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವದಾಗಿ ಮಾಹಿತಿ ನೀಡುವ ಮೂಲಕ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.
ಕಳೆದೆರಡು ದಿನಗಳಿಂದ ಕೆಲವು ಸ್ಥಳೀಯ ಮಾಧ್ಯಮಗಳಲ್ಲಿ ಆನಂದ ಮಾಮನಿಯವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಉಹಾಪೋಹ ಕೇಳಿ ಬಂದಿತ್ತು. ಅದು ಸುಳ್ಳು ವದಂತಿಯಾಗಿದ್ದು, ನಾನು ಆರೋಗ್ಯವಾಗಿದ್ದೇನೆ ಎಂದು ಮಾಮನಿಯವರು ಸ್ಪಷ್ಟಪಡಿಸಿದ್ದಾರೆ.
ಮನುಷ್ಯನಿಗೆ ಜೀವನದಲ್ಲಿ ಸ್ವಾಭಾವಿಕವಾಗಿ ಆರೋಗ್ಯದಲ್ಲಿ ಏರಿಳಿತವಾಗುವುದು ಸಹಜ. ಆ ನಿಟ್ಟಿನಲ್ಲಿ ಕೆಲವು ವರ್ಷಗಳಿಂದ ನನಗೆ ಸಕ್ಕರೆ ಕಾಯಿಲೆಯಿರುವದರಿಂದ ಅದಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದೇನೆ. ನನ್ನ ಆರೋಗ್ಯ ಕುರಿತು ಕೆಲವು ಮಾಧ್ಯಮಗಳಲ್ಲಿ ಸುಳ್ಳು ವದಂತಿಗಳು ಬರುತ್ತಿದ್ದು, ಕುಲದೇವರಾದ ಜಾಲಿಕಟ್ಟಿ ಬಸವೇಶ್ವರ ಆಶೀರ್ವಾದ , ರಾಜ್ಯದ ಎಲ್ಲ ದೇವತೆಗಳ ಆಶೀರ್ವಾದ, ತಂದೆ ತಾಯಿಯವರ ಆಶೀರ್ವಾದ, ಸವದತ್ತಿಯ ಕಾಡ ಸಿದ್ದೇಶ್ವರ ಮತ್ತು ಕ್ಷೇತ್ರದ ಯಲ್ಲಮ್ಮನ ಆಶೀವರ್ಾದದಿಂದ ನಾನು ಗುಣಮುಖನಾಗುತ್ತಿದ್ದೇನೆ. ದಯಮಾಡಿ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು.
ಕುಟುಂಬದ ಸದಸ್ಯರೆಲ್ಲರೂ ನನ್ನ ಬೆನ್ನಿಗೆ ನಿಂತಿದ್ದು, ಕ್ಷೇತ್ರದ ಎಲ್ಲರ ಆಶೀರ್ವಾದ ಮತ್ತು ಮಾದ್ಯಮದ ಸ್ನೇಹಿತರ ಸಹಕಾರವಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರು ಮತ್ತು ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪನವರು ಮತ್ತು ಶಾಸಕ ಸ್ನೇಹಿತರು ದೂರವಾಣಿ ಮೂಲಕ ಸಂಪಕರ್ಿಸಿ ಆರೋಗ್ಯದ ಕುರಿತು ಚರ್ಚೆಸಿ ಸಲಹೆ ನೀಡುವ ಮೂಲಕ ನನಗೆ ಮಾನಸಿಕ ಸ್ಥೈರ್ಯವನ್ನು ತುಂಬಿದ್ದಾರೆ.
ನಾನು ಚೆನೈನಲ್ಲಿ ಇರುವುದು ನಿಜವಾಗಿದ್ದು, ಆರೋಗ್ಯ ಚಿಂತಾಜನಕ ಮತ್ತಾವುದು ಏನೂ ಇಲ್ಲ. ಇಲ್ಲಿನ ವೈದ್ಯರನ್ನು ಸಂಪಕರ್ಿಸಿ ಆರೋಗ್ಯದ ಕುರಿತು ಪರಿಶೀಲನೆ ಮಾಡಿಸಿಕೊಂಡು ಔಷಧಿಗಳನ್ನು ಪಡೆದು ಆದಷ್ಟು ಬೇಗನೆ ಬೆಂಗಳೂರಿಗೆ ಆಗಮಿಸಿ ತಮ್ಮೆಲ್ಲರನ್ನು ಭೇಟಿಯಾಗುತ್ತೇನೆ.
ಆನಂದ ಮಾಮನಿ, ವಿಧಾನಸಭೆ ಉಪಸಭಾಧ್ಯಕ್ಷರು (ವಿಡಿಯೋ ಸಂದೇಶ)
ತಾಲೂಕಿನ ಮಾಮನಿ ಕುಟುಂಬದ ಅಭಿಮಾನಿಗಳು ಯಾವುದೆ ಆತಂಕ ಪಡುವ ಕಾರವಿಲ್ಲ. ಆನಂದ ಮಾಮನಿಯವರು ಕೂಡಲೆ ಗುಣಮುಖರಾಗಿ ಸವದತ್ತಿಗೆ ಆಗಮಿಸಿ ತಮ್ಮ ಸೇವೆಗೆ ಮತ್ತೆ ಅಣಿಯಾಗಲಿದ್ದಾರೆ ಎಂದು ಅವರ ಕುಟುಂಬದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಆರೋಗ್ಯ ಚೇತರಿಕೆಯಲ್ಲಿ ಅವರಿಗೆ ವಿಶ್ರಾಂತಿ ಅತ್ಯವಶ್ಯವಾಗಿದೆ ಎಂದು ವೈದ್ಯರು ಸಲಹೆ ನೀಡಿರುವದರಿಂದ ಕೆಲವು ದಿನಗಳ ಕಾಲ ಅವರು ವಿಶ್ರಾಂತಿ ಪಡೆದುಕೊಳ್ಳಲಿದ್ದು, ಕ್ಷೇತ್ರದ ಮಹಾಜನತೆ ಸಹಕರಿಸಬೇಕೆಂದು ಕುಟುಂಬಸ್ಥರು ವಿನಂತಿಸಿದ್ದಾರೆ